ಕಳ್ಳಾಟ ಬಿಡದ 55 ಬಿಬಿಎಂಪಿ ಕಾರ್ಪೊರೇಟರ್ಸ್/kannadaflashnews

0

ಬೆಂಗಳೂರು:ಬಿಬಿಎಂಪಿ ಕಾರ್ಪೊರೇಟರ್ಸ್ ಗೆ ಲೋಕಾಯುಕ್ತ ಆದೇಶವೆಂದ್ರೆ ಕಾಲು ಕಸನಾ..ಹೀಗೊಂದು ಅನುಮಾನ ಬರ್ಲಿಕ್ಕೆ ಕಾರಣ ಮೂರ್ನಾಲ್ಕು ನೊಟೀಸ್ ಹೊರತಾಗ್ಯೂ 198 ಕಾರ್ಪೊರೇಟರ್ಸ್ ಪೈಕಿ ಇನ್ನೂ 55 ಜನ ಆಸ್ತಿ ವಿವರ ಸಲ್ಲಿಸದೆ ನೆಗ್ಲೆಕ್ಟ್ ಮಾಡಿರೋದು.ಒಂದಲ್ಲಾ ಎರಡಲ್ಲ ಬರೋಬ್ಬರಿ 55 ಕಾರ್ಪೊರೇಟರ್ಸ್ ಇನ್ನೂ ಆಸ್ತಿ ವಿವರವನ್ನೇ ಸಲ್ಲಿಸಿಲ್ಲ ಎನ್ನೋದು ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಅವರಿಗೆ ಸಿಕ್ಕಿರುವ ಆರ್ ಟಿಐ ಮಾಹಿತಿಯಿಂದ್ಲೇ ಸ್ಪಷ್ಟವಾಗಿದೆ.

ಯಾವ್ದೆ ಚುನಾಯಿತ ಪ್ರತಿನಿಧಿ ಇರ್ಲಿ,ಆತ ಚುನಾವಣಾ ಆಯೋಗದ ಮುಂದೆ ಸಲ್ಲಿಸುವಂತೆ ಆಸ್ತಿ ವಿವರವನ್ನು ಲೋಕಾಯುಕ್ತದ ಮುಂದೆಯೂ ಸಲ್ಲಿಸಬೇಕೆನ್ನುತ್ತೆ ನಿಯಮ.ಆದ್ರೆ ಖತರ್ನಾಕ್ ಕಾರ್ಪೊರೇಟರ್ಸ್ ರಂಗೋಲಿ ಕೆಳಗೆ ನುಸುಳಲು ಯತ್ನಿಸಿ ವಿಫಲವಾದ್ರು.ಸರ್ಕಾರದ ಮಟ್ಟದಲ್ಲಿ ಇದನ್ನು ಕ್ಯಾನ್ಸಲ್ ಮಾಡ್ಲಿಕ್ಕೆ ಯತ್ನಿಸಿ ಸೋತ್ರು.ಆಗ ಅನಿವಾರ್ಯವಾಗಿ ಆಸ್ತಿ ವಿವರ ಸಲ್ಲಿಕೆಗೆ ಮನಸು ಮಾಡಿದ್ರು.ಮನಸೇನೋ ಮಾಡಿದ್ರು,ಆದ್ರೆ ಅದು ಕಾರ್ಯಗತಗೊಳ್ಳಲಿಲ್ಲ.ಈ ಬಗ್ಗೆ ಹೋರಾಟ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಮತ್ತೆ

ಕೋಲಾರ ಸಂಸದ ಕಮ್ ಕಾರ್ಪೊರೇಟರ್ ಮುನಿಸ್ವಾಮಿ
ಕೋಲಾರ ಸಂಸದ ಕಮ್ ಕಾರ್ಪೊರೇಟರ್ ಮುನಿಸ್ವಾಮಿ
ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್
ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್
ಬಿಬಿಎಂಪಿ ಮಾಜಿ ಮೇಯರ್ ಜಿ.ಪದ್ಮಾವತಿ
ಬಿಬಿಎಂಪಿ ಮಾಜಿ ಮೇಯರ್ ಜಿ.ಪದ್ಮಾವತಿ

ಲೋಕಾಯುಕ್ತರ ಗಮನ ಸೆಳೆಯುವ ಯತ್ನ ಮಾಡಿದ್ರು.ಮನವಿ ಮೇರೆಗೆ ಲೋಕಾಯುಕ್ತ ವಿಶ್ವನಾಥ ಶೆಟ್ಟಿ,ಕಾರ್ಪೊರೇಟರ್ಸ್ ಗೆ ಶೋಕಾಸ್

ನೋಟಿಸ್ ನೀಡಿದ್ರು.ಅಷ್ಟೇ ಅಲ್ಲ,ನಿರ್ಲಕ್ಷ್ಯ ಮುಂದುವರೆಸಿದ್ರೆ ರಾಜ್ಯಪಾಲರ ಗಮನಕ್ಕೆ ತಂದು ಅಂತಿಮವಾಗಿ ಈ ಬಗ್ಗೆ ಜಾಹೀರಾತು ಕೊಡ್ಬೇಕಾಗುತ್ತೆ ಎಂದು ಎಚ್ಚರಿಸಿದ್ದರು.

ಲೋಕಾಯುಕ್ತ ಗಮನ ಸೆಳೆದ ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್
ಲೋಕಾಯುಕ್ತ ಗಮನ ಸೆಳೆದ ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್

ಇದಕ್ಕೆ ಎಚ್ಚೆತ್ತುಕೊಂಡ ಕಾರ್ಪೊರೇಟರ್ಸ್ ಪೈಕಿ 55 ಜನರನ್ನು ಬಿಟ್ಟು  ಉಳಿದವರೆಲ್ಲರೂ ಆಸ್ತಿ ವಿವರವನ್ನು ಅವಸರವಸರವಾಗಿಯೇ ಸಲ್ಲಿಸಿದ್ದಾರೆ(ಅದು ಅಪೂರ್ಣ ಮಾಹಿತಿ ಒಳಗೊಂಡಿರುವ ಸಾಧ್ಯತೆಗಳಿವೆ.55 ಕಾರ್ಪೊರೇಟರ್ಸ್ ಪೈಕಿ ಕೋಲಾರ ಸಂಸದರೂ ಆಗಿರುವ ಕಾಡುಗೋಡಿ ವಾರ್ಡ್ ಕಾರ್ಪೊರೇಟರ್ ಮುನಿಸ್ವಾಮಿ,ಮಾಜಿ ಮೇಯರ್ ಗಳಾದ ಜಿ.ಪದ್ಮಾವತಿ,ಸಂಪತ್ ರಾಜ್ ಆಸ್ತಿ ವಿವರ ಸಲ್ಲಿಸಿಲ್ಲ.

ಕೊಟ್ಟ ಗಡುವಿನೊಳಗೆ ಆಸ್ತಿ ವಿವರ ಸಲ್ಲಿಸದೆ ಲೋಕಾಯುಕ್ತ ಆದೇಶವನ್ನು ಧಿಕ್ಕಿರಿಸಿರುವ ಕಾರ್ಪೊರೇಟರ್ಸ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆನ್ನುವ  ಮನವಿಯನ್ನು  ಎಚ್.ಎಂ ವೆಂಕಟೇಶ್ ಮಾಡಿದ್ದಾರೆ.ಅದೇನೇ ಆಗಲಿ,ಜನರಿಗೆ ಬುದ್ಧಿ ಹೇಳಬೇಕಾದ ಚುನಾಯಿತ ಪ್ರತಿನಿಧಿಗಳೇ ಈ ರೀತಿ ಕಳ್ಳಾಟ ಆಡಿದ್ರೆ ಹೇಗೆ.

ಆಸ್ತಿ ವಿವರ ಸಲ್ಲಿಸದ 55 ಕಾರ್ಪೊರೇಟರ್ಸ್ ಲೀಸ್ಟ್...
ಆಸ್ತಿ ವಿವರ ಸಲ್ಲಿಸದ 55 ಕಾರ್ಪೊರೇಟರ್ಸ್ ಲೀಸ್ಟ್...
ಆಸ್ತಿ ವಿವರ ಸಲ್ಲಿಸದ 55 ಕಾರ್ಪೊರೇಟರ್ಸ್ ಲೀಸ್ಟ್...
ಆಸ್ತಿ ವಿವರ ಸಲ್ಲಿಸದ 55 ಕಾರ್ಪೊರೇಟರ್ಸ್ ಲೀಸ್ಟ್…

 

 

ಆಸ್ತಿ ವಿವರ ಸಲ್ಲಿಸದ ಕಾರ್ಪೊರೇಟರ್ಸ್ 

**198 ಕಾರ್ಪೊರೇಟರ್ಸ್ ಪೈಕಿ 55 ಸದಸ್ಯರು ಸಲ್ಲಿಸಿಲ್ಲ ಆಸ್ತಿ ವಿವರ

**ಮೂರ್ನಾಲ್ಕು ಬಾರಿಯ  ನೊಟೀಸ್ ಗೂ ಡೋಂಟ್ಕೊ ಕೇರ್

**ಸಂಸದ ಕಮ್ ಕಾರ್ಪೊರೇಟರ್  ಕೂಡ ಆಸ್ತಿ ವಿವರ ಸಲ್ಲಿಸಿಲ್ಲ

**ಕೋಲಾರ ಸಂಸದ-,ಕಾಡುಗೋಡಿ ಕಾರ್ಪೊರೇಟರ್ ಮುನಿಸ್ವಾಮಿ

 

**ಇಬ್ಬರು ಮಾಜಿ ಮೇಯರ್ ಗಳು ಆಸ್ತಿ ವಿವರ ಸಲ್ಲಿಸಿಲ್ಲ.

**ಸಂಪತ್ ರಾಜ್,ಜಿ.ಪದ್ಮಾವತಿ ಆಸ್ತಿ ವಿವರ ಸಲ್ಲಿಸದ ಮಾಜಿ ಮೇಯರ್ಸ್

 

 

Spread the love
Leave A Reply

Your email address will not be published.

Flash News