BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

SUPER DANCE OF BMTC LADIES../ ಅಬ್ಬಾ…!ವ್ಹಾವ್..!ಎಂಥಾ ಪ್ರತಿಭೆ:ರಾ.ರಾ.ರಕ್ಕಮ್ಮ ಹಾಡಿಗೆ BMTC ಮಹಿಳಾ ಸಿಬ್ಬಂದಿ ಸಖತ್ ಸ್ಟೆಪ್

BMTC ಮಹಿಳಾ ಸಿಬ್ಬಂದಿಯ ಸಖತ್ ಸ್ಟೆಪ್ ಸಿಕ್ಕಾಪಟ್ಟೆ ವೈರಲ್..ಎಲ್ಲೆಡೆ ಮೆಚ್ಚುಗೆ..ಟ್ಯಾಲೆಂಟ್ ಗೆ ಬಹುಪರಾಖ್..

ಬೆಂಗಳೂರು: ಸದಾ ಕೆಲಸದ ಒತ್ತಡದಲ್ಲೇ ಮುಳುಗಿ ಹೋಗಿರುತ್ತಾರೆ ಬಿಎಂಟಿಸಿ ಸಿಬ್ಬಂದಿ.ಡ್ರೈವರ್ಸ್-ಕಂಡಕ್ಟರ್ಸ್ ಬಸ್ ಗಳ ಡ್ಯೂಟಿಯಲ್ಲಿ ಬ್ಯುಸಿ ಇದ್ದರೆ ವರ್ಕ್ ಶಾಪ್ ಗಳಲ್ಲಿ ಸಿಬ್ಬಂದಿ ಮತ್ತೊಂದ್ ರೀತಿಯಲ್ಲಿ ಬ್ಯುಸಿ ಇರ್ತಾರೆ.ಅದರ ನಡುವೆ ವರ್ಕ್ ಪ್ರೆಷರ್ ಬೇರೆ.ಬಹುತೇಕ ಹೆದರಿಕೊಂಡೇ ಕೆಲಸ ಮಾಡಬೇಕಾದ ಸನ್ನಿವೇಶ ಕೂಡ ಸಾರಿಗೆ ನಿಗಮಗಳಲ್ಲಿರುತ್ವೆ.ಕೆಲವೊಮ್ಮೆ ಅವರು ಹೇಳುವ ಕಥೆ ಕೇಳಿಸಿಕೊಂಡ್ರೆ ಇಂಥಾ ಕೆಲಸ ಯಾರಿಗೆ ಬೇಕಪ್ಪ ಎನಿಸೋದು ಕೂಡ ಅಷ್ಟೇ ಸತ್ಯ.

ಸಂದಿಗ್ಧ ಸನ್ನಿವೇಶದಲ್ಲೇ ದಿನನಿತ್ಯ ಕೆಲಸ ಮಾಡುವ( ಮೊದಲೆಲ್ಲಾ ಹೀಗಿರಲಿಲ್ಲ.. ಆ ರೀತಿ ಕೆಲಸ ಮಾಡುವ ವಾತಾವರಣವನ್ನು ಕೆಲವು ಮನುಷ್ಯತ್ವವಿಲ್ಲದ ಅಧಿಕಾರಿಗಳು ಮಾಡಿಟ್ಟಿದ್ದಾರೆ ಅಷ್ಟೇ). ಸಿಬ್ಬಂದಿಗೆ ಕುಟುಂಬದೊಡನೆ ನೆಮ್ಮದಿಯಾಗಿ ಕಾಲ ಕಳೆಯೊಕ್ಕಾಗೊಲ್ಲ..ಹಬ್ಬ ಹರಿದಿನಗಳನ್ನು ಸಂಭ್ರಮಿಸ್ಲಿಕ್ಕೂ ಆಗೊಲ್ವಂತೆ.ಮನೆಯಲ್ಲೇ ಈ ರೀತಿ ಇದ್ದರೆ ಇನ್ನು ಹೆದರಿಕೊಂಡೇ ಕೆಲಸ ಮಾಡುವಂಥ ವಾತಾವರಣ ಇರುವ ಕಚೇರಿ-ವರ್ಕ್ ಶಾಪ್ ಗಳಲ್ಲಿ ಸಂತೋಷದಿಂದ ಇರೋದು ಕನಸಿನ ಮಾತೇ ಸರಿ.

ಆದರೂ ಸಾರಿಗೆ ನಿಗಮಗಳ ಕಾರ್ಮಿಕರು ತಮ್ಮ ಒತ್ತಡ-ದಣಿವು ಸುಧಾರಿಸಿಕೊಳ್ಳಲು ಕೆಲವು ಸನ್ನಿವೇಶಗಳನ್ನು ಸೃಷ್ಟಿಸಿಕೊಂಡಿದ್ದಾರೆ.ಆಯುಧಪೂಜೆ-ದಸರಾ-ಗಣೇಶ-ದೀಪಾವಳಿ ಇದರಲ್ಲಿ ಪ್ರಮುಖವಾದಂತವು.ದಸರಾ-ಆಯುಧಪೂಜೆ ವೇಳೆ   ಎಷ್ಟೇ ತೊಂದರೆಯಾದರೂ ತಮ್ಮ ಜೇಬಿನಿಂದಲೇ ಹಣ ಖರ್ಚು ಮಾಡಿ ಬಸ್ –ಡಿಪೋಗಳನ್ನು ಸಿಂಗರಿಸಿ ಸಂಭ್ರಮಿಸ್ತಾರೆ.ಗಣೇಶೋತ್ಸವ ವೇಳೆಯೂ ಗಣೇಶನನ್ನು ಕೂರಿಸಿ ಕುಣಿದು ಕುಪ್ಪಳಿಸಿ ತಮ್ಮ ಮನೋವೇದನೆಯನ್ನು ದೂರ ಮಾಡಿಕೊಳ್ಳುತ್ತಾರೆ.

ಈ ಬಾರಿಯೂ ಹಾಗೆಯೇ ಆಗಿದೆ.ಬಿಎಂಟಿಸಿ ಡಿಪೋ ಒಂದರಲ್ಲಿ ಗಣೇಶನನ್ನು ಕೂರಿಸಿದ್ದ ವೇಳೆ ಅಲ್ಲಿನ ಮಹಿಳಾ ಸಿಬ್ಬಂದಿ ಕುಣಿದು ಕುಪ್ಪಳಿಸಿದ್ದಾರೆ.ಕಿಚ್ಚ ಸುದೀಪ ಅಭಿನಯದ ವಿಕ್ರಾಂತ್ ರೋಣ ಚಿತ್ರದ ರಾ..ರಾ..ರಕ್ಕಮ್ಮ  ಹಾಡಿಗೆ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.ಇಬ್ಬರು ಮಹಿಳಾ ಸಿಬ್ಬಂದಿಯ ಡ್ಯಾನ್ಸ್ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಬಿಎಂಟಿಸಿಯಲ್ಲಿ ಕೆಲಸ ಮಾಡೋರಲ್ಲಿ ಇಂತದ್ದೊಂದು ಟ್ಯಾಲೆಂಟ್ ಇದೆಯಾ ಎಂದು ಎಲ್ಲಾ ಹುಬ್ಬೇರಿಸಿ ಮಾತನಾಡುವಂತಾಗಿದೆ,ಅಂದ್ಹಾಗೆ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಧ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

Spread the love

Related Articles

Leave a Reply

Your email address will not be published.

Back to top button
Flash News