ಇದಪ್ಪಾ ಸಾಧನೆ ಎಂದ್ರೆ../KannadaFlashNews

0

/ತಿರುವನಂತಪುರಂ:ನನ್ನಿಂದ ಏನೂ ಆಗೊಲ್ಲ ಎಂದುಕೊಳ್ಳುವನಷ್ಟು ದೊಡ್ಡ ಅಂಗವಿಕಲ ಇನ್ನೊಬ್ಬನಿಲ್ಲ‌ ಎನ್ನುವ ಮಾತೊಂದಿದೆ.
ಅದೆಷ್ಟೋ ಸಾಧಕರು ಹೀಗೊಂದು ಅಸಹಾಯಕತೆಯಲ್ಲಿ ಕೈ ಚೆಲ್ಲಿದ್ರೆ ಅವರಿಂದ ಸಾಧನೆಗಳಾಗುತ್ತಿದ್ದವಾ..ಖಂಡಿತಾ ಇಲ್ಲ..
ದೇಶದ ಮೊದಲ ದೃಷ್ಟಿಚೇತನೆ ಸರ್ವೋನ್ನತ ಐಎಎಸ್ ಹುದ್ದೆಯನ್ನು ಅಲಂಕರಿಸಿದ ಸಾಧನೆ..ಇಂತದ್ದೊಂದಿಷ್ಟು ಮಾತುಗಳ ನೆನಪಿಗೆ ಕಾರಣವಾಯ್ತಷ್ಟೆ.‌
ನಿಜಕ್ಕೂ ಇಡೀ ದೇಶವೇ ಹೆಮ್ಮೆ ಪಡೋ ಸಾಧನೆ ಮಾಡಿದ್ದಾಳೆ ಪ್ರಾಂಜಲ್ ಪಾಟೀಲ್ ಎನ್ನುವ ಯುವತಿ.ಅಂಗವೈಕಲ್ಯಕ್ಕೇ ಸವಾಲೆಸೆದು ಐಎಎಸ್ ಹುದ್ದೆ ಅಲಂಕರಿಸಿದ್ದಾರೆ.ಕೇರಳಾದ ತಿರುವನಂತಪುರಂ ಜಿಲ್ಲೆಗೆ ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗ ಇಡೀ ಕಛೇರಿಗೆ ಕಛೇರಿನೇ ಕಣ್ಣಾಲಿಗಳನ್ನು ತುಂಬಿಕೊಂಡು ಹರ್ಷೋದ್ಘಾರದಲ್ಲಿ ಪ್ರಾಂಜಲ ಅವರನ್ನು ಬರ ಮಾಡಿಕೊಂಡಿತು.ಅದೊಂದು ತೀರಾ ಭಾವುಕವಾದ ಸನ್ನಿವೇಶವಾಗಿತ್ತು ಎಂದು ಕೇರಳಾದ ಮಾದ್ಯಮಗಳು ಬಣ್ಣಿಸಿದ್ವು.

ಮುಂಬೈಯ ಉಲ್ಲಾಸನಗರ ಪ್ರಾಂಜಲ ಅವರ ಹುಟ್ಟೂರು.ಹುಟ್ಟುತ್ತಲೇ ದೃಷ್ಟಿ ಸಮಸ್ಯೆಯಿಟ್ಟುಕೊಂಡಿದ್ದ ಪ್ರಾಂಜಲ ಆರನೇ ವಯಸ್ಸಿನಲ್ಲಿ ಸಂಪೂರ್ಣ ದೃಷ್ಟಿ ಕಳೆದುಕೊಂಡ್ರು.
ಏನ್ ಮಾಡ್ಬೇಕೆಂದು ತೋಚದೇ ಸದಾ ಕಣ್ಣೀರಿಡ್ತಿದ್ದ ಪ್ರಾಂಜಲ ಪಾಲಿಗೆ ಬೆಳಕಾದದ್ದು ಅವರ ಕುಟುಂಬ.
ಸಾಮಾನ್ಯರಂತೆ ಆಲೋಚಿಸುವುದನ್ನೇ ಬಿಡುವಂತ ಮನಸ್ಥಿತಿ ಸೃಷ್ಟಿಸಿದ್ರು ತಂದೆತಾಯಿ. ಮಗಳಲ್ಲಿ ಆ ಉತ್ಸಾಹ-ಹುಮ್ಮಸ್ಸು ತುಂಬಿಸಿದ ಪೋಷಕರು ಏನಾಗ್ಬೇಕೆಂದುಕೊಂಡಿದ್ದೀಯಾ ಎಂದಾಗ ಕ್ಷಣ ಆಲೋಚಿಸದೆ IAS ಎಂದಿದ್ಲಂತೆ ಪ್ರಾಂಜಲ.ಮನೆಯವ್ರು ಕೂಡ ಯೆಸ್…ಗೋ ಹೆಡ್ ಎಂದಿದ್ರಂತೆ.ಅಂದಿನಿಂದ್ಲೇ ದೊಡ್ಡ ಕನಸಿನ ಸಾಕಾರದತ್ತ ನಡೆದ ಪ್ರಾಂಜಲ ಇದಕ್ಕೆ ಬೇಕಾದ ಚೌಕಟ್ಟು ನಿರ್ಮಿಸಿಕೊಂಡು ಕಾರ್ಯಪ್ರವೃತ್ತಳಾದ್ಲು.

ಛಲ ಬಿಡದೆ ಅಧ್ಯಯನ ನಡೆಸಿದ ಪ್ರಾಂಜಲ ಜೆಎನ್‌ಯುನಿಂದ ‘ಅಂತರರಾಷ್ಟ್ರೀಯ ಸಂಬಂಧಗಳು’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಐಎಎಸ್ ಗೆ ತರಬೇತಿ ಕಠಿಣವಾಗಿರುತ್ತೆ ಎನ್ನೋರಿಗೆ ಅಪವಾದ ಪ್ರಾಂಜಲ.ಏಕೆಂದ್ರೆ
ಕೆಲವು ಅಣಕು ಸಂದರ್ಶನ ಎದುರಿಸಿದ್ದು,ಕೆಲವು ಬ್ರೈಲ್ ಫಾರ್ಮ್ಯಾಟ್ ನ ಸಾಫ್ಟ್ ವೇರ್ ಬಿಟ್ಟರೆ, ಪ್ರಾಂಜಲ ಯಾವುದೇ ಐಎಎಸ್‌ ಗೆ ವಿಶೇಷ ತರಬೇತಿಯನ್ನೇ ಪಡೆಯಲಿಲ್ಲ.
ಇದೆಲ್ಲದ್ರ ಫಲವಾಗೇ, 2016 ರಲ್ಲಿ ಮೊದಲ ಪ್ರಯತ್ನ ಮಾಡಿದ್ರು.ಆಗ ಪಡೆದದ್ದು 713 RANK.ಮನಸು ಮಾಡಿದ್ರೆ ಅವತ್ತೇ ಯಾವುದಾದ್ರೊಂದು ಗೆಜೆಟೆಡ್ ಅಧಿಕಾರಿಯಾಗಬಹುದಿತ್ತು.ಆದ್ರೆ ಪ್ರಾಂಜಲ ಗುರಿ ದೊಡ್ಡದಾಗಿತ್ತು.ಮರುಯತ್ನ ಮಾಡಿ, 2017ನೇ ಸಾಲಿನ ಐಎಎಸ್‌ ಪರೀಕ್ಷೆ ಬರೆದು ಅದ್ರಲ್ಲಿ 124ನೇ RANK ಪಡೆದು ಎಲ್ಲರೂ ಹೆಮ್ಮೆ ಪಡುವಂಥ ಸಾಧನೆ ಮಾಡಿದ್ದಾರೆ.ಇತರೆ ಅದೆಷ್ಟೋ ಪ್ರತಿಭಾವಂತ ಅಂಧ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ.
ಇಷ್ಟೆಲ್ಲಾ ಸಾಧಿಸಿರುವ ತಮ್ಮ ಪ್ರೇರಣೆಯ ಸಂದೇಶ ಏನಂದರೆ
“ಪ್ರಶ್ನಿಸದೆ ಯಾವುದೇ ಉತ್ತರ ಒಪ್ಪಿಕೊಳ್ಳದಂತೆ,
ಪ್ರಯತ್ನಿಸದೆ ಸೋಲೊಪ್ಪಿಕೊಳ್ಳಬೇಡಿ” ಎನ್ನುವ ಮಾತುಗಳು ಎಷ್ಟು ಅರ್ಥಗರ್ಭಿತ ಎನಿಸ್ತವಲ್ವಾ..

#KannadaFlashNews #KannadaNews #Praanjalapaatil #First VisuallychallengedIAS #IAS #Mumbai #Thiruvanthapuram #GreatAchiver

ಈ ಸಾಧಕಿಯ ಸಾಧನೆ ಬಗೆಗಿನ ಅಭಿಪ್ರಾಯ ಹಾಗೂ ಲೇಖನದ ಕುರಿತಾಗಿನ ನಿಮ್ಮ ಅನಿಸಿಕೆ..ಪ್ಲೀಸ್ ಕಮೆಂಟ್ ಮಾಡಿ

Spread the love
Leave A Reply

Your email address will not be published.

Flash News