ವಂಚಕ “ಮಂತ್ರಿ” ಪತ್ನಿಗೆ ಮುಖಭಂಗ/kannadaflashnews

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ-ಕ್ರೈಂ ಬ್ಯೂರೋ)  ಬೆಂಗಳೂರು:ಈ ವಂಚಕ ಮಂತ್ರಿ ಗೊಬ್ಬನಿಗೆ ಅಲ್ಲ ಇಡೀ ಕುಟುಂಬಕ್ಕೆ ಇದಕ್ಕಿಂತ ದೊಡ್ಡ ಮುಖಭಂಗ ಮತ್ತೊಂದಿಲ್ಲ.ಅಲ್ಲದೇ ಅವರು ಕದ್ದುಮುಚ್ಚಿ ವಿದೇಶಕ್ಕೂ ಹಾರುವಂಗಿಲ್ಲ..ಹೀಗೊಂದು ಖಡಕ್ ಸೂಚನೆ ಕೊಟ್ಟಿರುವುದು ನಮ್ಮ ಪೊಲೀಸ್ ಇಲಾಖೆ.

ಅಂದ್ಹಾಗೆ ಆ ಮಂತ್ರಿ ಯಾರಂದುಕೊಂಡ್ರಿ..ನಮ್ಮ ರಾಜ್ಯ ಸರ್ಕಾರಕ್ಕೆ ಸೇರದ ಮಂತ್ರಿ ಅವರು..ಯೆಸ್..ಇದು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿರುವ ಮಂತ್ರಿ ಡೆವಲಪರ್ಸ್ ಸಂಸ್ಥೆಗೆ ಸೇರಿದ ಸುದ್ದಿ.

ಬೋಗಸ್ ಸ್ಕೀಂಗಳ ಮೂಲಕ ಗ್ರಾಹಕರನ್ನು ವಂಚಿಸ್ತಿದ್ದಾರೆನ್ನುವ ಆರೋಪ ಪ್ರತಿಷ್ಟಿತ ಮಂತ್ರಿ ಸಂಸ್ಥೆ ಮೇಲಿದೆ
       ಬೋಗಸ್ ಸ್ಕೀಂಗಳ ಮೂಲಕ ಗ್ರಾಹಕರನ್ನು ವಂಚಿಸ್ತಿದ್ದಾರೆನ್ನುವ ಆರೋಪ ಪ್ರತಿಷ್ಟಿತ ಮಂತ್ರಿ ಸಂಸ್ಥೆ ಮೇಲಿದೆ

ಮಂತ್ರಿ ಸಂಸ್ಥೆ ವಿರುದ್ಧ ಭಾರೀ ದೊಡ್ಡ ವಂಚನೆ ಆರೋಪವಿದೆ.ಈ ಸಂಬಂಧ ವಂಚನೆಗೊಳಗಾದವ್ರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಒಂದಲ್ಲಾ ಎರಡಲ್ಲ ಒಟ್ಟು 8 ಕೇಸ್ ಹಾಕಿದ್ದಾರೆ.ಮಂತ್ರಿ ಸಂಸ್ಥೆ ವಿರುದ್ಧ  ಐಪಿಸಿ ಸೆಕ್ಷನ್ 420,406,409,120(ಬಿ) ವಿರುದ್ದ ಪ್ರಕರಣ ಕೂಡ ದಾಖಲಾಗಿದೆ.

ಆರೋಪವೇನು..

RBI ಹಾಗೂ ನ್ಯಾಷನಲ್ ಹೌಸಿಂಗ್ ಬೋರ್ಡ್ ನಿಂದ ಬ್ಯಾನ್ ಆದ ಸ್ಕೀಂಗಳ ಆಫರ್ ನ್ನು ಗ್ರಾಹಕರಿಗೆ ನೀಡಿ ವಂಚಿಸಿದ್ದಾರೆನ್ನುವುದೇ ಸಂಸ್ಥೆ ವಿರುದ್ಧದ ಗಂಭೀರ ಆರೋಪ.ಜನರನ್ನು ವಂಚಿಸಿ ಕೋಟ್ಯಾಂತರ ಹಣ ಮಾಡ್ಕೊಂಡು ಎಲ್ಲಿ ಊರ್ ಬಿಟ್ಟು ಹೋಗ್ತಾರೆನ್ನುವ ಆತಂಕವೂ ಇವರಿಂದ ಫ್ಲಾಟ್ ಕೊಂಡವ್ರು…ಇವರ ಬ್ಯುಸಿನೆಸ್ ಗೆ ಹಣ ಹೂಡಿದವ್ರು,ಎಲ್ಲಕ್ಕಿಂತ ೆಹಚ್ಚಾಗಿ ಇವರಿಗೆ ಲೋನ್ ಕೊಟ್ಟ ಬ್ಯಾಂಕ್ ಗಳನ್ನು ಕಾಡ್ತಿದೆ.

ಬೋಗಸ್ ಸ್ಕೀಂಗಳ ಮೂಲಕ ಗ್ರಾಹಕರನ್ನು ವಂಚಿಸ್ತಿದ್ದಾರೆನ್ನುವ  ಆರೋಪದ ಹಿನ್ನಲೆಯಲ್ಲಿ ಅವರ ವಿರುದ್ಧ FIR ಗಳು ಕೂಡ ದಾಖಲಾಗಿವೆ.ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಕಮಿಷನರ್ ಸಂಸ್ಥೆ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಹಾಗೂ ಮಾಲೀಕರಿಗೆ  ಲುಕೌಟ್ ನೋಟಿಸ್ ಜಾರಿಗೊಳಿಸಿ ಅವರೆಲ್ಲೂ ನಮ್ಮ ಪರ್ಮಿಷನ್ ಇಲ್ಲದೇ ವಿದೇಶಕ್ಕೆ ಹಾರುವಂತಿಲ್ಲ ಎನ್ನುವ  ಆದೇಶವನ್ನೂ ಹೊರಡಿಸಿದ್ರು.

ಮಂತ್ರಿ ವಿರುದ್ಧ ವಂಚನೆ ಆರೋಪದಲ್ಲಿ ದಾಖಲಾಗಿರುವ FIR
ಮಂತ್ರಿ ವಿರುದ್ಧ  ದಾಖಲಾಗಿರುವ FIR
ಮಂತ್ರಿ ಸಂಸ್ಥೆ ವಿರುದ್ದ ದಾಖಲಾಗಿರುವ FIR
ಮಂತ್ರಿ ವಿರುದ್ಧ  ದಾಖಲಾಗಿರುವ FIR

ಇದರ ಹೊರತಾಗ್ಯೂ ನಿನ್ನೆ  ಮಾಲೀಕ ಸುಶೀಲ್ ಮಂತ್ರಿ ಅವರ ಧರ್ಮಪತ್ನಿ ಸ್ನೇಹಲ್ (ಸ್ನೇಹಲ್ ಮಂತ್ರಿ ಸಂಸ್ಥೆಯ ನಿರ್ದೇಶಕರಲ್ಲೊಬ್ಬರು ಕೂಡ) ಸಿಂಗಾಪುರ್ ಗೆ ತೆರಳೊಕ್ಕೆ ಏರ್ ಪೋರ್ಟ್ ಗೆ ತೆರಳಿದ್ರು.ಈ ಮಾಹಿತಿಯನ್ನು ವಿಮಾನ ನಿಲ್ದಾಣದ ತಪಾಸಣಾಧಿಕಾರಿಗಳಿಗೆ ತಿಳಿಸಲಾದ ಮೇರೆಗೆ ಸ್ನೇಹಲ್ ಅವರಿಗೆ ವಿಮಾನವನ್ನೇರಲು ಅವಕಾಶ ನಿರಾಕರಿಸಿ ವಾಪಸ್ ಕಳುಹಿಸಲಾಯ್ತು.

ಇದಿಷ್ಟೇ ಅಲ್ಲ,ಸುಶೀಲ್ ಮಂತ್ರಿ ಹಾಗೂ ಮಗ ಪ್ರತೀಕ್ ಮಂತ್ರಿಗೂ ಲುಕೌಟ್ ನೋಟಿಸ್ ನೀಡಲಾಗಿದ್ದು ತಮ್ಮಪ್ಪಣೆ  ಇಲ್ಲದೇ ದೇಶವನ್ನು ತೊರೆಯುವಂತಿಲ್ಲ ಎನ್ನುವ ಖಡಕ್ ಆದೇಶವನ್ನು ಪೊಲೀಸ್ರು ಕೊಟ್ಟಿದ್ದಾರೆ.ಅಂದ್ಹಾಗೆ ಪರಿಸ್ಥಿತಿಯ ಗಂಭೀರತೆ ನೋಡಿದ್ರೆ, ಮಂತ್ರಿ ಸಂಸ್ಥೆ ವಿರುದ್ಧ ಮತ್ತಷ್ಟು ದೂರು-ಎಫ್ ಐಆರ್ ದಾಖಲಾಗುವ ಸಾಧ್ಯತೆ ದಟ್ಟವಾಗಿದೆ.

 

 

 

 

Spread the love
Leave A Reply

Your email address will not be published.

Flash News