ವಾಯುಗಡಿ ನಿರ್ಬಂಧಿಸಿದ್ದಕ್ಕೆ ಪಾಕ್ ಗೆ ಭಾರೀ ನಷ್ಟ.

0
  1. ವಾಯು ಗಡಿ ನಿರ್ಬಂಧದಿಂದಾಗಿ ಪಾಕಿಸ್ತಾನಕ್ಕೆ ಬರೊಬ್ಬರಿ 50 ಮಿಲಿಯನ್ ಡಾಲರ್ ನಷ್ಟ ಸಂಭವಿಸಿದೆ.ಬಾಲಾಕೋಟ್ ದಾಳಿ ಬಳಿಕ ತನ್ನ ವಾಯು ಗಡಿ ನಿರ್ಬಂಧಿಸಿದ್ದ ಪಾಕಿಸ್ತಾನ ಈ ಘಟನೆ ತರುವಾಯ ಧೀರ್ಘಾವಧಿ ಎಂದ್ರೆ  ಬರೊಬ್ಬರಿ ೫ ತಿಂಗಳಕಾಲ ನಿರ್ಬಂಧ ಹೇರಿತ್ತು.ಇದರಿಂದ ಭಾರೀ ತೊಂದರೆಯಾಗಿತ್ತು.ಅಷ್ಟೇ ಅಲ್ಲ,ವಾಯುಗಡಿ ನಿರ್ಬಂಧದಿಂದಾಗಿ ಪಾಕಿಸ್ತಾನಕ್ಕೆ ಬರೊಬ್ಬರಿ ೫೦ ಮಿಲಿಯನ್ ಡಾಲರ್ ನಷ್ಟ ಸಂಭವಿಸಿತ್ತೆಂದು ಮಾದ್ಯಮಗಳು ವರದಿ ಮಾಡಿದ್ದವು.

ತನ್ನ ತಪ್ಪಿನಿಂದ ಸಾಕಷ್ಟು ನಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ಒಂದು ತಪ್ಪಿನ ನಂತ್ರ ಮತ್ತೊಂದು ತಪ್ಪು ಮಾಡ್ತಿರುವುದರಿಂದ ವ್ಯಾಪಕ ನಷ್ಟ ಅನುಭವಿಸುತ್ತಿದೆ.ಅದರ ಪರಿಸ್ಥಿತಿ ಹೇಗಾಗಿದೆ ಎಂದ್ರೆ ಆರ್ಥಿಕ ಸಂಕಷ್ಟದಿಂದ ಕೆಂಗಟ್ಟಿರುವುದರಿಂದ ನೆರವಿಗಾಗಿ ವಿಶ್ವಹಣಕಾಸು ನಿಧಿ,ಯುಎಇ ಸೇರಿದಂತೆ ಅರಬ್ ರಾಷ್ಟ್ರಗಳ ಬಳಿ ಸಹಾಯಕ್ಕೆ ಅಂಗಲಾಚುತ್ತಿದೆ.

ಇಂಥಾ ಗಾಯದ ನಡುವೆ ಉಪ್ಪು ಸುರಿದ ಸ್ಥಿತಿ ಪಾಕಿಸ್ತಾನದ್ದು.ಇದರ ನಡುವೆಯೇ ವಾಯುಗಡಿ ನಿರ್ಬಂಧದಿಂದಾಗಿ ಬರೊಬ್ಬರಿ ೫೦ ಮಿಲಿಯನ್ ಡಾಲರ್  ಅಂದ್ರೆ ಸುಮಾರು ೩೪೪ ಕೋಟಿ ರೂ  ನಷ್ಟವಾಗಿದೆ.ಕಳೆದ ಫೆಬ್ರವರಿ ೨೬ರಂದು ಭಾರತೀಯ ವಾಯುಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲಾಕೋಟ್ ಉಗ್ರ ಕ್ಯಾಂಪ್ ಗಳ ಮೇಲೆ ವಾಯುದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಆದರೆ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗಕ್ಕೀಡಾಗಿದ್ದ ಪಾಕಿಸ್ತಾನ ತನ್ನ ವಾಯುಗಡಿ ನಿರ್ಬಂಧಿಸಿತ್ತು.ಇದರಿಂದಾಗಿ ಯಾವುದೇ ವಿಮಾನ ಸಂಚಾರ ಇಲ್ಲದಂತಾಗಿತ್ತು.ವಿಮಾನಗಳು ಬೇರೋಂದು ಮಾರ್ಗದಿಂದ ಸಂಚರಿಸಬೇಕಾಗಿತ್ತು.

ಸರ್ಕಾರದ ಅಹಂ ಹಾಗೂ ಎಡವಟ್ಟಿನಿಂದ ೩೪೪ ಕೋಟಿ ನಷ್ಟ ಅನುಭವಿಸುವಂತಾಗಿದೆ.ಇದನ್ನು ತೀರಿಸೋದು ಹೇಗೆ ಎಂದು ತೋಚದೆ ಇಮ್ರಾನ್ ಖಾನ್ ಸರ್ಕಾರ ತೀವ್ರ ಇಕ್ಕಟ್ಟಿಗೆ ಸಿಲುಕಿದೆ.

Spread the love
Leave A Reply

Your email address will not be published.

Flash News