BreakingTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

4 LACK BRIBE: LOKAYUKTHA TRAPS BBMP JOINT COMMISSIONOR(WEST): ಲೋಕಾಯುಕ್ತ ಖೆಡ್ಡಾಕ್ಕೆ ಕೆಎಎಸ್ ಅಧಿಕಾರಿ-4 ಲಕ್ಷ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್..

ಲೋಕಾಯುಕ್ತ ಮೇಜರ್ ಕಾರ್ಯಾಚರಣೆ: ಲೋಕಾಕ್ಕೆ ಬಲ ಸಿಗುತ್ತಿದ್ದಂತೆ ಕೆಎಎಸ್ ಅಧಿಕಾರಿ ಮೊದಲ ಬಲಿ

ಬೆಂಗಳೂರು:ಇದು ಬಹಳ ಹಿಂದೆಯೇ ಆಗ್ಬೇಕಿತ್ತು..ತಡವಾಯ್ತು ಎನ್ನಿಸುತ್ತೆ. ತಾನೊಬ್ಬ ಕೆಎಎಸ್ ಅಧಿಕಾರಿ..ಒಂದು ಪ್ರಮುಖ ಬಿಬಿಎಂಪಿ ವಲಯದ ಜಂಟಿ ಆಯುಕ್ತ  ಎನ್ನೋ ವಿವೇಚನೆಯನ್ನೇ ಮರೆತು ಸಣ್ಣಪುಟ್ಟ ಕೆಲಸಗಳಿಗೂ ಹಣಕ್ಕೆ ನಾಲಿಗೆ ಚಾಚುತ್ತಿದ್ದ  ಈ ಅಧಿಕಾರಿ ಯಾವತ್ತೋ ಈ ರೀತಿ ಸಿಕ್ಕಿ ಹಾಕಿಕೊಳ್ಳಬೇಕಿತ್ತು.ಆದ್ರೆ ತಡವಾದ್ರೂ ಪರ್ವಾಗಿಲ್ಲ,ಸರಿಯಾಗೇ ಸಿಕ್ಕಾಕೊಂಡು ಜಗತ್ತಿನ ಮುಂದೆ ಬೆತ್ತಲಾಗಿದ್ದಾನೆ.ರಾಜ್ಯ ಸರ್ಕಾರ ಎಸಿಬಿಯನ್ನು ರದ್ದು ಮಾಡಿ ಲೋಕಾಯುಕ್ತಕ್ಕೆ ಬಲ ನೀಡುತ್ತಿದ್ದಂತೆ ಮೈ ಕೊಡವಿ ಎದ್ದುನಿಂತವರಂತೆ ಲೋಕಾಯುಕ್ತ ಸಿಬ್ಬಂದಿ ಸರಿಯಾದ ಮಿಕವನ್ನೇ ಖೆಡ್ಡಾಕ್ಕೆ ಕೆಡವಿ ಬೀಗಿದ್ದಾರೆ.

ಹೌದು..ಲೋಕಾಯುಕ್ತಕ್ಕೆ ಗೌರವ ತರುವಂತ ಕೆಲಸ ನಡೆದಿದೆ.ಎಸಿಬಿಯನ್ನು ಬಲಪಡಿಸ್ಲಿಕ್ಕಾಗಿ ಲೋಕಾಯುಕ್ತದ ನಡವನ್ನೇ ಮುರಿದಿತ್ತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ.ಲೋಕಾಯುಕ್ತದ ನೈತಿಕತೆಯನ್ನೇ ಅಣಕಿಸುವ,ಅವರ ಆತ್ಮಸ್ಥೈರ್ಯವನ್ನೇ ಕುಗ್ಗಿಸುವ ಕೆಲಸವಾಗಿತ್ತು.ಆಮೇಲೆ ಲೋಕಾಯುಕ್ತ ಎಷ್ಟೊಂದು ನಿಷ್ಕ್ರೀಯವಾಯಿತೆಂದರೆ ಅಂಥದ್ದೊಂದು ಸಂಸ್ಥೆ ಇದೆಯೇ ಎನ್ನುವಷ್ಟರ ಮಟ್ಟಿಗೆ ಇಲಾಖೆ ಮೌನವಾಯಿತು.ಯಾವುದೇ ಕಾರ್ಯಾಚರಣೆ-ದಾಳಿಗಳೇ ಸುಳಿವೇ ಇಲ್ಲವಾಯಿತು.ಲೋಕಾಯುಕ್ತ ಇದ್ದರೆಷ್ಟು..ಬಿಟ್ಟರೆಷ್ಟು ಎನ್ನುವ ರೀತಿಯಲ್ಲಿ ಸಮಾಜದಲ್ಲಿ ಚರ್ಚೆ-ವಿಶ್ಲೇಷಣೆ ಆರಂಭವಾದವು.ಅದನ್ನು ಮುಚ್ಚುವುದೆ ಲೇಸು ಎನ್ನುವಂಥ ಮಾತು ಉಳಿಸಬೇಕಾದ ಸರ್ಕಾರದಿಂದಲೇ ಕೇಳಿಬರಲಾರಂಭಿಸಿತ್ತು.

ಆದರೆ ಎಸಿಬಿ ಎನ್ನುವ ಸಂಸ್ಥೆ ಬಗ್ಗೆ ಕೇಳಿ ಬರಲಾರಂಭಿಸಿದ್ದ ವ್ಯಾಪಕ ಭ್ರಷ್ಟಾಚಾರದ ಆರೋಪ ಹಾಗೂ ಇದಕ್ಕಿಂತ ಲೋಕಾಯುಕ್ತ ವನ್ನೇ ಬಲಪಡಿಸಿ ಎಂದು ವ್ಯಕ್ತವಾಗಲಾರಂಭಿಸಿದ ಅಭಿಪ್ರಾಯ ಕ್ರೋಢೀಕರಿಸಿ ಕೋರ್ಟ್ ಯಾವಾಗ ಎಸಿಬಿಯನ್ನು ಮುಚ್ಚಿ.ಆ ಬಲವನ್ನೇ ಲೋಕಾಯುಕ್ತಕ್ಕೆ ನೀಡಬೇಕೆಂದು ಯಾವಾಗ ಆದೇಶಿಸಿತೋ,ವರ್ಷಗಳಷ್ಟು ಕಾಲ ತಮ್ಮ ಸಿಟ್ಟು-ಅಸಹನೆ-ಆಕ್ರೋಶ ವನ್ನು ಬಚ್ಚಿಟ್ಟುಕೊಂಡಿದ್ದ ಲೋಕಾಯುಕ್ತ ಇಲಾಖೆ ಸಿಡಿದೆದ್ದು ನಿಲ್ತು.ಮೈಕೊಡವಿ ಎದ್ದು ನಿಲ್ತು.ತನ್ನ ಕೆಪಾಸಿಟಿ ಏನನ್ನೋದನ್ನು ಪ್ರೂವ್ ಮಾಡ್ಲಿಕ್ಕೆ ಕಾಯುತ್ತಿದ್ದ ಅವಕಾಶ ಬಳಸಿಕೊಳ್ತು.ಅದರ ಪರಿಣಾಮವೇ ಇಂದು ನಡೆದ ಲೋಕಾಯುಕ್ತ ದಾಳಿ.

ಲೋಕಾಯುಕ್ತಕ್ಕೆ ಬಲ ಕೊಟ್ಟ ಮೇಲೆ ನಡೆದ ಮೊದಲ ದಾಳಿ ಇದು.ಈ ದಾಳಿಗೆ ಮಿಕವಾಗಿದ್ದು ಕೆಎಎಸ್ ಅಧಿಕಾರಿ. ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರಾಗಿ ಕೆಲಸ ಮಾಡುತ್ತಿದ್ದಾರೆ. ಹೊಡೆದರೆ ಆನೆಯನ್ನೇ ಹೊಡೆಯಬೇಕು ಎಂದುಕೊಂಡಿದ್ದ ಲೋಕಾಯುಕ್ತಕ್ಕೆ ಪ್ರಮುಖ ಅಸ್ತ್ರವಾಗಿ ಸಿಕ್ಕಿದ್ದೇ ಕಮಲಾನಗರದ ಮಂಜುನಾಥ್.ಮೊದಲಿಂದಲೂ ಯಾರೇ ಬಂದ್ರೂ ಅವರ ಬಳಿ ನಿಸ್ಸಂಕೋಚವಾಗಿ ಹಣಕ್ಕೆ ಬೇಡಿಕೆ ಇಡುತ್ತಿದ್ದರೆನ್ನಲಾದ ಶ್ರೀನಿವಾಸ್,ಇದೇ ಮಂಜುನಾಥ್ ಅವರಿಂದಲೂ ಖಾತೆಯೊಂದರ ವಿಚಾರದಲ್ಲಿ  ಲಕ್ಷಾಂತರ ಹಣ ಕೇಳಿದ್ದರಂತೆ.

ಹಣದ ವಿಚಾರದಲ್ಲಿ ಯಾವುದೇ ರಿಯಾಯ್ತಿ ಮಾಡಿಕೊಳ್ಳದೆ ಬಿಗಿಪಟ್ಟನ್ನು ಹಿಡಿದ ಶ್ರೀನಿವಾಸ್ ಅವರ ಧೋರಣೆಯನ್ನು ಮಂಜುನಾಥ್ ಲೋಕಾಯುಕ್ತದ ಗಮನಕ್ಕೆ ತಂದಿದ್ರು.ಸರಿಯಾದ ಟೈಮ್ ಗೆ ಕಾಯುತ್ತಿದ್ದ ಲೋಕಾಯುಕ್ತ ತಂಡ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳದೆ ಪ್ಲ್ಯಾನ್ ರೂಪಿಸಿ ಹಣ ನೀಡುವ ವ್ಯವಸ್ಥೆ ಮಾಡಿಕೊಂಡಿದ್ರು.

ಇವತ್ತು ಮಧ್ಯಾಹ್ನ ಮಲ್ಲೇಶ್ವರಂನ ಮಂತ್ರಿಮಾಲ್ ಎದುರಿರುವ ಪಶ್ಚಿಮ ವಲಯದ ಕಚೇರಿಯಲ್ಲಿ ಮಂಜುನಾಥ್ 4 ಲಕ್ಷ ಲಂಚ ಕೊಡುವಂತೆ ಸ*ನ್ ಕ್ರಿಯೇಟ್ ಮಾಡಿದ್ರು.4 ಲಕ್ಷ ಹಡಬೆ ಹಣ ಸಿಗುತ್ತಲ್ಲ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಶ್ರೀನಿವಾಸ್ ದೂರುದಾರ ಮಂಜುನಾಥ್ 4 ಲಕ್ಷದ ಕಂತೆಗಳ್ನು ತೆಗೆಯುತ್ತಿದ್ದಂತೆ ಅದನ್ನು ಕಸಿದುಕೊಳ್ಳೊಕ್ಕೆ ಮುಂದಾಗಿದ್ದಾರೆ.ಅದೇ ಸಮಯಕ್ಕೆ ಒಳಗೆ ಎಂಟ್ರಿಯಾದ ಲೋಕಾಯುಕ್ತ ಟೀಮ್ ಹಣದ ಸಮೇತ ಶ್ರೀನಿವಾಸ್ ಅವರನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ.

ಯಾವುದೇ ಸನ್ನೆ ಸೂಕ್ಷ್ಮಗಳಿಲ್ಲದೆ ಹೋಗೋ ಬರೋರ್ ಹತ್ರ ಹಣವನ್ನು ಕೇಳುವ ಚಾಳಿ ಬೆಳೆಸಿಕೊಂಡಿದ್ದ ಶ್ರೀನಿವಾಸ್ ಬಗ್ಗೆ ವ್ಯಾಪಕ ಭ್ರಷ್ಟಾಚಾರದ ಆರೋಪಗಳಿವೆ.ಪಶ್ಚಿಮ ವಲಯದಲ್ಲಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಅನೇಕ ಟೆಂಡರ್ ಗಳಲ್ಲಿ ಗೋಲ್ಮಾಲ್ ನಡೆಸಿ ಕಿಕ್ ಬ್ಯಾಕ್ ಪಡೆದಿದ್ದಾರೆನ್ನುವ ಆಪಾದನೆಗಳಿವೆ.ಅದರ ಪರಿಣಾಮ ಎನ್ನುವಂತೆ ಇವತ್ತು ಅದೇ ಅವರ ಅತಿಯಾದ ಧನದಾಹ ಲೋಕಾಯುಕ್ತ ಬಲೆಗೆ ಬೀಳುವಂತೆ ಮಾಡಿದೆ.

ಇನ್ನೊಂದು ವಿಚಿತ್ರ ಎಂದ್ರೆ ಈ ಶ್ರೀನಿವಾಸ್ ಹತ್ತಿರದ ಸಂಬಂಧಿ ಕೂಡ ಕೆಎಎಸ್ ಅಧಿಕಾರಿಯಂತೆ.ಸರ್ಕಾರದ ಪ್ರಮುಖ ಇಲಾಖೆಯಲ್ಲಿ ಕೆಲಸ ಮಾಡುವಾಗ ಧನದಾಹಕ್ಕೆ ಟ್ರ್ಯಾಪ್ ಆಗಿದ್ದರೆನ್ನುವ ಮಾತುಗಳಿವೆ.ಅದೇನೇ ಆಗಲಿ ಅತಿಯಾದ ಧನದಾಹವೇ ಶ್ರೀನಿವಾಸ್  ಸಾರ್ವಜನಿಕವಾಗಿ ಬೆತ್ತಲಾಗುವಂತೆ ಮಾಡಿದೆ.

 

 

 

 

 

 

Spread the love

Related Articles

Leave a Reply

Your email address will not be published.

Back to top button
Flash News