ಹೆಚ್ಚಿನ ಸಂಬಳ ಪಡೆಯೋರ ಸಂಖ್ಯೆಯಲ್ಲಿ ಬೆಂಗಳೂರು ಫಸ್ಟ್.

0

ಸಿಲಿಕಾನ್​ ಸಿಟಿಯ ಖಾಸಗಿ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ‘ಟೀಮ್ ಲೀಸ್​’ ವರದಿ

ಅತೀ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳು ಹೆಚ್ಚಾಗಿ ಇರೋದು ಎಲ್ಲಿ.. ಮುಂಬೈನಾ..ಡೆಲ್ಲಿನೋ..ಗುಜರಾತೋ ಅಥ್ವಾ ಉತ್ತರ ಪ್ರದೇಶನೋ..

ಇದಕ್ಕೆ ಉತ್ತರ ಬೆಂಗಳೂರು..ಯೆಸ್..ಎರಡು ಲಕ್ಷಕ್ಕಿಂತ ಹೆಚ್ಚು ಸಂಬಳ ಪಡೆಯೋ ಉದ್ಯೋಗಿಗಳು ಹೆಚ್ಚಾಗಿ ಇರೋದು ಬೆಂಗಳೂರಿನಲ್ಲಿ ಎನ್ನೋದು ಪ್ರೂವ್ ಆಗಿದೆ.ಇದನ್ನು ನಾವ್ ಹೇಳ್ತಿಲ್ಲ..ಸರ್ವೇನೇ ಇದನ್ನು ದೃಡೀಕರಿಸಿದೆ.ಹಾಗಾಗಿ ಇದನ್ನು ಬೆಂಗಳೂರಿನ ಹೆಗ್ಗಳಿಕೆ ಎನ್ನಲೇಬೇಕು.

ಅತೀ ಹೆಚ್ಚಿನ ಐಟಿಬಿಟಿಗಳನ್ನು ಹೊಂದಿರುವ ಹಿನ್ನಲೆಯಲ್ಲಿ ಬೆಂಗಳೂರು ದೇಶದಲ್ಲೇ ಐಟಿಬಿಟಿ ಸಿಟಿ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.ಇದರ ಮುಂದುವರೆದ ಭಾಗ ಎನ್ನುವಂತೆ ಮತ್ತೊಂದು ಹೆಗ್ಗಳಿಕೆ ಈ ಸಿಟಿಯ ಮುಡಿಗೇರಿದೆ.

ಟೀಮ್ ಲೀಸ್ ಎನ್ನುವ ಸಂಸ್ಥೆಯೂ ಪ್ರತಿ ವರ್ಷ ಮೆಟ್ರೋ ನಗರಗಳಲ್ಲಿನ ಬದ್ಲಾವಣೆ ಹಾಗೂ ಬೆಳವಣಿಗೆಗಳ ಬಗ್ಗೆ ಅಧ್ಯಯನ ನಡೆಸುತ್ತಾ ಬಂದಿದೆ.ಅದು ಇತ್ತೀಚೆಗೆ   ಮೆಟ್ರೊ ನಗರಗಳಲ್ಲಿನ ಖಾಸಗಿ ಸಂಸ್ಥೆಗಳ ನೌಕರರ ವೇತನದ ಬಗ್ಗೆ ಸಮಗ್ರ ಅಧ್ಯಯನ ನಡುಸ್ತು.ಆ ವೇಳೆ ಎರಡಂಕಿ ಸಂಬಳ ತೆಗೆದುಕೊಳ್ಳುವ ನಗರಗಳಲ್ಲಿ ಯಾವುದು ಅಗ್ರಸ್ಥಾನದಲ್ಲಿ ನಿಲ್ಲುತ್ತೆ ಎನ್ನುವ ಸಂಗತಿ ಮೇಲೆ ಮಾಹಿತಿ ಕಲೆ ಹಾಕ್ತಾ ಹೋದಂತೆಲ್ಲಾ ಈ ಮಾಹಿತಿ ಬಹಿರಂಗವಾಯ್ತು.

ಅಧ್ಯಯನಕ್ಕೆ ದೇಶದ ಪ್ರಮುಖ 9 ನಗರಗಳನ್ನುಆಯ್ದುಕೊಳ್ಳಲಾಯಿತು. ಬಿಎಫ್‌ಎಸ್‌ಐ, ಬಿಪಿಒ/ ಐಟಿ ಸೇವೆ, ಇ- ಕಾಮರ್ಸ್, ಶೈಕ್ಷಣಿಕ ಸೇವೆ, ಎಫ್‌ಎಂಸಿಜಿ, ಆರೋಗ್ಯ ರಕ್ಷಣೆ ಮತ್ತು ಫಾರ್ಮಾ ಸೇರಿದಂತೆ ವಿವಿಧ17 ವಲಯಗಳಲ್ಲಿನ 2 ಲಕ್ಷ ಸಂಬಳ ಪಡೆಯುವವರ ದಾಖಲೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿದಾಗ ಬೆಂಗಳೂರು ಅತೀ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳನ್ನು ಹೊಂದಿರುವ ರಾಜ್ಯದಗಳ ಸ್ಥಾನದಲ್ಲಿ ಮೊದಲ ಸ್ಥಾನದಲ್ಲಿದೆ.ಅತೀ ಹೆಚ್ಚಿನ ಐಟಿಬಿಟಿ ಹೊಂದಿರುವ ರಾಜ್ಯ ಅಷ್ಟೇ ಅಲ್ಲ,ಇಲ್ಲಿ ಕೆಲಸ ಮಾಡುವವರಿಂದ್ಲೇ ಬೆಂಗಳೂರಿಗೆ ದೇಶಿಯ ಮಟ್ಟದಲ್ಲಿ ಇಂತದ್ದೊಂದು ಸಾಧನೆ ಸಾಧ್ಯವಾಗಿದೆ ಎಂದು ಟೈಮ್ ಲೀಸ್ ವರದಿ ಮಾಡಿದೆ.

ಬೆಂಗಳೂರಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ದೆಹಲಿ ಪ್ರತಿಸ್ಪರ್ಧಿಯಾಗಿದೆ.ಇವುಗಳ ನಡುವೆ ಕೂದಲೆಳೆಯ ವ್ಯತ್ಯಾಸ ಮಾತ್ರ ಇದ್ದು ಕೆಲ ತಿಂಗಳಲ್ಲಿ ಡೆಲ್ಲಿ ಬೆಂಗಳೂರಿನಿಂದ  ಈ ಪಟ್ಟ ಕಸಿದುಕೊಳ್ಳುವ ಸಾಧ್ಯತೆಗಳಿವೆಯಂತೆ.

Spread the love
Leave A Reply

Your email address will not be published.

Flash News