ಅದೃಷ್ಟ ಚೆನ್ನಾಗಿತ್ತು ಬದುಕುಳಿದ/KannadaFlashNews

0

ಚಿಕ್ಕಮಗಳೂರು : ಆತನ ಅದೃಷ್ಟ ಚೆನ್ನಾಗಿತ್ತು ಅನ್ಸುತ್ತೆ,ಅದಕ್ಕೆ ಕೂದಲೆಳೆಯಲ್ಲಿ ಅಪಾಯದಿಂದ ಪಾರಾಗಿದ್ದಾನೆ.ಅಂದ್ಹಾಗೆ ಆಗಿದ್ದಾದ್ರೂ ಏನ್ ಗೊತ್ತಾ, ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಮಾಲಿಂಗನಾಡು ಗ್ರಾಮದಲ್ಲಿ ಸುರಿಯುತ್ತಿದ್ದ ರಣ ಮಳೆಗೆ ಸೇತುವೆ ಕುಸಿದು ಬಿದ್ದಿದೆ.ಆ ಮಾರ್ಗವಾಗಿ ಬರುತ್ತಿದ್ದ ಬೈಕ್ ಸವಾರ ಸ್ವಲ್ಪ ಯಾಮಾರಿದ್ರೂ ಆತ ಯಮಪಾದ ಸೇರೋದು ಗ್ಯಾರಂಟಿಯಾಗ್ಬಿಡುತ್ತಿತ್ತೇನೋ..

BRIDGE COLLAPSE
ಹಿರೇಬೈಲ್-ಕೂವೆಗೆ ಸಂಪರ್ಕ ಕಲ್ಪಿಸುವ ಸೇತುವೆ ಮಣ್ಣು ಕುಸಿತದಿಂದ ಸುಮಾರು 50 ಅಡಿ ಆಳಕ್ಕೆ ಕುಸಿದಿದೆ.ಇದರಿಂದಾಗಿ ಜನ ಹಾಗೂ ವಾಹನ ಸಂಪರ್ಕ ಸಂಪೂರ್ಣ ಕಡಿದು ಹೋಗಿದೆ.

ಕೆಲ ದಿನಗಳಿಂದ ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಸಾಕಷ್ಟು ರೀತಿಯ ಸಮಸ್ಯೆಗಳಾಗ್ತಿದೆ.ಇದರ ಭಾಗವಾಗೇ ಹಿರೇಬೈಲ್-ಕೂವೆಗೆ ಸಂಪರ್ಕ ಕಲ್ಪಿಸುವ ಸೇತುವೆ ಮಣ್ಣು ಕುಸಿತದಿಂದ ಸುಮಾರು 50 ಅಡಿ ಆಳಕ್ಕೆ ಕುಸಿದಿದೆ.ಇದರಿಂದಾಗಿ ಜನ ಹಾಗೂ ವಾಹನ ಸಂಪರ್ಕ ಸಂಪೂರ್ಣ ಕಡಿದು ಹೋಗಿದೆ.ಇದೇ ವೇಳೆ ಬೈಕ್ ನಲ್ಲಿ ಬರುತ್ತಿದ್ದ  ಬೈಕ್ ಸವಾರ ತಕ್ಷಣಕ್ಕೆ ತನ್ನ ಬೈಕ್ ವೇಗ ಕಡಿಮೆ ಮಾಡಿದ್ದಾನೆ.ಆದ್ರೂ ಬೈಕ್ ನಿಂದ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಾನೆ.

ಪ್ರಾಣಕ್ಕೆ ಯಾವುದೇ ಅಪಾಯವಿಲ್ಲವಾದ್ರೂ ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Spread the love
Leave A Reply

Your email address will not be published.

Flash News