ತಿಮ್ಮಪ್ಪನ ಭಕ್ತಾಧಿಗಳಿಗೆ ಇದು ನಿಜಕ್ಕೂ ಗುಡ್ ನ್ಯೂಸ್..

0

ದೇವರ ಸನ್ನಿಧಿಗೆ ಬರೋದೇ ದರ್ಶನ ಮಾಡ್ಲಿಕ್ಕೆ.ದುರಂತ ಎಂದ್ರೆ ಹಾಗೆ ಬರೋರಲ್ಲಿ ಬಹುತೇಕ ಮಂದಿ ಬೈ ಇನ್ಫ್ಲುಯೆನ್ಸ್ ನಲ್ಲಿ ದೇವರ ದರ್ಶನ ಮಾಡಿಕೊಂಡು ಹೋಗ್ತಾರೆ.ಆದ್ರೆ ಅಡ್ವಾನ್ಸ್ ಬುಕ್ ಮಾಡ್ಕಂಡು ಕ್ಯೂನಲ್ಲಿ ನಿಲ್ಲದೆ,ಕಷ್ಟಪಡದೆ ದೇವರ ದರ್ಶನ ಮಾಡೋದ್ರಿಂದ ದೇವರು ಒಲಿದುಬಿಡ್ತಾನಾ.ವಿಶ್ವವಿಖ್ಯಾತ ತಿರುಪತಿಯಲ್ಲಿ ಆಗ್ತಿರುವುದು ಇದೇ..

ಆದ್ರೆ ಇನ್ಮುಂದೆ ವಿಶ್ವ ವಿಖ್ಯಾತ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಒಂದೇ ರೂಲ್ಸ್ ಅಪ್ಲೈ ಆಗಲಿದೆ.ದೊಡ್ಡವರಿಗೊಂದು ಸಣ್ಣವರಿಗೊಂದು ಎನ್ನುವ ರೀತಿಯಲ್ಲಿ ನಡೆಯುತ್ತಿದ್ದ ತಾರತಮ್ಯ ಇನ್ಮುಂದೆ ತಿಮ್ಮಪ್ಪನ ಸನ್ನಿಧಿಯಲ್ಲಿ ಇರುವುದಿಲ್ಲ.ಪ್ರತ್ಯೇಕ ವಿವಿಐಪಿ ದರ್ಶನದ ವ್ಯವಸ್ಥೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.ಇದು ಸಿಕ್ಕಾಪಟ್ಟೆ ತಾರತಮ್ಯ ಮಾಡಲಾಗ್ತಿದೆ ಎನ್ನುವ ಆಪಾದನೆಯನ್ನು ಕೂಡ ದೂರ ಮಾಡಿದಂತಾಗಿದೆ.

ತಿರುಪತಿ ತಿಮ್ಮಪ್ಪ ದೇವಸ್ತಾನ ಆಡಳಿತ ಮಂಡಳಿ ಇಂತದ್ದೊಂದು ಹೊಸ ಚಿಂತನೆಯನ್ನು ಮಾಡಿದ್ದು ಭಕ್ತಾಧಿಗಳ ನಡುವೆ ಉಂಟಾಗುತ್ತಿರುವ ಬೇಧಭಾವದ ಭಾವನೆ ದೇವಸ್ತಾನದ ಬಗ್ಗೆ ಇರುವ ಜನಾಭಿಪ್ರಾಯಕ್ಕೆ ತೊಡಕಾಗುತ್ತಿದೆ ಎನ್ನುವ ಕಾರಣಕ್ಕೆ ಸರಿಸಮನಾದ ದರ್ಶನ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

2012ರಲ್ಲಿ ಜಾರಿಗೊಂಡಿದ್ದ ವಿವಿಐಪಿ ದರ್ಶನ ವ್ಯವಸ್ಥೆಯಿಂದಾಗಿ ದೂರ ದೂರುಗಳಿಂದ ಬರುವ ಲಕ್ಷಾಂತರ ಸಾಮಾನ್ಯ ಭಕ್ತಾಧಿಗಳಿಗೆ ತುಂಬಾ ತೊಂದರೆ ಉಂಟಾಗುತ್ತಿತ್ತು.ತಾರತಮ್ಯ ಮಾಡುವುದೇ ಆದ್ರೆ ದೊಡ್ಡವರಿಗೊಂದು ತಿರುಪತಿ,ಶ್ರೀ ಸಾಮಾನ್ಯರಿಗೊಂದು ಪ್ರತ್ಯೇಕ ತಿರುಪತಿ ನಿರ್ಮಿಸಿಕೊಟ್ಬಿಡಿ ಎನ್ನುವ ಆಕ್ರೋಶವೂ ಭಕ್ತಾಧಿಗಳಿಂದ ವ್ಯಕ್ತವಾಗಿತ್ತು.

ಆದ್ರೆ ದೊಡ್ಡವರಿಂದ ದೇವಸ್ಥಾನದ ಆರ್ಥಿಕತೆಗೆ ಸಿಕ್ಕಾಪಟ್ಟೆ ಸಹಾಯ ಆಗುತ್ತಿದ್ದರಿಂದ ಈ ವಿಶೇಷ ದರ್ಶನ ವ್ಯವಸ್ಥೇಯನ್ನು ತೀವ್ರ ವಿರೋಧದದ ನಡುವೆಯೂ ಮುಂದುವರೆಸಲಾಗಿತ್ತು.ಒಂದ್ ಹಂತದವರೆಗೂ ಆಡಳಿತ ಮಂಡಳಿ ನಿರೀಕ್ಷಿಸಿದಂತೆಯೇ ಎಲ್ಲವೂ ಆಗ್ತಿತ್ತು.ಆದ್ರೆ ಇದು ಸಾರ್ವಜನಿಕ ವಲಯದಲ್ಲಿ ಆಡಳಿತ ಮಂಡಳಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಲು ಯಾವ ಕಾರಣವಾಯ್ತೋ,ವಿವಿಐಪಿ ದರ್ಶನ ವ್ಯವಸ್ಥೆ ರದ್ದುಪಡಿಸ್ಲಿಕ್ಕೆ ಚಿಂತನೆ ನಡೆಸಲಾಗ್ತಿತ್ತು,.ತೂಗಿ ಅಳೆದು ಇದೀಗ ಆ ವ್ಯವಸ್ಥೆ ಜಾರಿಗೊಳಿಸಲು ಧೈರ್ಯ ಮಾಡಿದೆ.ಇದರಿಂದಾಗಿ ತಿರುಪತಿ ಇನ್ಮುಂದೆ ಎಲ್ಲಾ ಭಕ್ತಾಧಿಗಳಿಗೂ ಸಮನಾದ ದರ್ಶನ ವ್ಯವಸ್ಥೆ ಲಭಿಸಲಿದೆ.ವಿವಿಐಪಿ ದರ್ಶನ ವ್ಯವಸ್ಥೆ ಯಾರಿಗೆ ಸಿಗ್ತಿತ್ತು.

ರಾಜಕಾರಣಿಗಳು,ಎಮ್ಮೆಲ್ಲೆ,ಎಂಪಿ,ಐಎಎಸ್.ಐಪಿಎಸ್,ಉದ್ಯಮಿಗಳು,ಗಣ್ಯರು,ಚಿತ್ರ ನಟರು,ನ್ಯಾಯಾಧೀಶರು ಈ ಕೆಟಗರಿಯಲ್ಲಿ ಬರುತ್ತಿದ್ದರು.ಇವರಿಗೆ ಸಾಲಿನಲ್ಲಿ ನಿಂತು ತಿಮ್ಮಪ್ಪನ ದರ್ಶನ ಮಾಡುವ ಗೋಜಲೇ ಇರುತ್ತಿರಲಿಲ್ಲ.ದೇವಸ್ಥಾನಕ್ಕೆ ಬಂದ್ರೆ ಐದತ್ತು ನಿಮಿಷಗಳಲ್ಲೇ ವಿಶೇಷ ಪ್ರವೇಶ ದ್ವಾರದ ಮೂಲಕ ದೇವರ ದರ್ಶನವಾಗುವ ವ್ಯವಸ್ಥೆ ಇತ್ತು.ಎಲ್-2 ಶ್ರೇಣಿ ದರ್ಶನ ವ್ಯವಸ್ಥೆ ಯಾರಿಗೆಲ್ಲಾ ಲಭ್ಯವಿತ್ತು.

ವಿವಿಐಪಿಗಳೆನಿಸಿಕೊಂಡವರಿಗೆ ಈ ವ್ಯವಸ್ಥೆ ಸಿಗ್ತಿತ್ತು.ಈ ಕೆಟಗರಿಯಲ್ಲಿ ಗಣ್ಯರಿಗೆ ಒಂದು ನಿಮಿಷದ ದರ್ಶನಕ್ಕೆ ಅವಕಾಶವಿತ್ತೇ ಹೊರತು,ಆರತಿಗೆ ಅವಕಾಶವಿರಲಿಲ್ಲ.ಇನ್ನು ಎಲ್-3 ಶ್ರೇಣಿ ದರ್ಶನ ವ್ಯವಸ್ಥೆಯಲ್ಲಿ ವಿವಿಐಪಿಗಳಿಗೆ ತಿಮ್ಮಪ್ಪನ ಮೂರ್ತಿಯನ್ನು ತೀರಾ ಹತ್ತಿರದಿಂದ ನೋಡುವ ಅವಕಾಶ ಸಿಗ್ತಿತ್ತು.ಆದರೆ ಇಲ್ಲಿ ದರ್ಶನದ ಕಾಲಾವಧಿ ತೀರಾ ಕಡಿಮೆ.ಕೆಲ ಸೆಕೆಂಡ್ ಗಳಲ್ಲಷ್ಟೇ ದೇವರ ಮುಂದೆ ನಿಂತುಕೊಳ್ಳುವ ಅವಕಾಶವಿತ್ತು.500 ರೂ ಪ್ರವೇಶ ಶುಲ್ಕ ಇಲ್ಲಿ ಫಿಕ್ಸ್,.ನೀವು ನಂಬಲಿಕ್ಕಿಲ್ಲ. ಕೆಟಗರಿಯಲ್ಲೇ ದಿನಕ್ಕೆ 3ವರೆಯಿಂದ 5 ಸಾವಿರದಷ್ಟು ವಿವಿಐಪಿಗಳು ಮೇಲ್ಕಂಡ ಮೊತ್ತ ಪಾವತಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.ಆದ್ರೆ ಇನ್ಮುಂದೆ ಪ್ರತ್ಯೇಕ ದರ್ಶನ ವ್ಯವಸ್ಥೆಗೆ ತಿಲಾಂಜಲಿ ಹಾಡುವ ಮೂಲಕ ದೇವಸ್ಥಾನದ ಆಡಳಿತ ಮಂಡಳಿ ಹೊಸದೊಂದು ಕ್ರಾಂತಿಗೆ ನಾಂದಿ ಹಾಡಿದೆ.

Spread the love
Leave A Reply

Your email address will not be published.

Flash News