ಸಿಎಂ ಯಡವಟ್ಟಿಗೆ ಹರಕೆಯ ಕುರಿಗಳಾಗಿದ್ದು ಬಿಬಿಎಂಪಿ ಅಧಿಕಾರಿಗಳಷ್ಟೇ..

0

ಬೆಂಗಳೂರು:ವೈಟ್ ಟಾಪಿಂಗ್ ಕಾಮಗಾರಿ ಬಿಳಿಯಾನೆ ಎನ್ನುವ ಕಾರಣಕ್ಕೆ ಇನ್ಮುಂದೆ ಯಾವ್ದೇ ಕಾಮಗಾರಿ ಮಾಡಬಾರದೆನ್ನುವ ಖಡಕ್ ಆದೇಶ ಹೊರಡಿಸಿದ್ದು ಈ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನೇ..ಹಾಗೆಯೇ ಯಡಿಯೂರು ವಾರ್ಡ್ ನಲ್ಲಿ ಅದೇ ವೈಟ್ ಟಾಪಿಂಗ್ ಕಾಮಗಾರಿಯನ್ನು ಪುನಾರಂಭಿಸಿ ಎಂದು ವಿವಾದಾತ್ಮಕ ಆದೇಶ ಹೊರಡಿಸಿದ್ದು ಇದೇ ಯಡಿಯೂರಪ್ಪ.ಆದ್ರೆ ಬಲಿ ಕಾ ಬಕ್ರಾಗಳಾಗಿದ್ದು ಮಾತ್ರ ಬಿಬಿಎಂಪಿ ಅಧಿಕಾರಿಗಳು.

ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ವೈಟ್ ಟಾಪಿಂಗ್ ಮಾದರಿಯ ರಸ್ತೆ
ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ವೈಟ್ ಟಾಪಿಂಗ್ ಮಾದರಿಯ ರಸ್ತೆ

ಯೆಸ್..ಟೆಂಡರ್ ಶ್ಯೂರ್ ನ ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳಾಗ್ತಿರುವುದರಿಂದ ತತ್ ಕ್ಚಣಕ್ಕೆ ರದ್ದು ಮಾಡುವಂತೆ ಆದೇಶಿಸಿದ್ರು ಯಡಿಯೂರಪ್ಪ.ಹೇಳಿದ ಮಾತಿಗೆ ತಕ್ಕಂತೆ ನಡೆದುಕೊಂಡಿದ್ದರೆ ಪರ್ವಾಗಿರಲಿಲ್ಲ.ಆದ್ರೆ ಯಡಿಯೂರು ವಾರ್ಡ್ ಕಾರ್ಪೊರೇಟರ್ ಎನ್.ಆರ್ ರಮೇಶ್ ತಮ್ಮ ವಾರ್ಡ್ ನ  ಎರಡು ಕಡೆ ವೈಟ್ ಟಾಪಿಂಗ್ ಮಾಡೊಕ್ಕೆ ಗುತ್ತಿಗೆದಾರರಿಂದ ಮಾಡಿಸಿದ ದರಪಟ್ಟಿಯನ್ನು ಸಿಎಂ ಅವರಿಂದ ಅಪ್ರೂವಲ್ ಮಾಡಿಸಿಕೊಂಡಿದ್ದಾರೆನ್ನುವ ಆರೋಪವೇ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ವೈಟ್ ಟಾಪಿಂಗ್ ರಸ್ತೆ ಗೊಂದಲಕ್ಕೆ ಉತ್ತರ ನೀಡುವಂತೆ ಕಾರಣ ಕೇಳಿ ನೀಡಲಾಗಿರುವ ನೋಟಿಸ್

ಗುತ್ತಿಗೆದಾರರು ಯಾವ್ದೇ ಕಾರಣಕ್ಕೂ ದರ ಪಟ್ಟಿ ಸಿದ್ದಪಡಿಸುವಂತಿಲ್ಲ.ಅದನ್ನು ಮಾಡ್ಬೇಕಿರುವುದು ವಾರ್ಡ್ ಎಂಜಿನಿಯರ್ಸ್.ಆದ್ರೆ ಯಡಿಯೂರು ವಾರ್ಡ್ ವಿಚಾರದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಪ್ರಕ್ರಿಯೆ ನಡೆದಿರುವುದರಿಂದ ಯಡಿಯೂರಪ್ಪ ತೀವ್ರ ಮುಜುಗರಕ್ಕೆ ಸಿಲುಕಿದ್ದಾರೆ.ಇನ್ ಫ್ಯಾಕ್ಟ್ ಬಿಬಿಎಂಪಿ ಕಾಂಗ್ರೆಸ್ ಮುಖಂಡ್ರೇ ಯಡಿಯೂರಪ್ಪರ ರಾಜೀನಾಮೆಗೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹ ಪಡಿಸಿದ್ದಾರೆ.

ಇದೆಲ್ಲಾ ಒತ್ತಟ್ಟಿಗಿರಲಿ,ದುರಂತ ಹಾಗೂ ವಿಪರ್ಯಾಸದ ವಿಷಯ ಎಂದ್ರೆ ಒಟ್ಟಾರೆ ಪ್ರಕರಣದಲ್ಲಿ ಈಗ ಬಲಿಪಶುಗಳಾಗಿರುವುದು ಬಿಬಿಎಂಪಿಯ ಇಬ್ಬರು ಅಧಿಕಾರಿ ಗಳು.ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ರಮಣರೆಡ್ಡಿ ಸೂಚನೆ ಮೇರೆಗೆ ನೊಟೀಸ್.

ದಕ್ಷಿಣ ವಿಭಾಗದ ಮುಖ್ಯ ಎಂಜಿನಿಯರ್ ಮುದ್ದುರಾಜ್ ,ದಕ್ಷಿಣ ವಿಭಾಗದ ಕಾರ್ಯಪಾಲಕ ಅಭಿಯಂತರ ಮಹಾಂತೇಶ್  ಅವರಿಗೆ ವಿಶೇಷ ಆಯುಕ್ತ ರವಿಸುರಪುರ ಶೋಕಾಸ್ ನೊಟೀಸ್ ಜಾರಿ ಮಾಡಿದ್ದಾರೆ.ಟೆಂಡರ್ ಕರೆಯದೆ 4-ಜಿ ಅಡಿಯಲ್ಲಿ ಅಪ್ರೂವಲ್ ಮಾಡಿದ್ಹೇಗೆ.

ಗುತ್ತಿಗೆದಾರರಿಬ್ಬರು ರೆಡಿ ಮಾಡಿದ ದರ ಪಟ್ಟಿ ಒಪ್ಪಿಕೊಂಡಿದ್ದೇಗೆ ಎನ್ನುವ ಎರಡು ಪ್ರಶ್ನೆಗೆ ವಾರದೊಳಗೆ  ಉತ್ತರಿಸುವಂತೆ ಸೂಚಿಸಿದ್ದಾರೆ.ಯಾರದೋ ಒತ್ತಡಕ್ಕೆ ಮಣಿದು ಮಾಡಿದ ಕೆಲಸಕ್ಕೆ ಈಗ ಇಬ್ಬರೂ ಪೀಕಲಾಟಕ್ಕೆ ಸಿಲುಕಿದ್ದಾರೆ.

Spread the love
Leave A Reply

Your email address will not be published.

Flash News