ಮನಿ ಲ್ಯಾಂಡ್ರಿಂಗ್:ಅಪೆಕ್ಷ್ ಬ್ಯಾಂಕ್ ಅಧ್ಯಕ್ಷ ರಾಜಣ್ಣಗೆ ಸಂಕಷ್ಟ/kannadaflashnews

0

ಕನ್ನಡ ಫ್ಲಾಶ್ ನ್ಯೂಸ್.ಕಾಂ

ನವದೆಹಲಿ/ತುಮಕೂರು  ಇ.ಡಿ ವಶದಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಮತ್ತೊಂದು ಬೇನಾಮಿ ವ್ಯಕ್ತಿಯ ಸ್ಥಾನದಲ್ಲಿ ಮಾಜಿ ಶಾಸಕ ಕೆ.ಎನ್ ರಾಜಣ್ಣ ನಿಲ್ಲುವ ಸಾಧ್ಯತೆ ದಟ್ಟವಾಗಿದೆ.ಈ ಹಿನ್ನಲೆಯಲ್ಲಿ ಮಾಜಿ ಶಾಸಕ ರಾಜಣ್ಣಗೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಇ.ಡಿ ನೊಟೀಸ್ ಜಾರಿ ಮಾಡುವ ಸಾಧ್ಯತೆ ದಟ್ಟವಾಗಿದೆ.

ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪೆಕ್ಷ್ ಬ್ಯಾಂಕ್ ಅಧ್ಯಕ್ಷರಾಗಿರುವ ಕೆ.ಎನ್ ರಾಜಣ್ಣ ಅವರು ತಮ್ಮ ಅಧಿಕಾರದ ದುರ್ಬಳಕೆ ಮಾಡಿಕೊಂಡು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ 300 ಕೋಟಿ ಸಾಲ ಕೊಟ್ಟಿರುವುದು ಪ್ರೂವ್ ಆಗಿರುವುದರಿಂದ ಅದರ ಪೂರ್ವಾಪರ ವಿಚಾರಣೆಗೆ ನೊಟೀಸ್ ಜಾರಿ ಮಾಡುವ ಸಾಧ್ಯತೆಗಳಿವೆ.

ದೆಹಲಿಯ ಇಡಿ ಮುಖ್ಯ ಕಚೇರಿಯಲ್ಲಿ ನಡೆಯಲಿರುವ ವಿಚಾರಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಯಾವ ಆಧಾರದ ಮೇಲೆ ಸಾಲ ನೀಡಲಾಯಿತು?,ಯಾವ ಕಾರಣಗಳಿಗಾಗಿ ಸಾಲ ನೀಡಲಾಯಿತು?,ಸಾಲ ನೀಡಲು ಗ್ಯಾರಂಟಿ ಪಡೆಯಲಾಗಿದೆಯಾ? ಎನ್ನುವ ಪ್ರಶ್ನೆಗಳಿಗೆ ಉತ್ತರಿಸಬೇಕಾ ಅನಿವಾರ್ಯತೆಗೆ ಕೆ.ಎನ್ ರಾಜಣ್ಣ ಸಿಲುಕಿದ್ದಾರೆ.

Spread the love
Leave A Reply

Your email address will not be published.

Flash News