ರೋಹಿಣಿ ಸಿಂಧೂರಿ ಶಾಕ್ ಆಗಿದ್ದೇಕೆ/kannadaflashnews

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಜಿಲ್ಲಾಪ್ರತಿನಿಧಿಯಿಂದ) ಚಿಕ್ಕಬಳ್ಳಾಪುರ: ಬೆಳ್ಳಂಬೆಳಗ್ಗೆ ಖಡಕ್ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ,ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಬೃಹತ್ ರೇಷ್ಮೆ ಮಾರುಕಟ್ಟೆಗೆ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ್ರು.ರೈತರ ಪ್ರಶ್ನೆಗಳ ಸುರಿಮಳೆ ಎದುರಿಸಲಾರ್ದೆ ಕಂಗಾಲಾದ್ರು.

ರೇಷ್ಮೆ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ,ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ರೇಷ್ಮೆ ಮಾರುಕಟ್ಟೆಗೆ ಸಪ್ರೈಸ್ ವಿಸಿಟ್ ಕೊಟ್ರು.

ರೇಷ್ಮೆ ಇಲಾಖೆಯ ಆಯುಕ್ತೆಯೂ ಆಗಿರುವ ರೋಹಿಣಿ ಸಿಂಧೂರಿ,ಮಾರುಕಟ್ಟೆಗೆ ಸಪ್ರೈಸ್ ವಿಸಿಟ್ ಕೊಟ್ಟಾಗ ಮಾರುಕಟ್ಟೆ ಅಧಿಕಾರಿಗಳೇ ಇರ್ಲಿಲ್ಲ.ಅವರನ್ನು ಸ್ಪಾಟ್ ಗೆ ಕರೆಯಿಸಿದಾಗ ರೈತರು ಅಧಿಕಾರಿಗಳ ಮೇಲೆ ಮುಗಿಬಿದ್ದರು.ಬೆಳೆಗಾರರು ಅನೇಕ ಸಮಸ್ಯೆ ಅನುಭವಿಸುತ್ತಿದ್ದರೂ ಯಾರೊಬ್ಬರೂ ಅದಕ್ಕೆ ಸ್ಪಂದಿಸುತ್ತಿಲ್ಲ.ಇವತ್ತೇನೋ ನೀವ್ ಬಂದಿದ್ದೀರಿ..ನೀವೂ ಅವರಂತೆ ಆಗೊಲ್ಲ ಎನ್ನೋದಕ್ಕೇನು ಗ್ಯಾರಂಟಿ ಎಂದು ಬೇಸರ ವ್ಯಕ್ತಪಡಿಸಿದ್ರು.

ಮಾರುಕಟ್ಟೆಗೆ ಭೇಟಿ ಕೊಟ್ಟು ಕಾರ್ಯನಿರ್ವಹಣೆ ಮಾಹಿತಿ ಪಡೆದ್ರು
ಮಾರುಕಟ್ಟೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ನಂತ್ರ ರೋಹಿಣಿ ಸಿಂಧೂರಿ ಒಟ್ಟಾರೆ ಕಾರ್ಯನಿರ್ವಹಣೆ ಮಾಹಿತಿ ಪಡೆದ್ರು

ಅದರಲ್ಲೂ ರೀಲರ್ ಗಳಂತೂ ರೋಹಿಣಿ ಸಿಂಧೂರಿಗೆ ಘೇರಾವ್ ಹಾಕಿದ್ದಷ್ಟೇ ಅಲ್ಲ,ಅವರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ರು.ಒಂದ್ ಕ್ಷಣ ರೈತರ ಆಕ್ರೋಶಕ್ಕೆ ಕಕ್ಕಾಬಿಕ್ಕಿಯಾದ ಸಿಂಧೂರಿ,ಅವರನ್ನೆಲ್ಲಾ ಸಮಾಧಾನಪಡಿಸಿದ್ರು.ಅವರ ಸಮಸ್ಯೆಗಳನ್ನು ಸಾವಧಾನದಿಂದ ಆಲಿಸಿ ಸಾಧ್ಯವಿರುವ ಆದೇಶಗಳನ್ನು ಸ್ಪಾಟ್ ನಲ್ಲಿ ಮಾಡಿ,ಅದನ್ನು ಇಂಪ್ಲಿಮೆಂಟ್ ಮಾಡ್ಲಿಕ್ಕೆ ಅಧಿಕಾರಿಗಳಿಗೆ ಆದೇಶಿಸಿದರು.

ಸರ್ಕಾರ ರೇಷ್ಮೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬೆಳೆಗಾರರನ್ನು ಸಮಾಧಾನ ಪಡಿಸಿದರು.
ಸರ್ಕಾರ ರೇಷ್ಮೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬೆಳೆಗಾರರನ್ನು ಸಮಾಧಾನ ಪಡಿಸಿದರು.

ರೇಷ್ಮೆ ಅಭಿವೃದ್ಧಿ ಬಗ್ಗೆ ಹೊಸ ರೂಪುರೇಷೆಗಳನ್ನ ತಯಾರು ಮಾಡುವ,ರೇಷ್ಮೆ ಕೃಷಿ ಮತ್ತು ಉದ್ಯಮದ ಪ್ರಗತಿಗಾಗಿ ಶ್ರಮಿಸುವ ಭರವಸೆ ಕೊಟ್ಟ ಸಿಂಧೂರಿ,ಇ ಬಿಲ್ಲಿಂಗ್, ದೂರದಿಂದ ರೈತರಿಗೆ ಮೂಲಭೂತ ಸೌಕರ್ಯ, ರೀಲರ್, ನೇಕಾರರಿಂದ ರೇಷ್ಮೆ ಉದ್ಯಮ ಹಾಗೂ ಬೆಳೆಗಾರರು ಅನುಭವಿಸ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.

ಅಷ್ಟೇ ಅಲ್ಲ,ಕೂಲಿಕಾರರ ಜೊತೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ನೀಡುವ ಭರವಸೆ ಕೊಟ್ರು.ಒಟ್ಟಿನಲ್ಲಿ ರೋಹಿಣಿ ಸಿಂಧೂರಿ ತಮ್ಮ ಇಲಾಖೆ ಅಧಿಕಾರಿಗಳಿಗೆ ಚೋಕ್ ಕೊಡ್ಲಿಕ್ಕೆ ಹೋಗಿ ತಾವೇ ಒಂದ್ ಕ್ಷಣ ಮುಜುಗರಕ್ಕೆ ಒಳಗಾಗಿದ್ದು ಮಾತ್ರ ವಿಪರ್ಯಾಸ.

Spread the love
Leave A Reply

Your email address will not be published.

Flash News