BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

349 SECURITIES FOR 16,000 CRORE BMTC ASSET..35,000 STAFF..IS IT ENOUGH..!!?! ಇಷ್ಟೇ ಸಾಕಾ..?! BMTC ಯ 16,000 ಕೋಟಿ “ಆಸ್ತಿ”..35,000 + “ಸಿಬ್ಬಂದಿ” ಮೇಲುಸ್ತುವಾರಿಗೆ ಕೇವಲ 349 ಸೆಕ್ಯೂರಿಟಿಸ್.!!

49 ಘಟಕ,10-ಟಿಟಿಎಂಸಿ,7-ವರ್ಕ್ ಶಾಪ್: 34,000 ಪುರುಷರಿಗೆ 241, 7,000 ಮಹಿಳಾ ಸಿಬ್ಬಂದಿ ಸುರಕ್ಷತೆಗೆ 108 ಮಹಿಳಾ ಭದ್ರತಾ ಸಿಬ್ಬಂದಿ..?! ಇದೆಂಥಾ ಅನ್ಯಾಯ..!

ಬೆಂಗಳೂರು:ಇದು ಕೊಂಚ ಅತಿರೇಕ ಎನಿಸ್ಬೋದು..ಆದ್ರೆ ಗಂಭೀರವಾಗಿ ಪರಿಗಣಿಸಲೇಬೇಕಾದ ವಿಚಾರ.. ಬಿಎಂಟಿಸಿಯ ಬಹುತೇಕ ಡಿಪೋಗಳಿಗೆ ಯಾರ್..ಯಾವ್ ಹೊತ್ತಲ್ಲಿ ಬೇಕಾದ್ರೂ ಎಂಟ್ರಿ ಹೊಡೀಬೋದಂತೆ..!? ಕಿಡಿಗೇಡಿಗಳು ಎಂಥಾ ಕೃತ್ಯ ಬೇಕಾದ್ರೂ ಎಸಗಿ ಬರ್ಬೋದಂತೆ.!? ಭಯೋತ್ಪಾದಕರು “ಬಾಂಬ್” ಇಟ್ಟು ಡಿಪೋಗಳನ್ನೇ ಉಡಾಯಿಸ್ಬೋದಂತೆ..!? .. ರಾತ್ರಿ ವೇಳೆ ಸಂಚರಿಸೋ ಪ್ರಯಾಣಿಕರು ಅಪ್ಪಿತಪ್ಪಿ ಎಚ್ಚರ ತಪ್ಪಿ ಮಲಗಿಬಿಟ್ರೆ ಬೆಳಗ್ಗೆವರೆಗೂ ಡಿಪೋದೊಳಗೆ ಎಂಟ್ರಿಯಾದ ಬಸ್ ನಲ್ಲೇ ಮಲಗಿ ಹಾಯಾಗಿ ಎದ್ದು ಬರಬೋದಂತೆ..?! ಇಷ್ಟೆಲ್ಲಾ ಆದ್ರೂ ಬಹುತೇಕರು, ಏನೂ..ಕೇಳೊಲ್ವಂತೆ..!!

ಇದೆಲ್ಲ ಕೇಳಿದ್ರೆ ವಿಚಿತ್ರ ಎನಿಸ್ಬೋದು..ಅಚ್ಚರಿನೂ ಆಗ್ಬೋದು..ಹೀಗೆಲ್ಲಾ ಆಗುತ್ತಾ ಎಂದು ಗಾಬರಿನೂ ಪಡಬೋದು..ಆದ್ರೆ ಇದೆಲ್ಲಾ ನಿಜವಂತೆ..! ಇದನ್ನು ಹೇಳೋರು ಅದೇ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ.

ಹೌದು..ಇಷ್ಟೆಲ್ಲಾ ಅವ್ಯವಸ್ಥೆಗಳು ತಾಂಡವವಾಡೊಕ್ಕೆ ಕಾರಣ ಭದ್ರತಾ ಸಿಬ್ಬಂದಿಯ ಕೊರತೆ.ಅಗಾಧವಾಗಿ ಬೆಳೆದಿರುವ ಬಿಎಂಟಿಸಿ ಸಂಸ್ಥೆ ಹಾಗೂ ಅದರ ಆಧಾರಸ್ಥಂಬವಾದ ಕಾರ್ಮಿಕರ ಹಿತ ಕಾಯೊಕ್ಕೆ ಇರಬೇಕಾದಷ್ಟು ಪ್ರಮಾಣದ ಭದ್ರತಾ ಸಿಬ್ಬಂದಿನೇ ನಿಗಮದಲ್ಲಿಲ್ಲ.ಒಂದೆಡೆ ಸಿಬ್ಬಂದಿ ಸಂಖ್ಯೆಯಲ್ಲಿ ತೀವ್ರ ಕೊರತೆಯಿದ್ದರೆ,ಇರುವಷ್ಟು ಸಿಬ್ಬಂದಿಯಲ್ಲೇ ಬದ್ಧತೆ-ಪ್ರಾಮಾಣಿಕತೆಯ ಕೊರತೆಯಿದೆಯಂತೆ.ಭದ್ರತಾ ಸಿಬ್ಬಂದಿ ಯಾಮಾರಿಸಿದ್ರೂ ಅದೆಲ್ಲವನ್ನು ಸೆರೆ ಹಿಡಿಯೊಕ್ಕೆ ಕಾವಲಾಳುಗಳಂತೆ ಕೆಲಸ ಮಾಡಬೇಕಿದ್ದ ಸಿಸಿ ಕ್ಯಾಮೆರಾಗಳು ಕೂಡ ಬಹುತೇಕ ಕಾರ್ಯನಿಲ್ಲಿಸಿವೆಯಂತೆ..ಹೀಗಿರುವಾಗ ಡಿಪೋ-ಟಿಟಿಎಂಸಿ-ಸಿಬ್ಬಂದಿ ರಕ್ಷಣೆ-ಕಾಳಜಿ ಹೇಗೆ ಪರಿಪೂರ್ಣವಾಗಿ ನಡೆಯೊಕ್ಕೆ ಸಾಧ‍್ಯವಲ್ಲವೇ..?

ಅಂದ್ಹಾಗೆ ಬೆಂಗಳೂರು ಮಹಾನಗರ ಸಾರಿಗೆ ಅತ್ಯಂತ ಶ್ರೀಮಂತವಾದ-ಅಪಾರ ಸಂಪತ್ತನ್ನು ಹೊಂದಿರುವ ಸಂಸ್ಥೆ ಎನ್ನುವು ದು ಹೆಮ್ಮೆ.ಇದರ ವ್ಯಾಪ್ತಿಯಲ್ಲಿರುವ ಸ್ವತ್ತುಗಳ ಮೌಲ್ಯವೇ ಹತ್ತಿರತ್ತಿರ 16ಸಾವಿರ ಕೋಟಿ ಎನ್ನಲಾಗುತ್ತದೆ. ಇಂತದ್ದೊಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಸಂಖ್ಯೆ 35 ಸಾವಿರ.

ಇದರಲ್ಲಿ 49 ಘಟಕ,10 ಟಿಟಿಎಂಸಿ,7 ವರ್ಕ್ ಶಾಪ್ ಗಳಿವೆ.ಇಷ್ಟೆಲ್ಲಾ ವ್ಯಾಪ್ತಿ ಹೊಂದಿರುವ ಬಿಎಂಟಿಸಿಯ ಆಸ್ತಿ-ಸಿಬ್ಬಂದಿ ರಕ್ಷಣೆಗೆ ಕೆಲಸ ಮಾಡುತ್ತಿರುವ ಭದ್ರತಾ ಸಿಬ್ಬಂದಿ ಎಷ್ಟು ಗೊತ್ತೆ..ಕೇವಲ 349. ನಿಗಮದಲ್ಲಿ ಕೆಲಸ ಮಾಡುತ್ತಿರುವ 34,000 ಪುರುಷ ಸಿಬ್ಬಂದಿಗೆ ಇರುವುದು ಕೇವಲ 241 ಭದ್ರತಾ ಸಿಬ್ಬಂದಿ. 7 ಸಾವಿರ ಮಹಿಳಾ ಸಿಬ್ಬಂದಿ ಸುರಕ್ಷತೆಗೆ ಇರುವುದು ಕೇವಲ 108 ಮಹಿಳಾ ಭದ್ರತಾ ಸಿಬ್ಬಂದಿ ಮಾತ್ರವಂತೆ.

ಪ್ರತಿ ಡಿಪೋಗೆ ಕನಿಷ್ಟ 10-15 ರಿಂದ ಭದ್ರತಾ ಸಿಬ್ಬಂದಿ ನಿಯೋಜನೆಗೊಳ್ಳಬೇಕಾದ ಜಾಗದಲ್ಲಿ ಇರುವುದು ಕೇವಲ 4 ಮಂದಿ.ಇಬ್ಬಿಬ್ಬರು ಶಿಪ್ಟ್ ಗಳಲ್ಲಿ ಕೆಲಸ ಮಾಡುವಂತಾಗಿದೆ. ಮೆಜೆಸ್ಟಿಕ್ ನಂಥ ದಟ್ಟಣೆ ಪ್ರದೇಶದಲ್ಲಿರುವುದು ಕೇವಲ 10 ಸೆಕ್ಯೂರಿಟಿಸ್.ಹಾಗೆ ನೋಡಿದ್ರೆ ಅಲ್ಲಿಗೆ ಕನಿಷ್ಟ 25 ಭದ್ರತಾ ಸಿಬ್ಬಂದಿ ಬೇಕಿದೆ.ಹಾಗೆಯೇ ಟಿಟಿಎಂಸಿಗಳಲ್ಲಿ ಕನಿಷ್ಟ 5-6 ಜನ ಇರಬೇಕು.ಆದ್ರೆ ಅಲ್ಲಿರುವುದು ಕೇವಲ ಇಬ್ಬರು ಭದ್ರತಾ ಸಿಬ್ಬಂದಿ ಎನ್ನುವ ಮಾತಿದೆ.

ಮಂಜೂರಾಗಿದ್ದು 388,ಕಾರ್ಯನಿರ್ವಹಿಸುತ್ತಿರೋರು 349, ಖಾಲಿ ಇರೋದು 39: ಬಿಎಂಟಿಸಿ ಸಹಾಯಕ ಆಡಳಿತಾಧಿಕಾರಿ(ನೇಮಕ)ಗಳು RTI ನಲ್ಲಿ ನೀಡಿರುವ ಮಾಹಿತಿ ಪ್ರಕಾರವೇ ಮಂಜೂ ರಾದ ಹುದ್ದೆಗಳು ಒಟ್ಟು 388 ಅಂತೆ.ಅದರಲ್ಲಿ 349 ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಇನ್ನು 39 ಹುದ್ದೆಗಳ ಭರ್ತಿ ಈವರೆಗೂ ನಡೆದೇ ಇಲ್ಲ.ಹಾಲಿ ಕೆಲಸ ಮಾಡುತ್ತಿರುವ ಭದ್ರತಾ ಸಿಬ್ಬಂದಿ ಹೋಲಿಕೆ ಯಲ್ಲಿ 241 ಪುರುಷರಿದ್ದರೆ 108 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಮೊದ್ಲೇ ಇರೋದೇ ಕಡ್ಮೆ ಅದರ ಲ್ಲೂ 39 ಹುದ್ದೆಗಳನ್ನು ಖಾಲಿ ಬಿಟ್ಟುಕೊಂಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸ್ತಾರೆ ಬಿಎಂಟಿಸಿ ವರ್ಕ್ ಶಾಪ್ ಸಿಬ್ಬಂದಿ

ಭದ್ರತಾ ಸಿಬ್ಬಂದಿ ಕಾರ್ಯತತ್ಪರರಾಗಿದ್ರೆ..ಸಿಸಿ ಟಿವಿ ಕೆಲಸ ಮಾಡ್ತಿದ್ರೆ ಹೊಳಿಬಸಪ್ಪನ ಆತ್ಮಹತ್ಯೆ ತಪ್ಪಿಸಬಹುದಿತ್ತೇನೋ..?!

ಈ ಮಾತನ್ನು ಹೇಳುತ್ತಿರುವುದು ನಾವಲ್ಲ.ಹೊಳಿಬಸಪ್ಪ ಎನ್ನುವ ಡ್ರೈವರ್ ನ ಆತ್ಮಹತ್ಯೆಯನ್ನು ಕಣ್ಣಾರೆ ಕಂಡು ಕಣ್ಣೀರಿಟ್ಟ ಸಿಬ್ಬಂದಿ.ಭದ್ರತಾ ಸಿಬ್ಬಂದಿ ಅವತ್ತು ಅಲರ್ಟ್ ಆಗಿ ಕೆಲಸ ಮಾಡಿದಿದ್ರೆ ಅಥವಾ ಸಿಸಿಟಿವಿಗಳು ಸರಿಯಾಗಿದಿದ್ರೆ ಆತನ ವರ್ತನೆ ಬಗ್ಗೆ ಅನುಮಾನಗೊಂಡು ತಕ್ಷಣವೇ ಆತನನ್ನು ಆತ್ಮಹತ್ಯೆ ಯತ್ನದಿಂದ ತಪ್ಪಿಸಬಹುದಿತ್ತು.ಆದ್ರೆ ಭದ್ರತಾ ಸಿಬ್ಬಂದಿ ಲೋಪದ ಜತೆಗೆ ಸಿಸಿಟಿವಿಗಳ ಅಸಮರ್ಪಕ ಕಾರ್ಯನಿರ್ವಹಣೆ ಯಿಂದ ನಿಷ್ಪಾಪಿ-ಅಮಾಯಕ ಹೊಳಿಬಸಪ್ಪ ಕ‍ಣ್ಣೆದುರೇ ಆತ್ಮಹತ್ಯೆ ಮಾಡಿಕೊಂಡ್ಬಿಟ್ಟ..ಏನೂ ಮಾಡಲಿಕ್ಕಾಗದ ಅಸಹಾಯಕ ಸ್ಥಿತಿಯಲ್ಲಿ ನಾವಿದ್ದೆವು ಎಂದು ಅವತ್ತಿನ ಸನ್ನಿವೇಶ ನೆನಪಿಸಿಕೊಂಡು ಅನೇಕ ಸಹದ್ಯೋಗಿಗಳು ಬೇಸರ ವ್ಯಕ್ತಪಡಿಸ್ತಾರೆ.

ಭದ್ರತಾ ಸಿಬ್ಬಂದಿಯ ಕರ್ತವ್ಯವೇನು.?!ಭದ್ರತಾ ಸಿಬ್ಬಂದಿಗಳ ಕೆಲಸದ ಬಗ್ಗೆ ಹೇಳೋದಾದ್ರೆ ಡಿಪೋಗಳಿಗೆ ಎಂಟ್ರಿ ಕೊಡು ವ,ಡಿಪೋಗಳಿಂದ ಔಟ್ ಆಗುವ ಬಸ್ ಗಳ ಪರಿಶೀಲನೆ-ತಪಾಸಣೆ ಮಾಡುವುದು.ಬಸ್ ಹೊರಡುವ ಮುನ್ನ,ಆಗಮಿಸಿದ ನಂತ್ರ ಬಸ್ ನೊಳಗೆ ತೆರಳಿ ಕೂಲಂಕುಷವಾಗಿ ಪರಿಶೀಲನೆ ನಡೆಸಬೇಕಾಗುತ್ತದೆ.ಡಿಪೋಗೆ ಎಂಟ್ರಿ ಹೊಡೆಯುವ, ಡಿಪೋದಿಂ ದ ತೆರಳುವ ಸಿಬ್ಬಂದಿಯನ್ನು ಪರಿಶೀಲನೆ ಮಾಡಬೇಕು.ಅವರಿಂದ ಸಹಿ ಪಡೆಯಬೇಕು( ಆ ವ್ಯವಸ್ಥೆಯೇ ಇಲ್ಲವಂತೆ).

ಬಿಎಂಟಿಸಿ ಆಸ್ತಿ ಅದೆಷ್ಟೋ ಸಾವಿರ ಕೋಟಿಗಳಿವೆ.ಡಿಪೋ-ವರ್ಕ್ ಶಾಪ್-ಟಿಟಿಎಂಸಿಗಳ ಆಸ್ತಿಯೂ ಹೆಚ್ಚಿದೆ.ಅದೆಲ್ಲಕ್ಕಿಂತ ಹೆಚ್ಚಾಗಿ ಬಿಎಂಟಿಸಿಯ 35 ಸಾವಿರ ಸಿಬ್ಬಂದಿಯ ಮೇಲುಸ್ತುವಾರಿ ಮತ್ತು ರಕ್ಷಣೆಗೂ ಭದ್ರತಾ ಸಿಬ್ಬಂದಿಯ ಅಗತ್ಯವಿದೆ.ಇಷ್ಟೊಂದು ಕಡಿಮೆ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ಇಟ್ಟುಕೊಂಡು ಕೆಲಸ ಮಾಡುತ್ತಿರುವುದು ವಾಸ್ತವಕ್ಕೆ ಹತ್ತಿರ ಎನಿಸುತ್ತಿಲ್ಲ..ಈ ಅಸಮರ್ಪಕತೆ ಹೋಗಲಾಡಿಸಲೇಬೇಕು

ಬಿಎಂಟಿಸಿ ಕಾರ್ಮಿಕ ಸಿಬ್ಬಂದಿ

ಸಿಬ್ಬಂದಿಯ ಚಲನವಲನ,ಡಿಪೋದಲ್ಲಿನ ಆಗುಹೋಗುಗಳ ಬಗ್ಗೆಯೂ ಮೇಲಾಧಿಕಾರಿಗಳಿಗೆ ಅಪ್ ಡೇಟ್ ಮಾಡಬೇಕಿರು ತ್ತದೆ.ಇನ್ನು ಟಿಟಿಎಂಸಿಗಳಲ್ಲಿ ಬಸ್ ಪ್ರಯಾಣಿಕರ ಚಲನವಲನ ಅವರು ಕೊಂಡೊಯ್ಯುವ ಸಾಮಾಗ್ರಿಗಳ ಮೇಲೂ ನಿಗಾ ಇಡಬೇಕು.ವ್ಯತ್ಯಾಸ ಕಂಡುಬಂದ್ರೆ ಮೇಲಾಧಿಕಾರಿಗಳು ಹಾಗೂ ಪೊಲೀಸ್ ಗೆ ಮಾಹಿತಿ ಕೊಡಬೇಕಿರುತ್ತದಂತೆ.

ಹಾಗೆಯೇ ಬಹುಮುಖ್ಯವಾಗಿ ಸ್ಟೋರ್ ಗಳಿಂದ ಬರುವ ಪ್ರತಿಯೊಂದು ಬಿಡಿಭಾಗಗಳ ಲೆಕ್ಕ ಪಡೆಯಬೇಕು.ಅದನ್ನು ದಾಖಲೆಗಳಲ್ಲಿ ನಮೂದು ಮಾಡಬೇಕು.ಬಸ್ ಗಳಿಗೆ ಡೀಸೆಲ್ ಪೂರೈಸುವ ಕೆಲಸವೂ ಅವರದೇ ಆಗಿರುತ್ತದೆ.ಡೀಸೆಲ್ ವಾಹನ ಎಂಟ್ರಿಯಾದ ಮೇಲೆ ಬಸ್ ಗಳಿಗೆ ಅದನ್ನು ತುಂಬಿಸಿ ಎಲ್ಲಾ ಪ್ರಕ್ರಿಯೆ ಮುಗಿದ ಮೇಲೆ ಅದನ್ನು ಹೊರಗೆ ಕಳುಹಿಸುವವ ರೆಗಿನ ಜವಾಬ್ದಾರಿ ಇವರ ಮೇಲಿರುತ್ತದಂತೆ.ಇನ್ನು ಬಿಎಂಟಿಸಿಯ ಡಿಪೋ,ಟಿಟಿಎಂಸಿ ಹಾಗೂ ಬಸ್ ಗಳಲ್ಲಿ ಕೆಲಸ ಮಾಡುವ ಸರಿ ಸುಮಾರು 7 ಸಾವಿರ ಮಹಿಳಾ ಸಿಬ್ಬಂದಿಗೆ ಇರುವುದು ಕೇವಲ 108 ಮಹಿಳಾ ಭದ್ರತಾ ಸಿಬ್ಬಂದಿಯಂತೆ.ಇದು ದುರಂತವಷ್ಟೇ ಅಲ್ಲ,ವಿಪರ್ಯಾಸವೂ ಕೂಡ.ಇದಕ್ಕೆ ಮಹಿಳಾ ಸಿಬ್ಬಂದಿಯೇ ಬೇಸರ ವ್ಯಕ್ತಪಡಿಸ್ತಾರೆ.

ಸೆಕ್ಯೂರಿಟಿಸ್ ಕೊರತೆ ಇರುವುದು ನಮಗೂ ಗೊತ್ತಿದೆ.ಹಾಗೆಂದಾಕ್ಷಣ ಸಮಸ್ಯೆ ಆಗುತ್ತಿದೆ ಎಂದೇನಲ್ಲ..ನಾವೂ ಬೇರೆಯದೇ ವ್ಯವಸ್ಥೆಗಳ ಮೂಲಕ  ಮಾನಿಟರ್ ಮಾಡುತ್ತಿರುತ್ತೇವೆ.ಕೊರತೆ ಇರುವ ಸ್ಥಾನ ತುಂಬುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ.ಅಗತ್ಯ ಬಿದ್ದರೆ ಬೇಡಿಕೆ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲಾಗುವುದು.   -ಬಿಎಂಟಿಸಿ ಡಿಪೋ ಅಧಿಕಾರಿ

ಆದರೆ ಭದ್ರತಾ ಸಿಬ್ಬಂದಿ ಮಾಡುತ್ತಿರುವುದೇನು.!? :ಭದ್ರತಾ ಸಿಬ್ಬಂದಿಯ ಹೊಣೆಗಾರಿಕೆ ಡಿಪೋ,ವರ್ಕ್ ಶಾಪ್ ಗಳಲ್ಲಿ ಅತ್ಯಂತ ನಿರ್ಣಾಯಕವಾಗಿದ್ತೂ ಅವರ ಕಾರ್ಯಕ್ಷಮತೆ ಬಗ್ಗೆ ಸಾಕಷ್ಟು ಆರೋಪ-ತಗಾದೆಗಳಿವೆ.ಕೆಲವೊಂದು ಡಿಪೋಗಳ ಲ್ಲಿ ಭದ್ರತಾ ಸಿಬ್ಬಂದಿಗಳು ನಾಮಾಕವಸ್ಥೆಗೆ ಎನ್ನುವಂತೆ ಕೆಲಸ ಮಾಡುತ್ತಿರುವ ಬಗ್ಗೆ ಮಾತುಗಳಿವೆ.ಬಹುತೇಕ ಸಿಬ್ಬಂದಿ ಡಿಪೋಗಳಲ್ಲಿ ರಾತ್ರಿ ವೇಳೆ  ಹಾಯಾಗಿ ನಿದ್ರಿಸುತ್ತಿರುತ್ತಾರಂತೆ.

ಸದಾ ಜಾಗೃತರಾಗಿದ್ದು ಡಿಪೋಗಳ ಮೂಲೆಮೂಲೆ ಪರಿಶೀಲಿಸುವ ಕೆಲಸವನ್ನೇ ಮರತಿದ್ದಾರಂತೆ. ಡಿಪೋಗಳಲ್ಲಿ ಕಳ್ಳತನ ದಂಥ ಘಟನೆಗಳಾದ್ರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲವಂತೆ( ಹಿಂದೆ ಕೆಲವು ಡಿಪೋಗಳಲ್ಲಿ ಕಳ್ಳತನವಾಗಿರುವುದೇನು ಸುಳ್ಳಲ್ಲವಲ್ಲ..) ಬಸ್ ಗಳ ಸುರಕ್ಷತೆಗೆ ಆಧ್ಯತೆ ಕೊಡ್ತಿಲ್ಲವಂತೆ.ಮಾಡೋ ಕೆಲಸ ಬಹಳಷ್ಟಿದ್ದರೂ ದಿನವೆಲ್ಲಾ ದುಡಿದು ಬೆಂಡಾದ ಡ್ರೈವರ್ಸ್-ಕಂಡಕ್ಟರ್ಸ್ ರಾತ್ರಿ ವೇಳೆ ಬಸ್ ಗಳಲ್ಲಿ ಮಲಗಿದ್ರೆ ಅವರನ್ನು ಅನಾವಶ್ಯಕವಾಗಿ ಎಬ್ಬಿಸುವುದು. ಕುಡಿದಿದ್ದಾರಾ ಎಂದು ಪರಿಶೀಲಿಸುವುದು,ವಿನಾಕಾರಣ ತೊಂದರೆ ಕೊಡುವಂಥ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪಗಳಿವೆ.

ವರ್ಕ್ ಶಾಪ್ ಗಳಿಗೆ ಸೆಕ್ಯೂರಿಟಿ ಅವಶ್ಯಕತೆ ಹೆಚ್ಚಿರುವುದು..ಆದ್ರೆ..?!  ..:ಹಾಗೆ ನೋಡಿದ್ರೆ ಬಿಎಂಟಿಸಿ ವ್ಯಾಪ್ತಿ ಯಲ್ಲಿ 4 ಬೃಹತ್ ವರ್ಕ್ ಶಾಪ್ ಗಳಿವೆ.ಉಗ್ರಾಣದಿಂದ ಬರುವ ಕೋಟ್ಯಾಂತರ ಮೌಲ್ಯದ ಬಿಡಿಭಾಗಗಳ ಸಂಗ್ರಹ,ಬಳಕೆ.ವಿಲೇವಾರಿ ನಡೆಯೋದೇ ಇಲ್ಲಿ.ಆದರೆ ಈ ವರ್ಕ್ ಶಾಪ್ ಗಳ ಪರಿಸ್ಥಿತಿ ತೀರಾ ಶೋಚನೀಯವಾಗಿದೆ ಎನ್ನುತ್ತಾರೆ ವರ್ಕ್ ಶಾಪ್ ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ. ಎಷ್ಟೋ ಬಿಡಿಭಾಗಗಳು ವರ್ಕ್ ಶಾಪ್ ಗಳಿಂದ ಸಲೀಸಾಗಿ ಹೊರಗೆ ಸಾಗಿಸಲ್ಪಡುತ್ತಿವೆ.ಇದನ್ನು ಚೆಕ್ ಮಾಡೋರೇ ಇಲ್ಲವಾಗಿದೆ.ಮಾಡ್ತಿರೋರು ಕೂಡ ಕಾಟಾಚಾರದ ಪರಿಶೀಲನೆ ನಡೆಸ್ತಿದ್ದಾರೆ.ಕೆಲ ವರ್ಕ್ ಶಾಪ್ ಗಳಲ್ಲಿ ಕಳ್ಳತನವಾಗಿರುವುದು ಇದೇ ಕಾರಣಕ್ಕೆ.ಇಷ್ಟೆಲ್ಲಾ ಆಗಿದ್ರೂ ಬುದ್ಧಿಕಲಿಯದಿರುವುದು ದುರಾದೃಷ್ಟಕರ ಎನಿಸದೆ ಇರೊಲ್ಲ.

ಭದ್ರತಾ ಸಿಬ್ಬಂದಿಯಲ್ಲಿರುವ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಇಲಾಖೆ ಕಾರ್ಯತತ್ಪರವಾಗಬೇಕಿದೆ. ಕನಿಷ್ಟ 500 ರಿಂದ 750 ಸಿಬ್ಬಂದಿಯನ್ನಾದ್ರೂ ನಿಯೋಜಿಸಿಕೊಳ್ಳಬೇಕಿದೆ.ಭದ್ರತಾ ಸಿಬ್ಬಂದಿ ನಿಯೋಜನೆಗೆ ಒತ್ತು ಕೊಟ್ಟಷ್ಟೇ ಅವರಲ್ಲಿ ಕಾರ್ಯಕ್ಷಮತೆ,ಬದ್ಧತೆ ಹಾಗೂ ಪ್ರಾಮಾಣಿಕತೆ ಹೆಚ್ಚಿಸುವುದಕ್ಕೂ ಆಧ್ಯತೆ ಕೊಡಬೇಕಿದೆ.

Spread the love

Related Articles

Leave a Reply

Your email address will not be published.

Back to top button
Flash News