ಬಿಡುಗಡೆಗೆ ಕ್ಯೂನಲ್ಲಿವೆ ಸ್ಟಾರ್ ನಟರ ಚಿತ್ರಗಳು..

0

ವರ್ಷದ ಆರು ತಿಂಗಳು ಈಗಾಗ್ಲೇ ಮುಗಿದೋಗ್ತಿದೆ.ಸೂಪರ್ ಎನ್ನಲಾಗದಿದ್ರೂ ಒಂದಷ್ಟು ನಿರೀಕ್ಷೆ ಮುಟ್ಟುವಂಥ ಯಶಸ್ಸಿನ ಫಲಿತಾಂಶ ಕನ್ನಡ ಚಿತ್ರಗಳಿಗೆ ಸಿಕ್ಕಿದೆ.ಇನ್ನುಳಿದ ಆರು ತಿಂಗಳಲ್ಲಿ ತೆರೆಗೆ ಅಪ್ಪಳಿಸಲಿರುವ ಚಿತ್ರಗಳ ಸಂಖ್ಯೆ ಎಷ್ಟು ಗೊತ್ತಾ,ಕೇಳುದ್ರೆ ಅಚ್ಚರಿಯಾಗುತ್ತೆ.ಒಂದಲ್ಲಾ ಎರಡಲ್ಲ ನೂರಲ್ಲ,ಇನ್ನೂರಲ್ಲ ಬರೋಬ್ಬರಿ 250ಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಬರಲು ರೆಡಿಯಾಗಿವೆಯಂತೆ.

ಮೊದಲ ಆರು ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳು 99.ವರ್ಷದ ಅಂತ್ಯಕ್ಕೆ 250ಕ್ಕೂಹೆಚ್ಚು ಚಿತ್ರಗಳು ಬಿಡುಗಡೆಗೆ ರೆಡಿಯಾಗಲಿವೆಯಂತೆ.ಸಂತೋಷದ ವಿಷಯ ಎಂದ್ರೆ ತೆರೆಗೆ ಅಪ್ಪಳಿಸೊಕ್ಕೆ ಕಾದು ಕುಳಿತಿರುವ ಚಿತ್ರಗಳಲ್ಲಿ ಸ್ಟಾರ್ ನಟರ ಚಿತ್ರಗಳೇ ಹೆಚ್ಚಾಗಿವೆಯಂತೆ.

ಹಾಗೇ ನೋಡಿದ್ರೆ ತೆರೆ ಕಾಣಲು ಕಾದು ಕುಳಿತಿರುವ ಸ್ಟಾರ್ ನಟರ ಚಿತ್ರಗಳಲ್ಲಿ ಅಪ್ಪು ನಟನೆಯ ಯುವರತ್ನ,ಶಿವರಾಜ್ ಕುಮಾರ್ ನಟನೆಯ ಆಯುಷ್ಮಾನ್ ಭವ,ದುನಿಯಾ ವಿಜಯ್ ನಟನೆಯ ಸಲಗ,ಶರಣ್ ನಟನೆಯ ಅವತಾರ ಪುರುಷ,ಕೋಮಲ್ ನಟನೆಯ ಕೆಂಪೇಗೌಡ-2,ಜಗ್ಗೇಶ್ ನಟನೆಯ ತೋತಾಪುರಿಸುದೀಪ್ ನಟನೆಯ ಪೈಲ್ವಾನ್,ದರ್ಶನ್ ನಟನೆಯ ಒಡೆಯ,ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ,ಶ್ರೀಮುರುಳಿ ನಟನೆಯ ಭರಾಟೆ,ಗಣೇಶ್ ನಟನೆಯ ಗೀತಾ, ನೀನಾಸಂ ನಟನೆಯ ಗೋದ್ರಾ,ಬ್ರಹ್ಮಚಾರಿ, ಚಿರಂಜೀವಿ ಸರ್ಜಾ ನಟನೆಯ ಪೊಗರು ಚಿತ್ರಗಳು ಪ್ರಮುಖವಾಗಿವೆ.

ಹೀಗೆ ಸಾಕಷ್ಟು ಚಿತ್ರಗಳು ಇನ್ನುಳಿದ ಆರು ತಿಂಗಳಲ್ಲಿ ಬೆಳ್ಳಿ ತೆರೆಗೆ ಅಪ್ಪಳಿಸೊಕ್ಕೆ ಸನ್ನದ್ಧವಾಗಿದೆ. ಆರು ತಿಂಗಳಲ್ಲಿ ಬಿಡುಗಡೆಯಾದ ಸಾಕಷ್ಟು ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಗೆದ್ದರೆ,ಇನ್ನು ಸಾಕಷ್ಟು ಚಿತ್ರಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದವು.ಮುಂದಿನ ಆರು ತಿಂಗಳಲ್ಲಿ ಬಿಡುಗಡೆಯಾಗುವ ಚಿತ್ರಗಳು ಯಶಸ್ವಿಯಾಗಲಿ,ನಿರ್ಮಾಪಕರ ಜೇಬು ತುಂಬಲಿ ಎನ್ನುವುದೇ ಕನ್ನಡ ಫ್ಲ್ಯಾಶ್ ನ್ಯೂಸ್ ಬಳಗದ ಹಾರೈಕೆ..

Spread the love
Leave A Reply

Your email address will not be published.

Flash News