ಭಾರತ ವಿರುದ್ಧ ಪಾಕ್ ಗೆ ಮುಖಭಂಗ:ಭಾರತಕ್ಕೆ ಪಾಕ್ ವಿರುದ್ದ ರಾಜತಾಂತ್ರಿಕ ಗೆಲುವು ಅರವಿಂದ್ ಜಾಧವ್ ಗೆ ವಿಧಿಸಿದ್ದ ಗಲ್ಲು ರದ್ದು..

0

ಇದು ಕೇವಲ ಒಬ್ಬ ವ್ಯಕ್ತಿಗಲ್ಲ..ಇಡೀ ದೇಶಕ್ಕೆ ಸಂದ ಜಯ. ಗೆಲುವು ಒಬ್ಬ ವ್ಯಕ್ತಿಗೆ ಸೀಮಿತಗೊಳಿಸೊಕ್ಕಿಂತ.

ಜಾಗತಿಕ ಮಟ್ಟದಲ್ಲಿ ಅನ್ವಯಿಸಿಕೊಳ್ಳುವುದು ಸೂಕ್ತ ಎನಿಸುತ್ತದೆ.ಮಾಡದ ತಪ್ಪಿಗೆ ಪಾಪಿ ದೇಶ ಪಾಕಿಸ್ತಾನದಿಂದ ಗಲ್ಲುಶಿಕ್ಷೆಗೆ ಒಳಗಾಗಿ,ಭಾರತದ ಸಮಯಪ್ರಜ್ಞೆಯಿಂದ ಅದು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿ ಅಂತಿಮವಾಗಿ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ನಿರಪರಾಧಿ ಎಂದು ಘೋಷಿಸಲ್ಪಟ್ಟ ಕುಲಭೂಷಣ್ ಯಾದವ್ ಪ್ರಕರಣ ಇತಿಹಾಸದಲ್ಲಿ ಒಂದು ಸ್ಮರಣೀಯ ಮೈಲಿಗಲ್ಲಾಗಿ ದಾಖಲಾಯ್ತು. ಕಾರಣಕ್ಕೆ ಜಾಧವ್ ಗಲ್ಲು ಆದೇಶ ರದ್ದತಿಯ ತೀರ್ಪನ್ನು ರಾಜತಾಂತ್ರಿಕ ಗೆಲುವೆಂದು ಬಣ್ಣಿಸಲಾಗ್ತಿದೆ.

ಭಾರತದ ನೆರೆಯ ದೇಶವಾಗಿ ಪಾಕಿಸ್ತಾನ ನಡೆದುಕೊಂಡ ರೀತಿಯನ್ನು ಅಂತರಾಷ್ಟ್ರೀಯ ಕೋರ್ಟ್ ಮುಖ್ಯಸ್ಥ ಅಬ್ದುಲ್ ಖಾವಿ ಅಹಮದ್ ಯೂಸುಫ್ ನೇತೃತ್ವದ ನ್ಯಾಯಾಧೀಶರ ತಂಡ ತೀವ್ರವಾಗಿ ಖಂಡಿಸಿದೆ.ಬಂಧನದ ಅವಧಿಯಲ್ಲಿ ಜಾಧವ್ ಅವರ ಸಂಬಂಧಿಗಳನ್ನು  ಭೇಟಿ ಮಾಡ್ಲಿಕ್ಕೂ ಅವಕಾಶ ನೀಡದೆ ಅಮಾನವೀಯವಾಗಿ ವರ್ತಿಸಿರುವುದನ್ನು ಕೂಡ ಕೋರ್ಟ್ ತೀಕ್ಷ್ಣವಾಗಿ ಟೀಕಿಸಿದೆ.ವಿಯೆನ್ನಾ ಒಪ್ಪಂದದ ನಿಯಮಗಳ ಅನ್ವಯವೇ ಮಿಲಿಟರಿ ಕೋರ್ಟ್  ತೀರ್ಪನ್ನು ಮರುಪರಿಶೀಲಿಸ್ಬೇಕೆಂದು ಆದೇಶಿಸಿದೆ.

ಅಂತರಾಷ್ಟ್ರೀಯ ನ್ಯಾಯಾಲಯದ 16 ಸದಸ್ಯರ ನ್ಯಾಯಪೀಠ ಪ್ರಕರಣದ ಸ್ಥೂಲತೆಯನ್ನು ನಾಲ್ಕು ಆಯಾಮಗಳಲ್ಲೂ ಪರಿಶೀಲಿಸಿಪರಾಮರ್ಷಿಸಿ ತೀರ್ಪು ನೀಡಿದೆ.ಅಧ್ಯಕ್ಷ ಅಬ್ದುಲ್ ಕ್ವಾವಿ ಯೂಸುಫ್ ಸೇರಿದಂತೆ 15 ನ್ಯಾಯಮೂರ್ತಿಗಳು ಭಾರತದ ವಾದವನ್ನೇ ಎತ್ತಿ ಹಿಡಿದ್ವು.ಆದ್ರೆ ನ್ಯಾಯಪೀಠದಲ್ಲಿದ್ದ ಪಾಕಿಸ್ತಾನ ಪರ ವಕೀಲ ತಸ್ಸಾದುದ್ ಹುಸ್ಸೇನಿ ಜಿಲಾನಿ ಮಾತ್ರ ಸಹಜವಾಗೇ ಭಾರತದ ವಿರುದ್ಧ ತಮ್ಮ ಅಭಿಪ್ರಾಯ ಮಂಡಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾದ್ರು.

*ಕುಲಭೂಷಣ್ ಯಾದವ್ ಯಾರು..ಅವರ ಮೇಲಿನ ಆರೋಪವೇನು..

ಅಂದ್ಹಾಗೆ ಕುಲಭೂಷಣ್ ಯಾದವ್ ಅವ್ರ ಮೇಲಿನ ಆರೋಪದ ಬಗ್ಗೆ ಮಾತ್ನಾಡುವುದಕ್ಕೆ ಮುನ್ನ ಯಾರು ಕುಲಭೂಷಣ್ ಯಾದವ್ ಎನ್ನೋದನ್ನು ಒಮ್ಮೆ ನೋಡಿಬಿಡೋಣ.

ಕುಲಭೂಷಣ್ ಯಾದವ್ ಭಾರತದ ನಿವೃತ್ತ ಸೇನಾಪಡೆ ಅಧಿಕಾರಿ.ಅವರ ವಿರುದ್ಧ ಭಯೋತ್ಪಾದನೆ ಮತ್ತು ಗೂಢಚರ್ಯೆ ಆಪಾದನೆ ಹೊರಿಸಿ ಪಾಕಿಸ್ತಾನದ ಮಿಲಿಟರಿ ಕೋರ್ಟ್  ಅನೇಕ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಅಂತಿಮವಾಗಿ ಗಲ್ಲು ಶಿಕ್ಷೆ ನೀಡಿತು.

ಕುಲಭೂಷಣ್ ಅವರು ಪಾಕಿಸ್ತಾನದಲ್ಲಿದ್ದುಕೊಂಡು ಭಯೋತ್ಪಾದನೆ ಹಾಗೂ ಗೂಢಚರ್ಯೆ ಕೆಲಸ ಮಾಡಿದ್ದೆರು ಎಂದು ಪಾಕಿಸ್ತಾನದ ಮಿಲಿಟರಿ ಅವರನ್ನು 2016 ಮಾರ್ಚ್ 3 ರಂದು ಬಂಧಿಸಿತ್ತು.ಬಲೂಚಿಸ್ತಾನದಲ್ಲಿದಲ್ಲಿ ಗೂಢಚರ್ಯೆ ಮಾಡುತ್ತಿದ್ದಾಗ ಕುಲಭೂಷಣ್ ಸಿಕ್ಕಾಕೊಂಡ್ರು ಎನ್ನುವುದು ಪಾಕಿಸ್ತಾನದ ವಾದವಾಗಿತ್ತು.ಆದ್ರೆ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಿದ ಭಾರತ,ಪಾಕಿಸ್ತಾನದ ಗೂಢಚರ್ಯೆ ಸಂಸ್ಥೆ ಐಎಸ್ಐ ಕುಲಭೂಷಣ್ ಅವರನ್ನು ಬಂಧಿಸಿದ್ದು ಇರಾನ್ ನಿಂದ ಎಂದು ಪ್ರಬಲವಾಗಿ ತನ್ನ ವಾದ ಮಂಡಿಸಿತ್ತು.ತಾವೊಬ್ಬ ಗೂಢಚಾರಿ ಅಧಿಕಾರಿ ಎಂದು ಖುದ್ದು ಕುಲಭೂಷಣ್ ಅವ್ರೇ ಒಪ್ಪಿಕೊಂಡಿದ್ದಾರೆನ್ನುವುದು ಪಾಕ್ ಮತ್ತೊಂದು ಮೊಂಡು ವಾದ. ಸಾಕ್ಷ್ಯಗಳನ್ನು ಆಧರಿಸಿಯೇ ಅಲ್ಲಿನ ಮಿಲಿಟರಿ ಕೋರ್ಟ್ ಕುಲಭೂಷಣ್ ಅವರಿಗೆ 2017 ಏಪ್ರಿಲ್ ನಲ್ಲಿ ಮರಣದಂಡನೆ ವಿಧಿಸಿತ್ತು.

****ಭಾರತ ಏನ್ ವಾದಿಸಿತ್ತು:

ಕುಲಭೂಷಣ್ ಜಾಧವ್ ಅವರನ್ನು ಗಲ್ಲುಶಿಕ್ಷೆಯಿಂದ ಪಾರು ಮಾಡುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಭಾರತ ಪಾಕಿಸ್ತಾನದೊಂದಿಗೆ ನಡೆಸಿದ ಕಾನೂನಾತ್ಮಕ ಸಮರ ಹೇಗಿತ್ತು ಗೊತ್ತಾ..ಇಲ್ಲಿದೆ ನೋಡಿ ಅದರ ಕಂಪ್ಲೀಟ್ ಡೀಟೈಲ್ಸ್.

1-ಜಾಧವ್ ಅವರನ್ನು ಬಂಧಿಸಿದ ರೀತಿ ವಿಯೆನ್ನಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ.ಅವರನ್ನು ಭೇಟಿಯಾಗೊಕ್ಕೆ ಯಾರೊಬ್ಬರಿಗೂ ಅವಕಾಶ ಕಲ್ಪಿಸದಿರುವುದು ಅಕ್ಷಮ್ಯ.ಅವರಿಗೆ ಗಲ್ಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ಮಿಲಿಟರಿ ವ್ಯವಸ್ಥೆಯ ಕ್ರಮವೂ ಆಕ್ಷೇಪಾರ್ಹ.

2-ಮಿಲಿಟರಿ ಕೋರ್ಟ್ ಜಾಧವ್ ಗೆ ಗಲ್ಲು ಶಿಕ್ಷೆ ನೀಡಿದ ತೀರ್ಪನ್ನು ಒಂದು ಜವಾಬ್ದಾರಿಯುತ ಸರ್ಕಾರವಾಗಿ ಪಾಕಿಸ್ತಾನ ಅದನ್ನು ಪ್ರಶ್ನಿಸಿ ಅದರ ವಿರುದ್ಧ ಏನಾದ್ರೊಂದು ಕ್ರಮ ಕೈಗೊಳ್ಳಬೇಕಿತ್ತು.

3-ಯಾವುದೇ ಅಧೀಕೃತ ನ್ಯಾಯಾಲಯದ ಮಾನ್ಯತೆ ಇಲ್ಲದಿರುವ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸ್ಬೇಕು.ಅದು ನೀಡಿರುವ ತೀರ್ಪನ್ನು ಅಮಾನ್ಯಗೊಳಿಸ್ಬೇಕು.

4-ಜಾಧವ್ ಅವರನ್ನು ಗಲ್ಲುಶಿಕ್ಷೆಗೆ ಒಳಪಡಿಸಿದ್ದು ತಪ್ಪಾಯ್ತೆಂದು ಒಪ್ಪಿಕೊಂಡು ತಕ್ಷಣ ಅವರನ್ನು ಬಿಡುಗಡೆಗೊಳಿಸಿ ಭಾರತಕ್ಕೆ ಹಸ್ತಾಂತರಿಸ್ಬೇಕು.

5-ಜಾಧವ್ ಬಿಡುಗಡೆಗೆ ಕಾನೂನಾತ್ಮಕ ತೊಡಕಾಗುತ್ತದೆ ಎನ್ನೋದೇ ಆಗಿದ್ದಲ್ಲಿ ಅವಧಿಯಲ್ಲಿ ಅವರ ಭೇಟಿಗೆ ಕುಟುಂಬಸ್ಥರು ಹಾಗೂ ಕಾನೂನು ಸಲಹೆಗಾರರ ಅವಕಾಶ ಕಲ್ಪಿಸಬೇಕು.

6-ಜಾಧವ್ ಅವರ ಪ್ರಕರಣವನ್ನು ಮಿಲಿಟರಿ ಕೋರ್ಟ್ ನಿಂದ ಸಿವಿಲ್ ನ್ಯಾಯಾಲಯಕ್ಕೆ ವರ್ಗಾಯಿಸಿ ವಿಚಾರಣೆ ನಡೆಸ್ಬೇಕು.

7-ಭಾರತದ ಕಾನೂನು ಸಲಹೆಗಾರರನ್ನು ಭೇಟಿಯಾಗೊಕ್ಕೆ ಅವಕಾಶ ಮಾಡಿಕೊಡ್ಬೇಕು. ನಿಟ್ಟಿನಲ್ಲಿ ಈವರೆಗೆ 100ಕ್ಕೂ ಹೆಚ್ಚು ಬಾರಿ ಮನವಿ ಮಾಡಲಾಗಿದ್ದರೂ ಅದನ್ನು ಧಿಕ್ಕರಿಸಲಾಗುತ್ತಿದೆ.

ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಮೊಂಡುತನ ಮುಂದುವರೆಸಿದ್ದ ಪಾಕಿಸ್ತಾನ ನಮ್ಮ ರಣತಂತ್ರಕ್ಕೆ ಪ್ರತಿಯಾಗಿ ನಡೆಸಿದ ಕಾನೂನಾತ್ಮಕ ಸಮರ ಹೀಗಿತ್ತು ನೋಡಿ.

*******ಪಾಕ್ ಏನ್ ವಾದಿಸಿತ್ತು ಗೊತ್ತಾ..

1-ಜಾಧವ್ ಮಾಡಿದ್ದು ಘನಘೋರ ತಪ್ಪು,ಹಾಗಾಗಿ ಜಾಧವ್ ಬಿಡುಗಡೆಗೆ ಮಾಡಿದ ಭಾರತದ ಎಲ್ಲಾ ತೆರನಾದ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು.

2-ಮಿಲಿಟರಿ ನ್ಯಾಯಾಲಯದ ತೀರ್ಪು ಸರಿಯಲ್ಲ.. ನಿಟ್ಟಿನಲ್ಲಿ ವಾದ ಮಂಡಿಸಿದ ಪಾಕ್ ಕಾನೂನು ಪಂಡಿತರಿಗೆ ಜ್ಞಾನದ ಕೊರತೆ ಎದ್ದು ಕಾಣುತ್ತಿದೆ ಎನ್ನುವ ಭಾರತದ ವಾದವನ್ನು ಒಪ್ಪಲು ಸಾಧ್ಯವೇ ಇಲ್ಲ.ನಮ್ಮ ವಾದ ಸರಿಯಾಗೇ ಇದೆ.ತೀರ್ಪು ನೀಡುವ ಸಂದರ್ಭದಲ್ಲಿ ನಾವು ಯಾವುದೇ ಅವಸರ ಮಾಡಿಲ್ಲ. ನಿಟ್ಟಿನಲ್ಲಿ ನಾವು ನಮ್ಮ ಪರಿಮಿತಿಯಲ್ಲಿ ತೀರ್ಪು ನೀಡಲು ಶಕ್ತರಷ್ಟೇ ಅಲ್ಲ ಸ್ವಾತಂತ್ರ್ಯರೂ ಆಗಿದ್ದೇವೆ.

3-ಜಾಧವ್ ಗೆ ಗಲ್ಲುಶಿಕ್ಷೆಯಂಥ ಕಠಿಣ ಶಿಕ್ಷೆ ವಿಧಿಸಿದ್ದು ಪೂರ್ವಾಗ್ರಹಪೀಡಿತರಾಗಲ್ಲ.ಅವ್ರು ರಾಜತಾಂತ್ರಿಕ ದೋಷ ಎನ್ನಬಹುದಾದ ಘನಘೋರ ತಪ್ಪು ಮಾಡಿರುವುದು ಸಾಬೀತಾಗಿದೆ.ಅದನ್ನು ಅವರೇ ಒಪ್ಪಿಕೊಂಡಿದ್ದಾರೆ.ಅವರ ಹೇಳಿಕೆಗಳ ಆಧಾರದಲ್ಲೇ ಗಲ್ಲುಶಿಕ್ಷೆ ವಿಧಿಸಲಾಗಿದೆ.

4-ತೀರ್ಪು ಮರುಪರಿಶೀಲಿಸಿ ಅದಕ್ಕೆ ಪುನರ್ ಪರಿಶೀಲನೆ ಅರ್ಜಿ ಸಲ್ಲಿಕೆಗೆ ಜಾಧವ್ ಗೆ ಅವಕಾಶ ಕೊಟ್ಟಿದ್ವಿ.ಆದ್ರೆ ಅದರ ಬಗ್ಗೆ ಅವರಿಗೇನೆ ಆಸಕ್ತಿ ಇದ್ದಂತಿರಲಿಲ್ಲ.ಇದರಲ್ಲಿ ನಮ್ಮ ತಪ್ಪೇನಿದೆ.

*******ಅಂತರಾಷ್ಟ್ರೀಯ ನ್ಯಾಯಾಲಯ ಕೊಟ್ಟ ತೀರ್ಪಿನ ಮುಖ್ಯಾಂಶಗಳು.

1-ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತದ ಮನವಿ ಜೊತೆಗೆ ಒಟ್ಟಾರೆ ಪ್ರಕರಣವನ್ನು ಪರಾಮರ್ಷಿಸುವ ಸರ್ವೋಚ್ಛ ಅಧಿಕಾರ ನಮಗಿದೆ.ಜಾಧವ್ ಗೆ ಪಾಕ್ ಮಿಲಿಟರಿ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ರದ್ದುಪಡಿಸಲಾಗಿದೆ.

2-ಕುಲಭೂಷಣ್ ಪ್ರಕರಣದಲ್ಲಿ ಪಾಕಿಸ್ತಾನ ವಿಯೆನ್ನಾ ಒಪ್ಪಂದ ವಿಧಿ-36 ನಿಯಾಮವಳಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ.

3-ಕುಲಭೂಷಣ್ ಅವರಿಗೆ ರಾಜತಾಂತ್ರಿಕ ಹಾಗೂ ಕಾನೂನಾತ್ಮಕವಾಗಿ ಹೋರಾಡಲು ಬೇಕಾದ ಎಲ್ಲಾ ಅವಕಾಶ ಕಸಿದುಕೊಳ್ಲಲಾಗಿದೆ.ಅವರಿಗೆ ಭಾರತದ ಯಾವುದೇ ಕಾನೂನು ತಜ್ಞರನ್ನು ಭೇಟಿ ಮಾಡಲು ಪಾಕಿಸ್ತಾನ ಅವಕಾಶ ನಿರಾಕರಿಸಿದ್ದು ತಪ್ಪು.

4-ಕುಲಭೂಷಣ್ ಅವರಿಗೆ ಇರುವ ಎಲ್ಲಾ ಹಕ್ಕುಅವಕಾಶಅಧಿಕಾರಿಗಳ ಮಾಹಿತಿಯನ್ನು ತತ್ ಕ್ಷಣಕ್ಕೆ ಜಾರಿಗೆ ಬರುವಂತೆ ನೀಡಬೇಕು.ಭಾರತದಿಂದ ಅವರ ಕುಟುಂಬಸ್ಥರು,ರಾಜತಾಂತ್ರಿಕರು ಹಾಗೂ ಕಾನೂನುಪಂಡಿತರನ್ನು ಭೇಟಿ ಮಾಡೊಕ್ಕೆ ಅವಕಾಶ ನೀಡಬೇಕು.

5-ಜಾಧವ್ ಅವರಿಗೆ ಪಾಕಿಸ್ತಾನ ನೀಡಿರುವ ಗಲ್ಲುಶಿಕ್ಷೆಯ ತೀರ್ಪನ್ನು ರದ್ದುಪಡಿಸ್ಬೇಕು, ನಿಟ್ಟಿನಲ್ಲಿ ಮರುಪರಿಶೀಲನೆ ನಡೆಸ್ಬೇಕು.ನ್ಯಾಯಸಮ್ಮತವಾದ ವಿಚಾರಣೆಗೆ ಪಾಕಿಸ್ತಾನ ಮುಂದಾಗಲೇಬೇಕು,.ಇದನ್ನು ಉಲ್ಲಂಘಿಸಿದ್ರೆ ಅಂತರಾಷ್ಟ್ರೀಯ ನ್ಯಾಯಾಲಯ ನೀಡುವ ಆದೇಶ ಪಾಲನೆಗೆ ಬದ್ಧವಾಗಬೇಕಾಗುತ್ತದೆ.

*****ಜಾಧವ್ ಅವರನ್ನು ಅಪಹರಿಸಿದ್ದು ಯಾರು.

ಭಾರತಕ್ಕೆ ಸಿಕ್ಕಿರುವ ಸಾಕ್ಷ್ಯಾಧಾರಗಳ ಆಧಾರದಲ್ಲಿ ಹೇಳುವುದಾದ್ರೆ ಜೈಷ್ ಉಲ್ ಅಬ್ದಲ್ ಎನ್ನುವ ಉಗ್ರಗಾಮಿ ಸಂಘಟನೆ ಜಾದವ್ ಅವರನ್ನು ಅಪಹರಿಸಿತ್ತು.ಶಸ್ತ್ರ ಸಜ್ಜಿತ ತಂಡದಿಂದ ಬಂಧನಕ್ಕೊಳಗಾದ ಅವರನ್ನು ಅದೇ ತಂಡ ಪಾಕಿಸ್ತಾನದ ಐಎಸ್ಐ ಗೆ ಒಪ್ಪಿಸ್ತು.ಭಾರತದೊಂದಿಗೆ ಇರುವ ಶತೃತ್ವದ ಹಗೆ ತೀರಿಸಿಕೊಳ್ಳಲು ಜಾಧವ್ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಜೈಲಿಗೆ ಕಳುಹಿಸಲಾಯ್ತು.

*****ತೀರ್ಪಿನಿಂದ ಏನಾಗ್ಬೋದು

1-ಜಾಧವ್ ಗೆ ವಿಧಿಸಲಾದ ಶಿಕ್ಷೆಯ ಮರುಪರಿಶೀಲನೆ ಮಾಡಬೇಕಾಗುತ್ತದೆ.ಅವ್ತ ವಿರುದ್ಧದ ಆರೋಪದ ಸತ್ಯಾಸತ್ಯತೆ ಹಾಗೂ ಅದರ ಹಿಂದೆ ಷಡ್ಯಂತ್ರಹುನ್ನಾರದುರುದ್ದೇಶ ಅಡಗಿರುವ ಬಗ್ಗೆ ಪರಿಶೀಲನೆ ನಡೆಸಬೇಕಾಗುತ್ತದೆ.

2-ಜಾಧವ್ ಅವರನ್ನು ಸ್ಥಿತಿಗೆ ತರಲು ಕಾರಣವಾದ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿಯೂ ಕೆಲಸ ನಡೆಯಬೇಕಾಗುತ್ತದೆ.

3-ತೀರ್ಪಿನಿಂದಾಗಿ ಜಾಧವ್ ಗೆ ಇದ್ದ ನಿರ್ಬಂಧಗಳೆಲ್ಲವೂ ಮುಕ್ತವಾಗಲಿವೆ.ಅನೇಕ ವರ್ಷಗಳಿಂದ್ಲೂ ನೋಡಲಿಕ್ಕೆ ಸಾಧ್ಯವಾಗದಿದ್ದ ಕುಟುಂಬದವರ ಭೇಟಿಗೆ ಅವಕಾಶ ಲಭ್ಯವಾಗಲಿದೆ.

4-ತನ್ನ ಮೇಲಿರುವ ಆಪಾದನೆಗಳಿಂದೆಲ್ಲಾ ಮುಕ್ತಿ ಪಡೆಯೊಕ್ಕೆ ಅಗತ್ಯವಾದ ಎಲ್ಲಾ ಕಾನೂನಾತ್ಮಕ ನೆರವು ಪಡೆಯಲು ಕೂಡ ಅವಕಾಶ ಸಿಗಲಿದೆ.

*****ಬೇಹುಗಾರಿಕೆಗಲ್ಲು ಶಿಕ್ಷೆಮರಣದಂಡನೆ ರದ್ದು ಸಾಗಿ ಬಂದ ದಾರಿಯ ಪಕ್ಷಿನೋಟ.

2016,ಮಾರ್ಚ್-3:ಬಲೂಚಿಸ್ಥಾನದ ಮಶ್ಕೆಲ್ ನಲ್ಲಿ ಭಾರತದ ಕುಲಭೂಷಣ್ ಜಾಧವ್ ಅವರ ಬಂಧನ,ಬೇಹುಗಾರಿಕೆ ಹಿನ್ನಲೆಯಲ್ಲಿ ಇರಾನ್ ಮೂಲಕ ಪಾಕಿಸ್ತಾನಕ್ಕೆ ನುಸುಳಿದ ಆರೋಪದಲ್ಲಿ ಬಂಧನವಾಗಿದೆ ಎಂದು ಪಾಕಿಸ್ತಾನ ಘೋಷಣೆ.

2016,ಮಾರ್ಚ್ 25:ತಾನೊಬ್ಬ ಭಾರತದ ನೌಕಾಪಡೆಯ ಅಧಿಕಾರಿ ಎಂದು ಜಾಧವ್ ಹೇಳಿಕೆ ನೀಡಿದ ಜಾಧವ್ ಅವರ ವೀಡಿಯೋ ಬಿಡುಗಡೆ ಮಾಡಿದ ಪಾಕಿಸ್ತಾನ.ಸ್ಪಷ್ಟನೆ ಕೇಳಲಿಕ್ಕೆ ಜಾಧವ್ ಭೇಟಿಗೆ ಅವಕಾಶ ಕೋರಿದ ಭಾರತದ ರಾಯಭಾರಿ ಕಛೇರಿ.ಅವಕಾಶ ನಿರಾಕರಣೆ

2016,ಏಪ್ರಿಲ್-8:ಕ್ವೆಟ್ಟಾದ ಭಯೋತ್ಪಾದನೆ ನಿಗ್ರಹ ಸಂಸ್ಥೆಯಲ್ಲಿ ಜಾಧವ್ ವಿರುದ್ಧ ಮೊದಲ ಎಫ್ ಐಆರ್ ದಾಖಲು

2017,ಜನವರಿ:ಜಾಧವ್ ವಿರುದ್ಧದ ಆರೋಪ,ಅವರ ಬಂಧನ,ತಪ್ಪೊಪ್ಪಿಗೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ಒಳಗೊಂಡ ದಾಖಲೆಗಳನ್ನು ವಿಶ್ವಸಂಸ್ಥೆ ಕಛೇರಿಗೆ  ಒಪ್ಪಿಸಿದ ಪಾಕಿಸ್ತಾನದ ಪ್ರತಿನಿಧಿ ಮಲೀಹಾ ಲೋಧಿ.

2017,ಏಪ್ರಿಲ್-10:ಪಾಕಿಸ್ತಾನದ ಮಿಲಿಟರಿ ಕೋರ್ಟ್ ನಲ್ಲಿ ವಿಚಾರಣೆಗೆ ಬಂದ ಜಾಧವ್ ಪ್ರಕರಣ,.ಜಾಧವ್ ಎಸಗಿದ್ದು ಮಹಾಪರಾಧರಾಜತಾಂತ್ರಿಕ ದ್ರೋಹ ಎನ್ನುವ ತೀರ್ಮಾನಕ್ಕೆ ಬಂದ ಕೋರ್ಟ್ ಜಾಧವ್ ಗೆ ಗಲ್ಲು ಶಿಕ್ಷೆ ಪ್ರಕಟ.

2017,ಮೇ-8:ಜಾಧವ್ ಪ್ರಕರಣದಲ್ಲಿ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಪಾಕಿಸ್ತಾನದ ವಿರುದ್ಧ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ ಭಾರತ.

2017,ಮೇ-18:ಜಾಧವ್ ಅವರನ್ನು ಗಲ್ಲಿಗೇರಿಸುವಂತಿಲ್ಲ,ಕೋರ್ಟ್ ನಲ್ಲಿ ವಿಚಾರಣೆ ಅಂತ್ಯವಾಗುವ ತನಕ ಗಲ್ಲುಶಿಕ್ಷೆಯನ್ನು ಜಾರಿಗೊಳಿಸುವಂತಿಲ್ಲ ಎಂದು ಅಂತರಾಷ್ಟ್ರೀಯ ನ್ಯಾಯಾಲಯ ಕಟ್ಟಪ್ಪಣೆ.ಆದ್ರೆ ತೀರ್ಪು ಅಂತರಾಷ್ಟ್ರೀಯ ನ್ಯಾಯಾಲಯದ ವ್ಯಾಪ್ತಿಗೆ ಬರುವುದೇ ಇಲ್ಲ ಎಂದು ಮೊಂಡುವಾದ ಮಂಡಿಸಿದ ಪಾಕಿಸ್ತಾನ.

2017,ಸೆಪ್ಟೆಂಬರ್:ಹತ್ತಕ್ಕೂ ಹೆಚ್ಚು ಬಾರಿ ಮನವಿ ಸಲ್ಲಿಸಿದ್ರೂ ಭಾರತದ ರಾಯಭಾರ ಸಿಬ್ಬಂದಿ ಹಾಗೂ ಕಾನೂನು ತಜ್ಞರು ಅಥ್ವಾ ಕುಟುಂಬದವರೊಂದಿಗೆ ಮಾತ್ನಾಡಲು ಅವಕಾಶ ಕೊಡದಿರುವ ಪಾಕಿಸ್ತಾನದ ಕ್ರಮ ಪ್ರಶ್ನಿಸಿ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಮನವಿ.ವಿಯೆನ್ನಾ ಒಪ್ಪಂದ ಉಲ್ಲಂಘನೆಯಾಗಿದೆ ಎಂದು ಮನವರಿಕೆ.

2017,ನವೆಂಬರ್-10:ಜಾಧವ್ ಅವರನ್ನು ಭೇಟಿ ಮಾಡಲು ಅವರ ಕುಟುಂಬದವರಿಗೆ ಅವಕಾಶ ಮಾಡಿಕೊಡುತ್ತಿರುವ ಬಗ್ಗೆ ಪಾಕಿಸ್ತಾನ ಘೋಷಣೆ.

2017,ಡಿಸೆಂಬರ್ 13:ಜಾಧವ್ ಗೂಢಚರ್ಯೆ ಮಾಡಿದ್ದು ರಾಜತಾಂತ್ರಿಕ ದ್ರೋಹ. ತಪ್ಪು ವಿಯೆನ್ನಾ ಒಪ್ಪಂದದ ವ್ಯಾಪ್ತಿಗೇನೆ ಬರುವುದಿಲ್ಲ ಎಂಬ ವಾದ ಮುಂದಿಟ್ಟ ಪಾಕಿಸ್ತಾನ’.

2017,ಡಿಸೆಂಬರ್ 25-:ಸರಿಸುಮಾರು 22 ತಿಂಗಳು ಕಾರಾಗೃಹದಲ್ಲಿದ್ದ ಜಾಧವ್ ಅವರನ್ನು ಕೊನೆಗೂ ಭೇಟಿಯಾದ ಜಾಧವ್ ಕುಟುಂಬ.ತಾಯಿ ಆವಂತಿ,ಪತ್ನಿ ಚೇತನ್ ಕುಲ್,ಪಾಕ್ ವಿದೇಶಾಂಗ ಸಚಿವಾಲಯ ಕಛೇರಿಯಲ್ಲಿ ಭೇಟಿಗೆ ಅವಕಾಶ ಕೊಟ್ರೂ ಪ್ರೈವಸಿಗೆ ಅವಕಾಶ ನೀಡದ ಪಾಕಿಸ್ತಾನ,ಭೇಟಿಗೆ ಬಂದ ಕುಟುಂಬವನ್ನು ಭದ್ರತಾ ತಪಾಸಣೆ ನೆವದಲ್ಲಿ ಮತ್ತೆ ಶೋಷಿಸಿ ಅವಮಾನ ಹಾಗೂ ಅಮಾನವೀಯತೆ ಮೆರೆದ ಪಾಕಿಸ್ತಾನ.

2019,ಫೆಬ್ರವರಿ 18:ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಾಮುಖಿಯಾದ ಭಾರತಪಾಕಿಸ್ತಾನ.ನಾಲ್ಕು ದಿನ ನಿರಂತರ ವಿಚಾರಣೆ ನಡೆದ ಬಳಿಕ,ಮರಣದಂಡನೆ ರದ್ದತಿ ನಿರ್ಧಾರ.ರಾಯಭಾರ ಕಛೇರಿ ಸಂಪರ್ಕಕ್ಕೆ ಅವಕಾಶ ನೀಡುವಂತೆ ಕೋರ್ಟ್ ಆದೇಶ.

2019,ಜುಲೈ-4:ಜುಲೈ 17ಕ್ಕೆ ತೀರ್ಪು ಕಾಯ್ದಿರಿಸಿ ತೀರ್ಪು ನೀಡಿದ ಅಂತರಾಷ್ಟ್ರೀಯ ನ್ಯಾಯಾಲಯ.

Spread the love
Leave A Reply

Your email address will not be published.

Flash News