ಕ್ರಿಕೆಟ್ ಜನಕರ ನಾಡಲ್ಲಿÃಗ ಹಬ್ಬದ ಸಂಭ್ರಮ..ಶಾಪವಿಮೋಚನೆಗೊಂಡ ನೆಮ್ಮದಿ..

0

ಕ್ರಿಕೆಟ್ ಸೃಷ್ಟಿಕರ್ತರೇ ತಾವಾದ ಹೊರತಾಗ್ಯೂ ಅದರ ಮೇಲೆ ಒಮ್ಮೆಯೂ ಪಾರಮ್ಯ ಸ್ಥಾಪಿಸಲಾಗದ ಇಷ್ಟು ವರ್ಷಗಳ ಶಾಪಕ್ಕೆ ಮುಕ್ತಿ ದೊರೆತ ಸಾರ್ಥಕಭಾವ.ವಿಶ್ವಯುದ್ಧವನ್ನೆÃ ಗೆದ್ದುಬೀಗಿದವೆನ್ನೊÃ ಹೆಮ್ಮೆಯ ಭಾವ..ಯೆಸ್ ಇಂಗ್ಲೆಂಡ್ ದೇಶದ ಸಧ್ಯದ ಮನಸ್ಥಿತಿ ಇದು.

ಕ್ರಿಕೆಟನ್ನು ಹಬ್ಬ-ಸಂಸ್ಕçತಿ-ಆಚರಣೆ ರೂಪದಲ್ಲಿ ನೋಡೋ ದೇಶ ಇಂಗ್ಲೆಂಡ್.ಆದ್ರೆ ಕ್ರಿಕೆಟ್ ಆಟವನ್ನು ಆರಂಭಿಸಿ ಅದನ್ನು ವಿಶ್ವದುದ್ದಗಲಕ್ಕೂ ಪಸರಿಸಿದ ಹೊರತಾಗ್ಯೂ ಇಂಗ್ಲೆಂಡಿಗರಿಗೆ ಒಮ್ಮೆಯೂ ವಿಶ್ವಕಪ್ ಗೆಲ್ಲಲಾಗರ‍್ಲಿಲ್ಲ.ಏನೇನೆಲ್ಲಾ ಸಾಧಿಸಿದವರಿಗೆ ವಿಶ್ವಕಪ್ ಸಾಮ್ರಾಟರಾಗಿ ಮೆರೆಯಲಿಕ್ಕಾಗರ‍್ಲಿಲ್ಲ.ಇಂತದ್ದೊಂದು ಕೊರಗಿನಲ್ಲೆÃ ಈ ಬಾರಿಯ ವಿಶ್ವಕಪ್ ಆತಿಥ್ಯ ವಹಿಸಿಕೊಂಡು ಆತ್ಮವಿಶ್ವಾಸದಿಂದ್ಲೆÃ ಕಣಕ್ಕಿಳಿದ ಇಂಗ್ಲೆಂಡ್ ಕೊನೆಗೂ ತನ್ನ ಅಭಿಯಾನವನ್ನು ವಿಶ್ವಚಾಂಪಿಯನ್ ಪಟ್ಟದೊಂದಿಗೆ ಮುಗಿಸಿದೆ.ಇಡೀ ಇಂಗ್ಲೆಂಡನ್ನು ಶಾಪವಿಮೋಚನೆಗೊಳಿಸಿದೆ ಐಯಾನ್ ಮಾರ್ಗನ್ ಪಡೆ.

ಇಂಗ್ಲೆಂಡ್,ಈ ಬಾರಿಯ ವಿಶ್ವಕಪ್ ಕ್ರಿಕೆಟ್ ನ ಆತಿಥ್ಯ ವಹಿಸಿಕೊಂಡ ದೇಶ.ಒಮ್ಮೆಯೂ ವಿಶ್ವಕಪ್ ಗೆಲ್ಲಲಾಗ್ಲಿಲ್ಲ.೪೫ ವರ್ಷಗಳಿಂದ ಕ್ರಿಕೆಟ್ ಆಡ್ತಾ ಬಂದು,ಮೂರು ಬಾರಿ ಫೈನಲ್ ಗೆ ಪ್ರವೇಶಿಸಿದ್ರೂ ಒಂದ್ ಬಾರಿ ಕಪ್ ಗೆಲ್ಲಲಿಕ್ಕಾಗ್ಲಿಲ್ಲ.

ಕಣಕ್ಕಿಳಿಯುವಾಗ 1979 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ, 1987 ರಲ್ಲಿ ಆಸ್ಟ್ರೇಲಿಯಾ ಎದುರು ಹಾಗೂ 1992 ರಲ್ಲಿ ಎದುರಾಳಿ ಪಾಕಿಸ್ತಾನ  ವಿರುದ್ಧ ಫೈನಲ್ ನಲ್ಲಿ ಮುಗ್ಗರಿಸಿಬಿದ್ದ ಕಹಿ ನೆನಪುಗಳಿದ್ವು.ಮತ್ತದೇ ಇತಿಹಾಸ ಮರುಕಳಿಸುತ್ತಾ ಎನ್ನುವ ಅಳುಕಿದ್ದೆರೂ ಹೊಸ ಹುರುಪು ಹಾಗೂ ಆತ್ಮವಿಶ್ವಾಸದೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿದ ತಂಡ ಪಂದ್ಯಾವಳಿಯುದ್ದಕ್ಕೂ ಗೆಲ್ಲುವ ಫೇವರೀಟ್ ತಂಡವಾಗೇ ಗುರುತಿಸಿಕೊಂಡಿದ್ದು ಅದರ ಕನ್ಸಿಸ್ಟೆನ್ಸಿ,ಫರ್ಪೆಕ್ಟ್ ನೆಸ್ ಗೆ ಸಾಕ್ಷಿಯಂತಿತ್ತು.

ಒಂದೆರೆಡು ಸೋಲನ್ನು ಹೊರತುಪಡಿಸಿದ್ರೆ ಎಲ್ಲಾ ದೇಶಗಳ ಮೇಲೆ ಗೆಲುವಿನ ಅಭಿಯಾನ ಮುಂದುವರೆಸಿಕೊಂಡು ಬಂದಿದ್ದ ಇಂಗ್ಲೆಂಡಿಗರಿಗೆ ಫೈನಲ್ ನಲ್ಲಿ ನ್ಯೂಜಿಲೆಂಡ್ ಮುಖಾಮುಖಿಯಾದಾಗ್ಲೇ ಬಹುತೇಕ ಗೆದ್ದೇ ಹೋದೆವು ಎನ್ನುವ ಭಾವನೆ ಕಾಡಿದ್ದು ಸುಳ್ಳಲ್ಲ.

ಕೇನ್ ವಿಲಿಯಮ್ಸನ್ ತಂಡ ಕೂಡ ಇಂಗ್ಲೆಂಡ್ ನಷ್ಟೇ ಆತ್ಮವಿಶ್ವಾಸದೊಂದಿಗೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನಕ್ಕಿಳಿದಿತ್ತು.ಗೆದ್ದರೆ ನ್ಯೂಜಿಲೆಂಡ್ ಗೂ ಇದು ಮೊದಲ ಹಾಗೂ ಐತಿಹಾಸಿಕ ವಿಶ್ವಕಪ್ ಗೆಲುವಾಗ್ತಿತ್ತು.ಇಂಗ್ಲೆಂಡ್ ಗೆ ಠಕ್ಕರ್ ಕೊಡಬಲ್ಲ ಅತ್ಯದ್ಭುತ ತಂಡವನ್ನು ಹೊಂದಿರುವ ನ್ಯೂಜಿಲೆಂಡ್ ಟಾಸ್ ನಲ್ಲಿ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ತು.

ನ್ಯೂಜಿಲೆಂಡ್ ನ ಆರಂಭಿಕ ಪ್ರದರ್ಶನ ಅಷ್ಟೇನೂ ಆಶಾದಾಯಕವಾಗಿರಲಿಲ್ಲ.50 ಓವರ್ ಗಳಲ್ಲಿ ಅದು ಗಳಿಸ್ಲಿಕ್ಕೆ ಸಾಧ್ಯವಾಗಿದ್ದು ಕೇವಲ 241 ರನ್ ಗಳು.ಅತ್ಯದ್ಭುತ ಫಾರ್ಮ್ ನಲ್ಲಿರುವ ಇಂಗ್ಲೆಂಡ್ ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕಿಳಿದಾಗ ನ್ಯೂಜಿಲೆಂಡ್ ಸ್ಥಿತಿಯೇ ಆಟಗಾರರದಾಗಿತ್ತು. 50 ಓವರ್ ಗಳಲ್ಲಿ ಅದಕ್ಕೂ ಸಾಧ್ಯವಾಗಿದ್ದು 241 ರನ್ ಗಳಿಕೆ ಮಾತ್ರ.

45 ವರ್ಷಗಳ ಇತಿಹಾಸದಲ್ಲಿ ಯಾವ್ದೇ ಪಂದ್ಯ ಪಡೆದುಕೊಳ್ಳದಷ್ಟು ರೋಚಕತೆಯನ್ನು ಪಡೆದುಕೊಂಡ ಫೈನಲ್ ಪಂದ್ಯ ಟೈ ಆದಾಗ ನಿರ್ಣಾಯಕರು ಮೊರೆ ಹೋದದ್ದು ಸೂಪರ್ ಓವರ್ ಗೆ.ಅಲ್ಲಿಯೂ ಮತ್ತೊಂದು ಆಶ್ಚರ್ಯ ಕಾದಿತ್ತು.ಸೂಪರ್ ಓವರ್ ನಲ್ಲಿಯೂ ಎರಡು ತಂಡಗಳು ಸಮಬಲ ಸಾಧಿಸಿದ್ವು.ಇಕ್ಕಟ್ಟಿನಲ್ಲಿ ಸಿಲುಕಿದ ನಿರ್ಣಾಯಕರು ಹತ್ತಾರು ಬಾರಿ ಆಲೋಚಿಸಿ,ಸಮಾಲೋಚಿಸಿ ಸಿಕ್ಸರ್ ಗಳ ಮಾನದಂಡದ ಮೇಲೆ ಇಂಗ್ಲೆಂಡನ್ನು ಚಾಂಪಿಯುನ್ ಎಂದು ಘೋಷಿಸಿದ್ರು.

45 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಇಂತದ್ದೊಂದು ಕುತೂಹಲರೋಚಕತೆ ಸೃಷ್ಟಿಸಿದ್ದ ಪಂದ್ಯ ಇನ್ನೊಂದಿರಲಾರದೇನೋ.ಸಿಕ್ಸರ್ ಆಧಾರದಲ್ಲಿ ಗೆದ್ದ ಇಂಗ್ಲೆಂಡ್ 2019ರ ಚಾಂಪಿಯನ್ ಆಗಿ ಹೊರಹೊಮ್ಮಿತು.ದಶಕಗಳ ಬರಕೊರಗು ಎರಡೂ ದೂರವಾಯ್ತು.2023ರ ವಿಶ್ವಕಪ್ ಆತಿಥ್ಯ ಭಾರತ ವಹಿಸಿಕೊಂಡಿದೆ.

ನ್ಯೂಜಿಲೆಂಡ್ ಪರ ಹೆನ್ರಿ ನಿಕೋಲ್ಸ್ ಅತ್ಯಧಿಕ ಎಂದ್ರೆ 55 ರನ್ ಗಳಿಸಿದ್ರೆ,ಲೇಥಮ್ 47 ರನ್ ಗಳಿಸಿದ್ರು.ಕ್ಯಾಪ್ಟನ್ ಕೇನ್ ವಿಲಿಯಮ್ಸನ್ 30 ಬಿಟ್ಟರೆ ಇನ್ನುಳಿದವರರ್ಯಾರು 20ರ ಗಡಿ ದಾಟಲೇ ಇಲ್ಲ.ಕ್ರಿಸ್ ವೋಕ್ಸ್ ಹಾಗೂ ಫ್ಲಂಕೆಂಟ್ ತಲಾ 3 ವಿಕೆಟ್ ಕಬಳಿಸಿ ಯಶಸ್ವಿಯಾದರು.

ಇನ್ನು ಅದೇ ಸ್ಕೋರನ್ನು ದಾಖಲಿಸಿದ ಇಂಗ್ಲೆಂಡ್ 50 ಓವರ್ ಗಳಲ್ಲಿ ಸಮಬಲ ಸ್ಥಾಪಿಸಿತು.ಬೆನ್ ಸ್ಟೋಕ್ ಅತ್ಯಧಿಕ 84 ರನ್,ಜೋಸ್ ಬಟ್ಲರ್ 59 ಬಿಟ್ಟರೆ ಉಳಿದ ಯಾವ್ದೇ ಬ್ಯಾಟ್ಸ್ ಮನ್ ಉತ್ತಮ ಪ್ರದರ್ಶನ ತೋರಲಿಲ್ಲ. ನ್ಯೂಜಿಲೆಂಡ್ ಪರ ಫರ್ಗ್ಯುಸನ್ ಹಾಗೂ ಜೇಮ್ಸ್ ನೀಶಮ್ ತಲಾ 3 ವಿಕೆಟ್ ಗಳಿಸಿದ್ರು.

ಇಂಗ್ಲೆಂಡ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಇಂಗ್ಲೆಂಡ್ ಬೆನ್ ಸ್ಟೋಕ್ಸ್ ಪಂದ್ಯ ಪುರುಷ ಗೌರವಕ್ಕೆ ಭಾಜನರಾದ್ರು.

ಇಂಗ್ಲೆಂಡ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ಪಂದ್ಯ ಪುರುಷ ಗೌರವಕ್ಕೆ ಭಾಜನರಾದ್ರು.

Spread the love
Leave A Reply

Your email address will not be published.

Flash News