300 ವರ್ಷ ಹಳೆಯ ನಂದಿ ವಿಗ್ರಹಗಳು ಪತ್ತೆ.

0

ಮೈಸೂರಿನಲ್ಲಿ ವಿಶಿಷ್ಟವಾದ ಘಟನೆ ನಡೆದಿದೆ.ತಾಲೂಕಿನ ಜಯಪುರದ ಅರಸಿನಕೆರೆ ಗ್ರಾಮದಲ್ಲಿ 300 ವರ್ಷದ ಹಳೆಯದ್ದೆನ್ನಲಾದ ಜೋಡಿ ನಂದಿ ವಿಗ್ರಹಗಳು ಪತ್ತೆಯಾಗಿವೆ.ಚಾಮುಂಡಿ ಬೆಟ್ಟದಲ್ಲಿರುವ ನಂದಿಯನ್ನೇ ಹೋಲುವ  ವಿಗ್ರಹಗಳ ಪೈಕಿ ಒಂದು 14 ಅಡಿ ಉದ್ದ,10 ಅಡಿ ಅಗಲವಿದೆ.ಮತ್ತೊಂದಯ 12 ಅಡಿ ಉದ್ದ 10 ಅಡಿ ಅಗಲವಿದೆ.ಇದಿಷ್ಟೇ ಅಲ್ಲ ಈ ಜೋಡಿ ವಿಗ್ರಹಗಳ ಜೊತೆಗೆ ಇನ್ನು 15 ವಿಗ್ರಹಗಳು ಪತ್ತೆಯಾಗಿ ಎಲ್ಲರಲ್ಲೂ ಕುತೂಹಲ ಮೂಡಿಸಿವೆ.

ಇವು 16 ಅಥವಾ 17ನೇ ಶತಮಾನ ವಿಗ್ರಹ ಎಂದು ಹೇಳಲಾಗ್ತಿದ್ದು,ಇವುಗಳ ಜೀರ್ಣೋದ್ಧಾರಕ್ಕಾಗಿ ಅಂದಿನ ಮಹಾರಾಜ ಚಾಮರಾಜ ಒಡೆಯರ್ ಆಗಮಿಸಿದ್ರು.ಆದ್ರೆಎಷ್ಟೇ ಪ್ರಯತ್ನ ಮಾಡಿದ್ರು ವಿಗ್ರಹ ಮೇಲೆತ್ತಲು ಸಫಲವಾಗಿರಲಿಲ್ಲ.

ಅಂದು ಮಹಾರಾಜರು ಪೂಜೆ ಸಲ್ಲಿಸಿ ವಾಪಸ್ಸಾಗಿದ್ರು.ಆದ್ರೆ ಇದೀಗ ಮತ್ತೆ ಹಳ್ಳ ತೆಗೆಯುವ ವೇಳೆ‌ಪತ್ತೆಯಾದ ಬೃಹತ್ ವಿಗ್ರಹಗಳ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಮಾಹಿತಿಪಡೆದು  ಸ್ಥಳಕ್ಕೆ ಬಂದ ಅಧಿಕಾರಿಗಳು ವಿಗ್ರಹಗಳನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ.

Spread the love
Leave A Reply

Your email address will not be published.

Flash News