BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

“TRASFER RULE”S VIOLATION IN BMTC, CENTRAL OFFICE..!? BMTC ಕೇಂದ್ರ ಕಚೇರಿಯಲ್ಲಿ “ಖುರ್ಚಿ”ಗೇ ಅಂಟಿಕೂತವರಿಂದ “ಅಂದಾದರ್ಬಾರ್” ..?!

"ಸೇವಾ ನಿಯಮ-ವರ್ಗಾವಣೆ ಸುತ್ತೋಲೆ"ಗಳು ಕೇಂದ್ರ ಕಚೇರಿಯಲ್ಲಿರೋರಿಗೆ ಅನ್ವಯಿಸೋದಿಲ್ವೇ ..?!

ಬೆಂಗಳೂರು:”ದೀಪದ ಬುಡದಲ್ಲೇ ಸದಾ ಕತ್ತಲು “ ಎನ್ನೋ ಗಾಧೆ BMTC ಎಂಡಿಗಳಿಗೆ( ಯಾರೇ ಆ ಸ್ಥಾನಕ್ಕೆ ಬರಲಿ..) ಸರಿಯಾಗೇ ಒಪ್ಪುತ್ತೆ ಅನ್ಸುತ್ತೆ.

ನಿಗಮದ ವ್ಯಾಪ್ತಿ ಯಲ್ಲಿರುವ ಕಚೇರಿಗ ಳಲ್ಲಿ ಹುಳುಕು ಹುಡು ಕುವ  ಮುನ್ನ ಮುಖ್ಯಸ್ಥರೆನಿಸಿಕೊಂಡವರು,  ಒಮ್ಮೆ..ಅಟ್ಲೀಸ್ಟ್  ಒಮ್ಮೆಯಾದ್ರೂ ಕಣ್ಣಳತೆಯಲ್ಲಿರುವ  ತಮ್ಮ  ಕಚೇರಿ ವ್ಯವಸ್ಥೆಯನ್ನೇ ದುರ್ಬೀನ್ ಹಾಕ್ಕೊಂಡು ಪರಿಶೀಲಿಸುವುದು ಒಳ್ಳೇದೆನಿಸುತ್ತೆ.

ಒಂದ್  “ರಿಯಾಲಿಟಿ ಚೆಕ್/ ಕ್ರಾಸ್ ಚೆಕ್” ಮಾಡಿದ್ರೆ, ಅನೇಕ ವರ್ಷಗಳಿಂದ ಕೇಂದ್ರ  ಕಚೇರಿಯಲ್ಲೇ  ನಡೆದುಕೊಂಡು ಬಂದಿರುವ ಅವ್ಯವಸ್ಥೆ ಕಣ್ಣಿಗೆ ರಾಚುತ್ತದೆ. ಸೇವಾ ನಿಯಾಮವಳಿ ಗಳನ್ನು ಗಾಳಿಗೆ ತೂರಿ ಕೆಲವು ಹುದ್ದೆಗಳಲ್ಲಿ  ಅನೇಕ ವರ್ಷಗಳಿಂದಲೂ ಗೂಟಾ ಹೊಡ್ಕಂಡು ಸೆಟ್ಲ್ ಆಗಿರೋರ ಪರಿಚಯವಾಗುತ್ತದೆ.

ಹೌದು..ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನಡೆದುಕೊಂಡು ಬಂದಿರುವ ಅನೇಕ ರೀತಿಯ  ಅಕ್ರಮಗಳಲ್ಲಿ ನಾವು ಈಗ ಹೇಳಲು ಹೊರಟಿರುವ ಅಕ್ರಮ ಒಂದ್ರೀತಿ  ಡಿಫರೆಂಟ್.ಅಂದ್ಹಾಗೆ ಇದು ಕದ್ದು ಮುಚ್ಚಿ ನಡೆಯುತ್ತಿರುವ “ಅಕ್ರಮ”ವೇನಲ್ಲ.ಕಣ್ಣಿಗೆ ರಾಚುವ ರೀತಿಯಲ್ಲಿ ನಡೆದುಕೊಂಡು ಬಂದಿರುವ ಅವ್ಯವಸ್ಥೆ..(ಇದು ನಿಯಮಬಾಹೀರವಾಗಿರುವುದರಿಂದ ಇದನ್ನು ಅಕ್ರಮ ಎನ್ನಲೇಬೇಕಾಗ್ತದೆ).

ಬಿಎಂಟಿಸಿ ಕೇಂದ್ರ ಕಚೇರಿಯ ಆಯಕಟ್ಟಿನ  ಸ್ಥಳದಲ್ಲಿ ಸಿಬ್ಬಂದಿ ಸೇವಾನಿಯಾಮವಳಿಯನ್ನೆಲ್ಲಾ ಗಾಳಿಗೆ ತೂರಿ ಅನೇಕರು  ಮುಂದುವರೆದಿರುವುದೇ  ಅಕ್ರಮದ ಸಾರಾಂಶ.ಇಡೀ ವ್ಯವಸ್ಥೆಗೆ ಸಾಣೆ ಹಿಡಿಯೊಕ್ಕೆ ಹೊರಟಿರುವ ಮೇಡಮ್ ಸತ್ಯವತಿ  ತಮ್ಮ ಕಚೇರಿ ಹಾಗೂ ಇತರೆ ಅಧಿಕಾರಿಗಳ ಕಚೇರಿಯನ್ನು  “ಮಾವನ ಮನೆ” ಮಾಡ್ಕೊಂಡು ಬೇರೆಲ್ಲೂ ಕದಲದೇ ಇಲ್ಲಿಯೇ  ಬೀಡುಬಿಟ್ಟಿರುವ ಕೆಲವು ಸಿಬ್ಬಂದಿಗೆ ಚುರುಕು ಮುಟ್ಟಿಸುವ ಕೆಲಸ ಮಾಡ್ಬೇಕಿದೆ ಎನ್ಸುತ್ತೆ.

ಬಹುಷಃ ಸತ್ಯವತಿ ಮೇಡಮ್ ಅವರಿಗೇನೆ ಗೊತ್ತಿರ್ಲಿಕ್ಕಿಲ್ಲ ಅವರ ಕಚೇರಿಯಲ್ಲಿರೋರು ಎಷ್ಟು ವರ್ಷದಿಂದ ಅದೇ ಸ್ಥಳದಲ್ಲಿದ್ದಾರೆಂದು( ಕಾರ್ಯಒತ್ತಡದಿಂದಾಗಿ ಇಂಥಾ ಸಂಗತಿ ಬಗ್ಗೆ ಅವರು ಯೋಚಿಸಿರಲಿಕ್ಕಿಲ್ಲ ಅನ್ಸುತ್ತೆ).ಸಿಬ್ಬಂದಿಯ ಸರ್ವಿಸ್  ರೆಕಾರ್ಡ್ಸ್ ತರಿಸಿಕೊಂಡು ಪರಿಶೀಲಿಸಿದ್ರೆ ಸತ್ಯ ಅವರಿಗೆ ಗೊತ್ತಾಗ್ಬೋದು.

ಬಹುತೇಕರು ಕನಿಷ್ಟ ಎಂದ್ರೂ ಹತ್ತು ವರ್ಷಗಳಿಂದಲೂ ಅದೇ ಕಚೇರಿ, ಅದೇ ಖುರ್ಚಿಯಲ್ಲಿ ಗೂಟಾ ಹೊಡ್ಕಂಡು ಕೂತಿದ್ದಾರೆ.ಅದು ಸೇವಾನಿಯಾಮವಳಿಗಳಿಗೆ ಪೂರಕವಾಗಿ ನಡೆಯುತ್ತಿದೆಯಾ..? ಖಂಡಿತಾ ಇಲ್ಲ ಎನ್ನುತ್ತಾರೆ ಬಿಎಂಟಿಸಿಯ ಸಿಬ್ಬಂದಿ.ಎಲ್ಲರಿಗೂ ಒಂದೇ ರೂಲ್ಸ್ ಇರ್ಬೇಕು.ಆದ್ರೆ ಮೇಡಮ್ ಕಚೇರಿಯಲ್ಲಿ ಇರೋ ಸಿಬ್ಬಂದಿಗೊಂದು ಇತರರಿಗೊಂದು ಅಂದ್ರೆ ಅದ್ಹೇಗೆ..? ಮೇಡಮ್ ಕಚೇರಿಯಲ್ಲೇ ಸೇವಾನಿಯಾಮವಳಿಗಳು ಉಲ್ಲಂಘನೆಯಾಗುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಗಾಧೆ ನೆನಪಿಸುತ್ತೆ.

ಇನ್ನು ಭದ್ರತಾ-ಜಾಗೃತಾಧಿಕಾರಿಯಾಗಿರುವ ಐಪಿಎಸ್ ರಾಧಿಕಾ ಮೇಡಮ್ ಅವರ ಕಚೇರಿಯಲ್ಲೂ ಇದೇ ವ್ಯವಸ್ಥೆಯಿದೆಯಂತೆ.ಅಲ್ಲಿರುವವರಲ್ಲಿ ಕೆಲವರು ಅನೇಕ ವರ್ಷಗಳಿಂದ ಖುರ್ಚಿ ಬಿಟ್ಟು ಕದಲಿಲ್ಲವಂತೆ. ಬೇರೆ ಯಾರಿಗೂ ಅವಕಾಶ ಮಾಡಿಕೊಡ್ತಿಲ್ಲ.ಅಷ್ಟ್ ದೊಡ್ಡ ಜಮ್ಕಾನ ಹಾಕ್ಕೊಂಡು ಕೂತ್ ಬಿಟ್ಟಿದ್ದಾರೆ.

ಕೇಂದ್ರ ಕಚೇರಿಯ ದುರವಸ್ಥೆ ಇಷ್ಟಕ್ಕೆ ನಿಲ್ಲೊಲ್ಲ. ಸಿಟಿಎಂ ಗಳಿಬ್ಬರ ಕಚೇರಿಯಲ್ಲೂ ಇದೇ ಅವ್ಯವ ಸ್ಥೆ ಇದೆಯಂತೆ.ಇಲ್ಲಿರುವ ಶೇಕಡಾ 60ಕ್ಕಿಂತ ಹೆಚ್ಚು ಸಿಬ್ಬಂದಿ ಜಾಗ ಬಿಟ್ಟು ಕದಲಿಲ್ಲವಂತೆ. 10  ವರ್ಷಕ್ಕಿಂತಲೂ  ಹೆಚ್ಚು ಅವಧಿಯಿಂದ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿರುವವರೇ ಹೆಚ್ಚಿದ್ದಾರೆ ಎನ್ನಲಾಗ್ತಿದೆ. ಬೇರೆಯವರಿಗೆ ಅನ್ವಯಿಸುವಂಥ ಸೇವಾನಿಯಾಮವಳಿ ಕೇಂದ್ರ ಕಚೇರಿಯಲ್ಲಿರುವ ಸಿಬ್ಬಂದಿಗೆ ಮಾತ್ರ ಅಪ್ಲೈ ಆಗುತ್ತಿಲ್ಲವೇಕೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ

ಸೋಮಾರಿಗಳಾಗಿ ಹೋಗಿರುವ ಕೇಂದ್ರ ಕಚೇರಿ ಸಿಬ್ಬಂದಿ..!!:ಕೇಂದ್ರ ಕಚೇರಿಯಲ್ಲಿ ಅನೇಕ ವರ್ಷಗಳಿಂದ ಗೂಟಾ ಹೊಡೆದುಕೊಂಡಿರುವವರಲ್ಲಿ ಬಹುತೇಕ ಸಿಬ್ಬಂದಿ ಸೋಮಾರಿಗಳಾಗಿ ಹೋಗಿದ್ದಾರೆ.ಡಿಪೋಗಳಲ್ಲಿ ಅಥವಾ ಬಸ್ ಗಳಿಗೆ ನಿಯೋಜನೆಗೊಂಡರೆ ಮೈಬಗ್ಗಿಸಬೇಕಾಗ್ತದೆ. ಟೈಮಿಂಗ್ಸ್ ಮೆಂಟೇನ್ ಮಾಡಬೇಕಾಗ್ತದೆ ಎಂದು ದೊಡ್ಡವರಿಗೆ ಬಕೆಟ್ ಹಿಡಿದೋ,ಕೆಲವರ ಕೈ ಬೆಚ್ಚಗೆ ಮಾಡಿಯೋ ಅಲ್ಲಿಂದ ತಮ್ಮನ್ನು ಡಿಸ್ಟರ್ಬ್ ಮಾಡದಂತ ಸ್ಥಿತಿ ನಿರ್ಮಿ ಸಿಕೊಂಡಿದ್ದಾರಂತೆ.ಈಗಲೂ ಕೆಲವು ಅಧಿಕಾರಿಗಳಿಗೆ ಕಿಕ್ ಬ್ಯಾಕ್ ರೂಪದಲ್ಲಿ ಮಂತ್ಲಿ ಕೊಟ್ಟಿ ಕೊಂಡು ಮುಂದುವರೆದಿದ್ದಾರೆ ನ್ನುವ ಆಪಾದನೆಗಳಿವೆ.ಮೇಲಾಧಿಕಾರಿಗಳು ಕೂಡ ಅಲ್ಲಿರುವ ಸ್ಟಾಫ್ ಕೊಡುವ ಮಂತ್ಲಿ ಇಸ್ಕೊಂಡು ಇಲ್ಲಿನವರನ್ನು ಡಿಸ್ಬರ್ಬ್ ಮಾಡ್ತಿಲ್ಲವಂತೆ.

ಹೊರಗಿನವರಿಗೂ ಎಂಟ್ರಿ ಕೊಡ್ತಿಲ್ಲವಂತೆ.ಈ ವಿಷಯ  ಬಹಿರಂಗವಾಗದಂತೆ ಅಥವಾ ಎಂಡಿ ಗಮನ ಕ್ಕೆ ಬಾರದಂತ ವ್ಯವಸ್ಥೆ ನಿರ್ಮಿಸಿಕೊಂಡಿರುವುದು ವಿಪರ್ಯಾಸ. ಈ ಕಾರಣಕ್ಕೇ  ಬರೋ ಐಎಎಸ್ ಹಾಗೂ ಐಪಿಎಸ್ ಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುವ  ಗೋಜಿಗೇನೆ ಹೋಗ್ತಿಲ್ಲ,ಹಾಗಾಗಿ  ಕೇಂದ್ರ ಕಚೇರಿಯಲ್ಲಿ ನಡೆಯುತ್ತಿರುವ ಆದ್ವಾನವಾಗಲಿ-ಅವ್ಯವಸ್ಥೆಯಾಗಲಿ ಎಲ್ಲೂ ಮುನ್ನಲೆಗೆ ಬಂದಿಲ್ಲ. ಸತ್ಯವತಿ ಮೇಡಮ್ ಅವರ ಅವಧಿಯಲ್ಲಾದ್ರೂ ಇದಕ್ಕೆ ಮುಕ್ತಿ ಸಿಗಲಿ ಎನ್ನುವುದು ಸಿಬ್ಬಂದಿಯ ಅಹವಾಲು.

ಕೇಂದ್ರ ಕಚೇರಿಗಳಲ್ಲಿ ಗೂಟಾ ಹೊಡೆದುಕೊಂಡಿದ್ರೆ ಎರಡು ರೀತಿ ಬೆನಿಫಿಟ್ಸ್ ಅಂತೆ..!?: ಕೇಂದ್ರ ಕಚೇರಿಗಳಲ್ಲಿ ಸುಧೀರ್ಘ ಅವಧಿಯಿಂದ ಕೆಲಸ ಮಾಡೋರಿಗೆ ಎರಡು ರೀತಿಯ ಬೆನಿಫಿಟ್ಸ್ ಇದೆಯಂತೆ.ಒಂದು ಅವರಿಗೆ ಡ್ತೈವರ್ಸ್-ಕಂಡಕ್ಟರ್ಸ್ ಗಳಂತೆ ಶಿಕ್ಷೆ-ದಂಡ-ಅಮಾನತು-ವಜಾದಂಥ ಯಾವುದೇ ದಂಡನೆಗಳು ಆಗೊಲ್ಲ.ತಮ್ಮ ಸರ್ವಿಸ್ ನ್ನು ಅನಾಯಾಸವಾಗಿ ಕಳೆಯುತ್ತಾರೆ.ಇನ್ನೊಂದು ಬೆನಿಫಿಟ್ ಪ್ರಮೋಷನ್. ಡ್ರೈವರ್ಸ್-ಕಂಡಕ್ಟರ್ಸ್ ಗಳಿಗೆ ಅವರ ಮೇಲೆ ಯಾವುದೇ ರೀತಿಯ ಆರೋಪಗಳಿಲ್ಲದೆ ಹೋದಲ್ಲಿ ಮಾತ್ರ ಪ್ರಮೋಷನ್ ಸಿಗುತ್ತದೆ.ಆದರೆ ವಿಪರ್ಯಾಸವೆಂದರೆ ಆರೋಪವಿಲ್ಲದೆ ಕೆಲಸ ಮಾಡೋರು ಸಿಗೋದೇ ಅಪರೂಪ.ಹಾಗಿದ್ದರೂ ಅವರಿಗೆ ಒಂದ್ ಅಥವಾ ಎರಡು ಪ್ರಮೋಷನ್ಸ್ ಸಿಗೋದೇ ಹೆಚ್ಚು.

ಆದರೆ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡೋರಿಗೆ ಇಂಥಾ ಸಮಸ್ಯೆಗಳೇ ಇರೊಲ್ಲ.ಕಾಲಕಾಲಕ್ಕೆ ಪ್ರಮೋಷನ್ಸ್ ಸಿಗುತ್ತಲೇ ಇರುತ್ತೆ.ಎಲ್ಲಾ ಬೆನಿಫಿಟ್ಸ್ ಕಡ್ಡಾಯವಾಗಿ ದೊರೆಯುತ್ತಲೇ ಇರುತ್ತೆ.ಬೇಸಿಗೆ-ಚಳಿಗಾಗಲ-ಮಳೆಗಾಲ ಲೆಕ್ಕಿಸದೆ ಕಷ್ಟಪಟ್ಟು ಕೆಲಸ ಮಾಡುವ ಡ್ರೈವರ್ಸ್-ಕಂಡಕ್ಟರ್ಸ್ ಗೆ ಪುಡಿಗಾಸಿನ ಸಂಬಳ,ಆನೆ ಹೊಟ್ಟೆಗೆ ಅರೆಕಾಸಿ ನ ಮಜ್ಜಿಗೆ ರೂಪದಲ್ಲಿ ಸೌಲಭ್ಯಗಳು  ಸಿಕ್ಕರೆ  ಕೇಂದ್ರ ಕಚೇರಿಯಲ್ಲಿ ಟೈಂ ನೋಡ್ಕಂಡು ಕೆಲಸ ಮಾಡುವ ಸಿಬ್ಬಂದಿಗೆ ಎಲ್ಲಾ ರೀತಿಯ ಪ್ರಯೋಜನ-ಸೌಲಭ್ಯ ಸಿಗುತ್ತಾ ಬಂದಿದೆ ಎನ್ನುವುದು ದುರಂತವಷ್ಟೇ ಅಲ್ಲ, ದುರಾದೃಷ್ಟಕರ ಕೂಡ.

ಕೇಂದ್ರ ಕಚೇರಿಯಲ್ಲಿ ಕುಳಿತು ಬೆಂಚ್ ಬಿಸಿ ಮಾಡುವುದನ್ನೇ ಕಾಯಕ ಮಾಡಿಕೊಂಡಿರುವ ಸಿಬ್ಬಂದಿ  ಸಾಮ ರ್ಥ್ಯವನ್ನು ಓರೆಗೆ ಹಚ್ಚುವ-ಮೌಲ್ಯಮಾಪನ ದ ಕೆಲಸ ಮೇಡಮ್ ಸತ್ಯವತಿ ಮಾಡಿದ್ದೇ ಆದಲ್ಲಿ ಅವರಿಗೆ ಗಾಬರಿ ಹುಟ್ಟಿಸುವ ಸಂಗತಿಗಳು ಬಯಲಾಗಬಹುದೇನೋ..? ಡ್ರೈವರ್ಸ್-ಕಂಡಕ್ಟರ್ಸ್ ಗಳ ಹೋಲಿಕೆಯಲ್ಲಿ ಇವರೆಷ್ಟು ಸೋಮಾರಿಗಳು-ಸಮಯಸಾಧಕರು-ಅವಕಾಶವಾದಿಗಳು ಎನ್ನುವ ಸತ್ಯ ಮನವರಿಕೆ ಆಗಬಹುದೇನೋ..

ಬಿಎಂಟಿಸಿಯ ಹಾದಿ ತಪ್ಪಿರುವ ಆರ್ಥಿಕತೆಯನ್ನು ಹಳಿಗೆ ತರುವ ಕೆಲಸಕ್ಕೆ ಹೆಚ್ಚು ಒತ್ತು ನೀಡುತ್ತಿ ರುವ ಮೇಡಮ್ ಸತ್ಯವತಿ ಹಳ್ಳ ಹಿಡಿದು ಹೋಗಿರುವ ಆಡಳಿತ ವ್ಯವಸ್‍ಥೆ ಅದರಲ್ಲೂ ಕೇಂದ್ರ ಕಚೇರಿಯ ಸಿಬ್ಬಂದಿ ವ್ಯವಸ್ಥೆಗೆ ಸಾಣೆ ಹಿಡಿಯುವ ಕೆಲಸ ಪರಿಣಾಮಕಾರಿಯಾಗಿ ಮಾಡಿದ್ರೆ ಪ್ರಯೋಜನಕ್ಕೆ ಬರುವ “ಕಾಳು”ಗಳ್ಯಾವು, ಸಂಸ್ಥೆಗೆ ಭಾರವಾಗಿರುವ “ಜೊಳ್ಳು”ಗಳ್ಯಾವು ಎನ್ನುವುದು ಗೊತ್ತಾಗಿಬಿಡ್ತದೆ..ಅದನ್ನು ಮೇಡಮ್ ಮಾಡಲಿ ಎನ್ನುವುದು ಬಿಎಂಟಿಸಿ ಕಾರ್ಮಿಕ ಸಿಬ್ಬಂದಿಯ ಒಕ್ಕೊರಲ ಮನವಿ..

Spread the love

Related Articles

Leave a Reply

Your email address will not be published.

Back to top button
Flash News