ಕುಡಿದ ಮತ್ತಲ್ಲಿ ಉಪನ್ಯಾಸಕ ಮಾಡ್ಕೊಂಡ್ಬಿಟ್ಟ ಯಡವಟ್ಟು../kannadaflashnews

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಜಿಲ್ಲಾ ಪ್ರತಿನಿಧಿಯಿಂದ)

ಕೋಲಾರ:ವಿದ್ಯಾರ್ಥಿಗಳನ್ನು ಶಿಸ್ತಿನ ಸಿಪಾಯಿಗಳನ್ನಾಗಿಸ್ಬೇಕಿರುವುದು ಶಿಕ್ಷಕರು.ಅವರ ಮೇಲೆ ನಂಬಿಕೆ ಇಟ್ಟೇ  ಶಾಲೆ-ಕಾಲೇಜಿಗೆ ಕಳುಹಿಸ್ತಾರೆ ಪೋಷಕರು.ಆದ್ರೆ ತಿದ್ದಿ ಬುದ್ಧಿ ಹೇಳಬೇಕಾದ ಶಿಕ್ಷಕರೇ ಹಾದಿ ತಪ್ಪುವಂತಾದ್ರೆ ಹೇಗೆ..

ಎನ್ ಎಸ್ ಎಸ್ ಕ್ಯಾಂಪ್ ನಲ್ಲಿ ಕುಡಿತದ ಹಾಡಿಗೆ ಸ್ಟೆಪ್ ಹಾಕುತ್ತಿರುವ ಉಪನ್ಯಾಸಕ ಮಂಜುನಾಥ್.
ಎನ್ ಎಸ್ ಎಸ್ ಕ್ಯಾಂಪ್ ನಲ್ಲಿ ಕುಡಿತದ ಹಾಡಿಗೆ ಸ್ಟೆಪ್ ಹಾಕುತ್ತಿರುವ ಉಪನ್ಯಾಸಕ ಮಂಜುನಾಥ್.

ಕೋಲಾರದಲ್ಲಿ ನಡೆದಿರುವ ಘಟನೆ ಇಂತದ್ದೊಂದು ಪ್ರಶ್ನೆ ಸೃಷ್ಟಿಸಿದೆ.ಎನ್ ಎಸ್ ಎಸ್ ಕ್ಯಾಂಪ್ ನಲ್ಲಿ ಶಿಕ್ಷಕನೋರ್ವ ಅತಿಯಾದ ಉತ್ಸಾಹದಲ್ಲಿ “ಸಾರಾಯಿ ಶೀಶೆಯಲ್ಲಿ ನನ್ನ ದೇವಿ ಕಾಣುವಳು..” ಎನ್ನುವ ಕುಡಿತದ ಹಾಡನ್ನು ಹಾಡಿ ಸಿಕ್ಕಾಪಟ್ಟೆ ಬೈಸಿಕೊಂಡಿದ್ದಾನೆ.ಆತನ ವೀಡಿಯೋ ಕೂಡ ಸಿಕ್ಕಾಪಟಟ್ಟೆ ವೈರಲ್ ಕೂಡ ಆಗಿದೆ.

ಅಂದ್ಹಾಗೆ ಇದು ನಡೆದಿರುವುದು ಜಿಲ್ಲೆಯ ಕೆಜಿಎಫ್ ತಾಲೂಕಿನ ವೆಂಗಸಂದ್ರ ಗ್ರಾಮದಲ್ಲಿ.ಇಲ್ಲಿನ  ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಎನ್.ಎಸ್.ಎಸ್ ಶಿಬಿರದಲ್ಲಿ ಸಾರಾಯಿ ಶೀಶೆಯಲ್ಲಿ ಎಂಬ ಹಾಡಿಗೆ  ಮಂಜುನಾಥ್ ಎನ್ನುವ  ಉಪನ್ಯಾಸಕ ಸಖತ್ ಡಾನ್ಸ್ ಮಾಡಿದ್ದಾನೆ.ಡ್ಯಾನ್ಸ್ ಗೆ ಜನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಚಪ್ಪಾಳೆ ಹೊಡೆದಿದ್ದರಿಂದ  ಇನ್ನಷ್ಟು ಪ್ರೊವೋಕ್ ಆದ ಮಂಜುನಾಥ್ ಮಳೆಯ ನಡುವೆ ಟಪ್ಪಾಂಗುಚಿ ಸ್ಟೆಪ್ ಹಾಕಿ  ಕುಣಿದು ಕುಪ್ಪಳಿಸಿದ್ದಾನೆ.

ಸಾರಾಯಿ ಶೀಶೆಯಲಿ ಹಾಡಿಗೆ ಮೈಮರೆತಿರುವ ಮಂಜುನಾಥ್
ಸಾರಾಯಿ ಶೀಶೆಯಲಿ ಹಾಡಿಗೆ ಮೈಮರೆತಿರುವ ಮಂಜುನಾಥ್

ಈ ನಡುಗೆ ಕೆಲವು ಗ್ರಾಮಸ್ಥರು ಇದನ್ನು ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ.ಮಳೆಯಲ್ಲಿ ನಶೆಯ ಹಾಡನ್ನು ಹಾಡ್ತಾ ಮೈಮರೆತ ಮಂಜುನಾಥ್ ತನ್ನ ವರ್ತನೆಗೆ ಈಗ ಸರಿಯಾದ ಶಿಕ್ಷೆ ಅನುಭವಿಸುವಂತಾಗಿದೆ.ಮಕ್ಕಳನ್ನು ಶಾಲೆಗೆ ಕಳುಹಿಸಿದ್ರೆ ಪಾಠ ಹೇಳ್ಬೇಕಾದ ಶಿಕ್ಷಕರೇ ಹೀಗೆ ಮಾಡೋದಾ ಎಂದು ಕುದಿಯಲಾರಂಭಿಸಿದ್ದಾರೆ.

 

Spread the love
Leave A Reply

Your email address will not be published.

Flash News