“ಆರಗ”ತಿಂದ್ ಮನೆಗೆ ದ್ರೋಹ ಮಾಡ್ಬಿಟ್ಟ /kannadaflashnews

0

(ಕನ್ನಡ ಫ್ಲಾಶ್.ಕಾಂ ಜಿಲ್ಲಾ ಪ್ರತಿನಿಧಿಯಿಂದ)

ಶಿವಮೊಗ್ಗ/ತೀರ್ಥಹಳ್ಳಿ:

ಆರಗ ಜ್ಞಾನೇಂದ್ರ ಭೂಬಾಕ..ವಂಚಕ..ನಮ್ಮ ಮನೆಯಲ್ಲಿ ಮನೆಮಗನಂತಿದ್ದ ಆರಗಜ್ಞಾನೇಂದ್ರ ನಮ್ಮ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾನೆ..ಆತನ ವಿರುದ್ಧ ಇ.ಡಿ ಅಥವಾ ಸಿಬಿಐ ತನಿಖೆಯಾಗಬೇಕೆಂದು ಪ್ರಭಾವತಿ‌ ಶಾಮಣ್ಣ ಪಟ್ಟು ಹಿಡಿದಿದ್ದಾರೆ.

ತಮ್ಮ ದಾಖಲೆಯನ್ನು ತಮ್ಮದೆಂದು ನಕಲು ಮಾಡಿ ಆಸ್ತಿ ಕಬಳಿಸಿದ್ದಾನೆ.ನಂಬಿಕೆ ದ್ರೋಹ ಮಾಡಿದ್ದಾನೆ.ಸಾಕಿ‌ ಸಲುಹಿ ಮದ್ವೆ ಮಾಡಿಕೊಟ್ಟ ನಮ್ಮ ಕುಟುಂಬಕ್ಕೆ ದ್ರೋಹ ಎಸಗಿದ್ದಾನೆ ಎನ್ನೋದು ಪ್ರಭಾವತಿ ಆರೋಪ.
ಆರಗ, ನಮ್ಮ ಮನೆಯಲ್ಲೇ ಕೆಲಸಕ್ಕಿದ್ದ ಹುಡುಗ.ಬಿಕಾಂ ನಲ್ಲಿ ಫೇಲಾದ್ಮೇಲೆ ಕೆಲಸಕ್ಕೆ ಸೇರಿಕೊಂಡಿದ್ದ.ನಾನೇ ಹೆಣ್ಣು ಹುಡುಕಿ ತಾಳಿ ಕೊಡ್ಸಿ ಮದ್ವೆ ಮಾಡಿದ್ದೆ.

ನಂಬಿಕೆ ಇಟ್ಟು ನಮ್ಮ ರೈಸ್ ಮಿಲ್ ನ ಕಾಗದಪತ್ರ ಕೊಟ್ರೆ ಕೆಲ ದಿನ ಬಿಟ್ಟು ನಾನೇ ಅದ್ರ ಮಾಲೀಕ ಎಂದ್ಬಿಟ್ಟ.ಆತನಿಂದ ವಿಶ್ವಾಸದ್ರೋಹ ಅಷ್ಟೇ ಅಲ್ಲ..ಕೋಟ್ಯಾಂತರ ನಷ್ಟವಾಗಿದೆ.ಆತನ ವಿರುದ್ಧ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.

Spread the love
Leave A Reply

Your email address will not be published.

Flash News