ನವೆಂಬರ್ 1 ರಿಂದ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ ಬಿಬಿಎಂಪಿ ಮೇಯರ್/Kannafaflashnews

0

ಮಾರ್ವಾಡಿ…ಮಾರ್ವಾಡಿ ಎಂದು ಕರೆಯುವ ಮೂಲಕ ತನ್ನ ಸ್ವಾಭಿಮಾನವನ್ನು ಕೆಣಕಿದವರಿಗೆ ಖಡಕ್ ಉತ್ತರ ಕೊಡ್ಲಿಕ್ಕೆ ಮೇಯರ್ ಗೌತಮ್ ಕುಮಾರ್ ನಿರ್ಧರಿಸಿದ್ದಾರೆ.

ತನ್ನೊಳಗಿನ ಕನ್ನಡ ಪ್ರೇಮವನ್ನು ಮೆರೆಯೊಕ್ಕೆ ಮುಂದಾಗಿದ್ದಾರೆ.ಅದ್ಹೇಗೆ ಗೊತ್ತಾ,ವ್ಯಾಪಾರ-ಉದ್ದಿಮೆಗಳಲ್ಲಿ ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಅಳವಡಿಸುವ ನಿರ್ಧಾರದ ಮೂಲಕ.

ಯೆಸ್..ಇನ್ಮುಂದೆ ಬೆಂಗಳೂರಿನ 198 ವಾರ್ಡ್ ಗಳಲ್ಲಿ ಯಾವ್ದೇ ವ್ಯಾಪಾರ ಉದ್ದಿಮೆಯನ್ನು ಆರಂಭಿಸಬೇಕಿದ್ದರೆ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಇರಲೇಬೇಕು..

ಕಾಟಾಚಾರಕ್ಕೆ ಸಣ್ಣದಾಗಿ ಬರೆಸಿದ್ರೆ ಸಾಕಾಗೊಲ್ಲ.ಕನ್ನಡದಲ್ಲಿ ದಪ್ಪನಾಗಿ ಕಾಣ್ಬೇಕು.ಅದನ್ನು ಸ್ಪಾಟ್ ಗೆ ಹೋಗುವ ಅಧಿಕಾರಿಗಳು ಕನ್ಫರ್ಮ್ ಮಾಡಿದ್ಮೇಲೇನೆ ವ್ಯಾಪಾರ ಪರವಾನಗಿ(ಟ್ರೇಡ್ ಲೈಸೆನ್ಸ್) ನೀಡಬೇಕೆನ್ನುವ ಆದೇಶವನ್ನು ಕೂಡ ಮೇಯರ್ ಗೌತಮ್ ಕುಮಾರ್ ನೀಡಿದ್ದಾರೆ.

ಅಂದ್ಹಾಗೆ ಇದನ್ನು ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಜಾರಿಗೊಳಿಸಲು ನಿರ್ಧರಿಸಲಾಗಿದ್ದು ಅಂದಿನಿಂದ್ಲೇ ಇದೊಂದು ಜಾಗೃತಿ ಅಭಿಯಾನವಾಗಿ ಮುಂದುವರೆಯಬೇಕೆನ್ನೋದು ಗೌತಮ್ ಆಕಾಂಕ್ಷೆ.

ಇದಿಷ್ಟೇ ಅಲ್ಲ,ನವೆಂಬರ್ ತಿಂಗಳಲ್ಲಿ ಬಿಬಿಎಂಪಿ ಆವರಣದಲ್ಲೇ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ.ಆ ಅವಧಿಯಲ್ಲಿ ಕನ್ನಡ ಸಾಹಿತಿಗಳನ್ನು ಅಭಿನಂದಿಸಿ ಅವರಿಂದ ಸಲಹೆ ಪಡೆಯಲು ನಿರ್ಧರಿಸಲಾಗಿದೆ.

ಸಾಹಿತಿಗಳೊಂದಿಗೆ ಮಾತ್ನಾಡಿ,ಬೆಂಗಳೂರಿನಲ್ಲಿ ಕನ್ನಡ ಉಳಿಸಿ ಬೆಳೆಸುವ ಬಗ್ಗೆಯೂ ಅವರಿಂದ ಸಲಹೆ ಪಡೆದು ಮುಂದುವರೆಯಲು ನಿರ್ಧರಿಸಿದ್ದಾರೆ.ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿಬಿಎಂಪಿಯ ಹೆಸರು ಶಾಶ್ವತವಾಗಿ ಉಳಿಯಬೇಕೆನ್ನುವ ನಿಟ್ಟಿನಲ್ಲಿ 25 ಲಕ್ಷ ವೆಚ್ಚದಲ್ಲಿ ದತ್ತಿನಿಧಿ ಸ್ಥಾಪಿಸಲು ಕೂಡ ಚಿಂತನೆ ನಡೆಸಲಾಗಿದೆ.

ಕನ್ನಡದ ಸ್ಟಾರ್ ನಟರಾದ ಸುದೀಪ್ ಅಥ್ವಾ ಪುನೀತ್ ರಾಜ್ ಕುಮಾರ್ ಅವರನ್ನು ಕರೆಸುವ ಚಿಂತನೆಯನ್ನು ಕೂಡ ಗೌತಮ್ ಕುಮಾರ್ ಹೊಂದಿದ್ದಾರೆ.ನವೆಂಬರ್ ತಿಂಗಳಾದ್ಯಂತ ಕನ್ನಡದ ಕಂಪು ಪಸರಿಸಲು ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲು ಮೇಯರ್ ಗೌತಮ್ ನಿರ್ಧರಿಸಿದ್ದಾರೆ.ಈ ಮೂಲಕ ಕನ್ನಡ ಪ್ರೇಮ ಮೆರೆಯೊಕ್ಕೆ ಮುಂದಾಗಿದ್ದಾರೆ.

Spread the love
Leave A Reply

Your email address will not be published.

Flash News