“ಹೀಗೆ ಸಾಯಿಸೊಕ್ಕಿಂತ ಒಂದೇ ಸಲ ದಯಾಮರಣ ಕೊಟ್ಬಿಡಿ”

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಬ್ಯೂರೋ)

ಬೆಂಗಳೂರು: ತಿಂಗಳ 30 ದಿನವೂ ಕೆಲಸ ಮಾಡೊಕ್ಕೆ ಸಾಧ್ಯವಿಲ್ಲ.ಇಂಥಾ ಟಾರ್ಚರ್ ಸಹಿಸಿಕೊಳ್ಳೊಕ್ಕಿಂತ ಸತ್ತೋಗೋದೇ ಬೆಟರ್..ಹಾಗಾಗಿ ನಮಗೆ ದಯಾಮರಣ ದಯಪಾಲಿಸ್ಬಿಡಿ ಎಂದು ಸರ್ವೆಯರ್ಸ್ ಕಂದಾಯ ಇಲಾಖೆಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ತಿಂಗಳ 30 ದಿನವೂ ಪ್ರತಿನಿತ್ಯ ಒಂದರಂತೆ ಪ್ರಕರಣಗಳನ್ನು ಕಡ್ಡಾಯವಾಗಿ ವಿಲೇವಾರಿ ಮಾಡಬೇಕು,ತಪ್ಪಿದ್ರೆ ಅಂಥವ್ರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಮನೀಷ್ ಮೌದ್ಗಿಲ್ ಅವರು ಆದೇಶಿಸಿರುವುದು ಸರ್ವೆಯರ್ ಗಳ ನೆಮ್ಮದಿಯನ್ನೇ ಹಾಳು ಮಾಡಿದೆ.ಅವರ ವೈಯುಕ್ತಿಕ ಬದುಕಿನ ಸಂತೋಷವನ್ನೇ ಕಸಿದುಕೊಂಡಿದೆ.ಮಾನಸಿಕ ಸಮತೋಲನವನ್ನೇ ಕಳಕೊಂಡಿದ್ದಾರೆ.ಈಗಾಗ್ಲೇ ಒಂದಿಬ್ಬರು ಸುಸೈಡ್ ಕೂಡ ಮಾಡಿಕೊಂಡಿದ್ದಾರೆ.ಪರಿಸ್ತಿತಿ ಹೀಗೇ ಮುಂದುವರುದ್ರೆ ಇನ್ನೂ ಒಂದಷ್ಟು ನೌಕರರು ಆತ್ಮಹತ್ಯೆಗೆ ಶರಣಾಗುವ ಆತಂಕವಿದೆ ಎಂದು ಕನ್ನಡ ಫ್ಲಾಶ್ ನ್ಯೂಸ್ ಗೆ ಸರ್ವೆಯರ್ಸ್ ಯೂನಿಯನ್ ಅಧ್ಯಕ್ಷ ಶ್ರೀಕಂಠ ತಿಳಿಸಿದ್ದಾರೆ.

ದಯಾಮರಣ ಕೋರಿ ಆಯುಕ್ತರಿಗೆ ಬರೆದಿರುವ ಪತ್ರದ ಪ್ರತಿ
ದಯಾಮರಣ ಕೋರಿ ಆಯುಕ್ತರಿಗೆ ಬರೆದಿರುವ ಪತ್ರ
ದಯಾಮರಣ ಕೋರಿ ಆಯುಕ್ತರಿಗೆ ಬರೆದಿರುವ ಪತ್ರ
ದಯಾಮರಣ ಕೋರಿ ಆಯುಕ್ತರಿಗೆ ಬರೆದಿರುವ ಪತ್ರ
ದಯಾಮರಣ ಕೋರಿ ಆಯುಕ್ತರಿಗೆ ಬರೆದಿರುವ ಪತ್ರ
ದಯಾಮರಣ ಕೋರಿ ಆಯುಕ್ತರಿಗೆ ಬರೆದಿರುವ ಪತ್ರ

ಬೇರ್ಯಾವ ಇಲಾಖೆಯಲ್ಲೂ ಇಲ್ಲದ ಅವೈಜ್ನಾನಿಕ ಹಾಗೂ ಅಮಾನವೀಯ ರೂಲ್ಸನ್ನು ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಮಾಡಿಸಿ ಅದನ್ನು ಇಂಪ್ಲಿಮೆಂಟ್ ಮಾಡಿಸಿರುವ ಮನೀಷ್ ಮೌದ್ಗಿಲ್ ಅವರಿಗೆ ನೌಕರರ ಬವಣೆ ಅರ್ಥವೇ ಆಗುತ್ತಿಲ್ಲ ಎನ್ನೋದು ಯೂನಿಯನ್ ಖಜಾಂಚಿ ಅಭಿನಂದನ್ ಅಳಲು.

ತಮ್ಮ ಮೇಲಿರುವ ಒತ್ತಡವನ್ನು ಕಡ್ಮೆ ಮಾಡಿಕೊಳ್ಳಲು ನೌಕರರ ಮನೋಬಲ ಹಾಗೂ ನೆಮ್ಮದಿಯನ್ನೇ ಹಾಳು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಹಿಡಿಹಿಡಿಯಾಗಿ ಸಾಯೊಕ್ಕಿಂತ ಅವರೇ ನಮಗೆ ದಯಾಮರಣ ಕೊಟ್ಬಿಡಿ ಎಂದು ಆಯುಕ್ತರಿಗೆ ನೂರಾರು ಸರ್ವೆಯರ್ಸ್ ಮನವಿ ಪತ್ರ ಬರೆದಿದ್ದಾರೆ.

Spread the love
Leave A Reply

Your email address will not be published.

Flash News