“ನನ್ನ ಪಾಡು ಇನ್ನ್ಯಾರಿಗೂ ಬಾರದಿರಲಿ”

0

ನಾನ್ ತಂತಿ ಮೇಲೆ ನಡೆಯುತ್ತಿದ್ದೇನೆ ಎನ್ನುವ ಮೂಲಕ ಸಿಎಂ ಯಡಿಯೂರಪ್ಪ ಪಕ್ಷದೊಳಗೆ ತಮಗಾಗುತ್ತಿರುವ ಬೇಸರವ್ಯಕ್ತಪಡಿಸಿದ್ದಾರೆ.

ದಾವಣಗೆರೆಯಲ್ಲಿ ನಡೆದ ಕಾರ್ಯಕ್ತಮದಲ್ಲಿ ಮೇಲ್ಕಂಡ ಹೇಳಿಕೆ ನೀಡುವ ಮೂಲಕ ತಮ್ಮನೋವು-ಅಸಹಾಯಕತೆಯನ್ನು ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ. ನಾನು ಸಿಎಂ ಆದ್ರೂ ಅಧಿಕಾರ ಚಲಾಯಿಸ್ಲಿಕ್ಕೆ ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯವೇ ಇಲ್ಲ.ನಾನು ಅನುಭವಿಸ್ತಿರುವ ನೋವು ಯಾರಲ್ಲೂ ಹೇಳಿಕೊಳ್ಳಲು ಆಗ್ತಿಲ್ಲ.

ಒಂದ್ರೀತಿ ತಂತಿ ಮೇಲೆ ನಡೆಯುವಂತಾಗಿದೆ ಎನ್ನುವ ಮೂಲಕ ತಮಗಾಗ್ತಿರುವ ನೋವನ್ನು ಮಾರ್ಮಿಕವಾಗಿ ನುಡಿದಿದ್ದಾರೆ. ಬಹುಷಃ ಅವರ ಈ ಹೇಳಿಕೆ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಭಿನ್ನಮತವನ್ನು ಎತ್ತಿತೋರಿಸುತ್ತಿದೆ ಯಾ ಗೊತ್ತಾಗ್ತಿಲ್ಲ. ಅಂದ್ಹಾಗೆ ಮೈತ್ರಿಸರ್ಕಾರ ಇದ್ದಾಗ್ಲೂ ಮಾಜಿ ಸಿಎಂ ಕುಮಾರಸ್ವಾಮಿ, ಯಡಿಯೂರಪ್ಪ ಅವ್ರಂತೆಯೇ ಹೇಳಿಕೆ ಕೊಟ್ಟು ಬಿನ್ನಮತ ಸ್ಪೋಟ ಮತ್ತಷ್ಟು ವ್ಯಾಪಕ ವಾಗುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Spread the love
Leave A Reply

Your email address will not be published.

Flash News