ಮೇಯರ್ ಗೌತಮ್ ಅವಾಜ್ ಗೆ ಸುಸ್ತ್../kannadaflashnews

0

ಕನ್ನಡ ಫ್ಲಾಶ್ ನ್ಯೂಸ್.ಕಾಂ-ಬೆಂಗಳೂರು ಪ್ರತಿನಿಧಿಯಿಂದ

ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮೇಯರ್ ಗೌತಮ್ ಕುಮಾರ್ ತಮ್ಮ  ಖಡಕ್  ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.ಜಯನಗರದಲ್ಲಿರುವ ಮಳೆನೀರುಕಾಲುವೆ ಕಛೇರಿ ಹಾಗು ಜನನ-ಮರಣ ನೋಂದಣಿ ಹಾಗೂ ಆರೋಗ್ಯ ವಿಭಾಗಗಳಿಗೆ ಸಪ್ರೈಸ್ ವಿಸಿಟ್ ನೀಡಿ ಅಧಿಕಾರಿ ಸಿಬ್ಬಂದಿಗೆ ಬೆವರಳಿಸಿದ್ರು.

"ಏನ್ರಿ ಇದು ಅಟೆಂಡೆನ್ಸೇ ಯಾರು ಹಾಕಿಲ್ಲ..ಸಂಬ್ಳ ಹೆಂಗ್ ತಗೋತೀರಿ.."
                                              “ಏನ್ರಿ ಇದು ಅಟೆಂಡೆನ್ಸೇ ಯಾರು ಹಾಕಿಲ್ಲ..ಸಂಬ್ಳ ಹೆಂಗ್ ತಗೋತೀರಿ..”

ಮಳೆ ನೀರು ಕಾಲುವೆ ವಿಭಾಗಕ್ಕೆ ಭೇಟಿ ನೀಡಿದ ವೇಳೆ ಕಡತಗಳ ಸರಿಯಾದ ವಿಲೇವಾರಿಯಾಗದೆ ಅಧಿಕಾರಿ ಸಿಬ್ಬಂದಿ ಸೋಮಾರಿತನ ತೋರುತ್ತಿರುವುದು ಕಂಡುಬಂತು.ಮೇಯರ್ ಸಂಬಂಧಿಸಿದವ್ರನ್ನು ತೀವ್ರ ತರಾಟೆಗೆ ತೆಗೆದುಕೊಂಡ್ರು.

ಇದೆಲ್ಲಾ ಏನ್ರಿ ಏನ್ ಕೆಲಸ ಮಾಡ್ತಾ ಇದೀರಾ,ಇದೇನ್ ಧರ್ಮದ್ ಛತ್ರನಾ..ನಾಚಿಕೆಯಾಗ್ಬೇಕು..
“ಇದೆಲ್ಲಾ ಏನ್ರಿ …ಏನ್ ಕೆಲಸ ಮಾಡ್ತಾ ಇದೀರಾ..,ಇದೇನ್ ಧರ್ಮದ್ ಛತ್ರನಾ..ನಾಚಿಕೆಯಾಗ್ಬೇಕು..”

ಚೀಫ್ ಎಂಜಿನಿಯರ್ ಪ್ರಹ್ಲಾದ್  ಅಕ್ಟೋಬರ್ ತಿಂಗಳಲ್ಲಿ ಒಂದು ದಿನವೂ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕದಿರುವುದು ಕಂಡು ಬಂತು.  ಪ್ರಹ್ಲಾದ್, ಮ್ಯಾನೇಜರ್ ದೀಪಶ್ರೀ ಸೇರಿದಂತೆ ಹಾಜರಾತಿಗೆ ಸಹಿ ಹಾಕದವ್ರ  ಸಂಬಳ ಕಡಿತಕ್ಕೆ ಸೂಚನೆ ಕೊಟ್ರು.ಕೆಲಸದ ಬಗ್ಗೆ ಫೀಲ್ಡ್ ರಿಪೋರ್ಟ್ ನಿರ್ವಹಿಸದ ಬಗ್ಗೆ ಅಧಿಕಾರಿಗಳನ್ನು  ತರಾಟೆ ತೆಗೆದುಕೊಂಡ್ರು.

ಬಿಬಿಎಂಪಿ ಮೈಗಳ್ಳ ಅಧಿಕಾರಿ-ಸಿಬ್ಬಂದಿಗೆ ಮೇಯರ್ ಗೌತಮ್ ಹೇಗೆ ಬೆವರಿಳಿಸಿದ್ರು ಎನ್ನೋದನ್ನು ನೋಡ್ಲಿಕ್ಕೆ ಈ YOUTUBE ಲಿಂಕ್ ಕ್ಲಿಕ್ ಮಾಡಿ..

Spread the love
Leave A Reply

Your email address will not be published.

Flash News