ಸೆರೆ ಸಿಕ್ಕ ಹುಲಿರಾಯನೀಗ ಫುಲ್ ರಿಲ್ಯಾಕ್ಸ್/KannadaFlashNews

0

(ಕನ್ನಡ ಫ್ಲ್ಯಾಶ್ ನ್ಯೂಸ್.ಕಾಂ-ಜಿಲ್ಲಾ ಪ್ರತಿನಿಧಿಯಿಂದ)

ಮೈಸೂರು/ಚಾಮರಾಜನಗರ:ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಸಾಕಷ್ಟು ಸತಾಯಿಸಿ ನಂತರ ಕೂರ್ಗಳ್ಳಿಯ ಚಾಮುಂಡಿ ಪುನರ್ವಸತಿ ಕೇಂದ್ರದಲ್ಲಿ ಸೆರೆ ಸಿಕ್ಕ ಹುಲಿಯನ್ನು  ಹೆಚ್ಚಿನ ಚಿಕಿತ್ಸೆ ಹಾಗೂ ಪುನರ್ವಸತಿಗಾಗಿ ಮೈಸೂರಿನ ಮೃಗಾಲಯಕ್ಕೆ ಕರೆತರಲಾಗಿದೆ.ಪುನರ್ವಸತಿ ಕೇಂದ್ರದ ಕೇಜ್ ವೊಂದ್ರಲ್ಲಿ ಹಾಕಿರುವ ಹುಲಿಗೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಚಾಮರಾಜನಗರದಲ್ಲಿ ಸೆರೆ ಸಿಕ್ಕ ಹುಲಿಯ ರಾಜಗಾಂಭೀರ್ಯ
                                                                      ಚಾಮರಾಜನಗರದಲ್ಲಿ ಸೆರೆ ಸಿಕ್ಕ ಹುಲಿಯ ರಾಜಗಾಂಭೀರ್ಯ

ಹುಲಿ ಮೇಲೆ ತೀವ್ರ ನಿಗಾ ಇಟ್ಟು ಆರೈಕೆ ಮಾಡಲಾಗುತ್ತಿದೆ.ಅದರ ಚಲನವಲನಗಳ ಮೇಲೆ ದಿನದ 24 ಗಂಟೆಗಳೂ ತೀವ್ರ ನಿಗಾ ಇರಿಸುವಂತೆ ಸೂಚಿಸಲಾಗಿದೆ.ನಿನ್ನೆ ಒಂದೇ ದಿನ ಹಸಿವಿನಿಂದಾಗಿ ಹುಲಿ 6 ಕೆಜಿಯಷ್ಟು ಮಾಂಸ ಸೇವನೆ ಮಾಡಿದೆ.ಅದರ ಭಕ್ಷಣೆಯ ಪ್ರವೃತ್ತಿ ಇನ್ನು ಕಡಿಮೆಯಾದಂತೆ ಕಾಣುತ್ತಿಲ್ಲವಾದ್ದರಿಂದ ಅಪಾಯ ಇನ್ನು ಕಡಿಮೆಯಾಗಿಲ್ಲ ಎನ್ನಲಾಗಿದೆ.

ಮೈಸೂರಿನ ಮೃಗಾಲಯದ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಲಿರಾಯ
 ಮೈಸೂರಿನ ಮೃಗಾಲಯದ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಲಿರಾಯ

ಹುಲಿ ಇರುವ ಕೇಜ್‌ ಬಳಿ ಸಿಸಿ ಕ್ಯಾಮಾರ ಹಾಗೂ ಓರ್ವ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹುಲಿ ಬಳಿ ವೈದ್ಯರೋಬ್ಬರನ್ನ ಬಿಟ್ಟು ಯಾರು ತೆರಳುವಂತಿಲ್ಲ ಎಂದು ಸೂಚಿಸಲಾಗಿದೆ.ಆದರೆ ವಿಪರ್ಯಾಸ ಎಂದ್ರೆ ಇಡೀ ಇಲಾಖೆ ಈ ಹುಲಿ ಬಗ್ಗೆ ತಲೆಕೆಡಿಸಿಕೊಂಡು ಕೂತಿದ್ದರೆ,  ಮೃಗಾಲಯ ನಿರ್ದೇಶಕರೇ ಇನ್ನೂ ಹುಲಿ ಬಳಿ ತೆರಳಿ ಅದರ ಯೋಗಕ್ಷೇಮ ವಿಚಾರಿಸುವ ಕೆಲಸವನ್ನೇ ಮಾಡಿಲ್ಲ.ಈ ನಿರ್ಲಕ್ಷ್ಯದ ಹೊರತಾಗಿ ಹುಲಿಯನ್ನು ನೋಡಲು ಸಾರ್ವಜನಿಕರಿಗೆ ಇನ್ನು ಮೂರ್ನಾಲ್ಕು ದಿನ ಪ್ರವೇಶ ನಿರ್ಬಂಧಿಸಲಾಗಿದೆ.

Spread the love
Leave A Reply

Your email address will not be published.

Flash News