9480801701 ನಂಬರ್ ಸಹವಾಸವೇ ಬೇಡ ಎಂದ್ರೇಕೆ ಡಿಸಿಪಿ ಬಾನೋತ್

0

ಬೆಂಗಳೂರು:ಈ ಸ್ಟೋರಿ ನಿಜಕ್ಕೂ ಇಂಟರೆಸ್ಟಿಂಗಾಗಿದೆ.ಜಿಲ್ಲೆಗಳ ಎಸ್ಪಿಯಾದವ್ರು ಸಹಜವಾಗೇ ಮೇಲಾಧಿಕಾರಿಗಳ ಮುಂದೆ ಬೇರ್ಬೇರೆಯಾದ ಬೇಡಿಕೆ-ಅಹವಾಲು ಇಡ್ತಾರೆ.ಆದ್ರೆ ಈ ಅಧಿಕಾರಿಯ ಡಿಮ್ಯಾಂಡ್ ಜೊತೆಗೆ ಕೊರಗೇ ಬೇರೆ..ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಅವರು ಮೇಲಾಧಿಕಾರಿಗಳ ಮುಂದೆ  ಅದೇನ್ ಬೇಡಿಕೆ ಸಲ್ಲಿಸಿದ್ದಾರೆ ಗೊತ್ತಾ.

ಕೇಳುದ್ರೆ ಆಶ್ಚರ್ಯಪಡ್ತೀರಾ. ರಮೇಶ್ ಬಾನೋತ್ ಅವರು ಬರೆದಿರುವ ಪತ್ರದಲ್ಲಿ ಈ ಹಿಂದೆ ಡಿಸಿಪಿಯಾಗಿದ್ದ ರವಿ ಚನ್ನಣ್ಣನವರ್ ಅವರಿಗೆ ನೀಡಲಾಗಿದ್ದ ನಂಬರ್ ನ್ನು ದಯವಿಟ್ಟು ಚೇಂಜ್ ಮಾಡ್ಕೊಡಿ.ಅದಕ್ಕೆ ಬರುವ ಕರೆಗಳನ್ನು ಸ್ವೀಕರಿಸಲು ಆಗ್ತಿಲ್ಲ.ಸಿಕ್ಕಾಪಟ್ಟೆ ಕಿರಿಕಿರಿಯಾಗುತ್ತಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್
ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್
ನಿಕಟಪೂರ್ವ ಡಿಸಿಪಿ ರವಿ ಡಿ.ಚೆನ್ನಣ್ಣನವರ್
ನಿಕಟಪೂರ್ವ ಡಿಸಿಪಿ ರವಿ ಡಿ.ಚೆನ್ನಣ್ಣನವರ್

ಅಂದ್ಹಾಗೆ ಯಾರೇ ಡಿಸಿಪಿಗಳು ಬಂದ್ರೂ ನಿರ್ಧಿಷ್ಟ ವಿಭಾಗಕ್ಕೆ ಅದರದೇ ಆದ ನಂಬರ್ ಫಿಕ್ಸ್ ಆಗಿರುತ್ತೆ.ರವಿ ಚನ್ನಣ್ಣನವರ್ ಪಶ್ಚಿಮ ವಿಭಾಗದ ಡಿಸಿಪಿಯಾಗಿದ್ದಾಗ 9480801701 ನಂಬರ್ ನ್ನು ಬಳಸುತ್ತಿದ್ದರು(ಈ ಹಿಂದೆ ಇದ್ದವರೂ ಇದೇ ನಂಬರ್ ಬಳಸುತ್ತಿದ್ದರು).ಸಾರ್ವಜನಿಕವಾಗಿ ಚನ್ನಣ್ಣನವರ್ ಗೆ ಹೆಚ್ಚು ಅಭಿಮಾನಿಗಳಿದ್ದುದ್ದರಿಂದ ದಿನಕ್ಕೆ ಸಾವಿರಾರು ಕರೆಗಳು ಬರುತ್ತಿದ್ದವು.

ಅದೇ ನಂಬರ್ ನ್ನು ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ರಮೇಶ್ ಬಾನೋತ್ ಅವರಿಗೆ ನೀಡಲಾಗಿದೆ.ಆದ್ರೆ ನಂಬರ್ ಗೆ ಬರುತ್ತಿರುವ ಕರೆಗಳು ಬಾನೋತ್ ಅವರಿಗೆ ಕೆಲಸ ಮಾಡ್ಲಿಕ್ಕೆ ನೀಡದಷ್ಟು ಡಿಸ್ಟರ್ಬ್ ಮಾಡುತ್ತಿವೆಯಂತೆ.ಒಂದ್ ಹಂತದವರೆಗೆ ಸಹಿಸಿಕೊಂಡಿರುವ ಅವರು ಈಗ ಮೇಲಾಧಿಕಾರಿಗಳಿಗೆ ಪತ್ರ ಬರೆದು ದಯವಿಟ್ಟು ಸಿಮ್ ಚೇಂಜ್ ಮಾಡಿಕೊಡಿ,ಕೆಲಸ ಮಾಡ್ಲಿಕ್ಕಾಗುತ್ತಿಲ್ಲ ಎಂಬ ಮನವಿ ಸಲ್ಲಿಸಿದ್ದಾರಂತೆ.

ಸಧ್ಯ ಬೇರೆಡೆ ಎಸ್ಪಿಯಾಗಿರುವ ರವಿ ಚನ್ನಣ್ಣವರ್ ವಿಭಾಗ ಬಿಟ್ಟು ತೆರಳಿದ್ರೂ ಅವರ ಅಭಿಮಾನಿಗಳು ಈಗಲೂ ಕರೆ ಮಾಡುತ್ತಲೇ ಇದ್ದಾರೆಂದ್ರೆ ಅವರ ಜನಪ್ರಿಯತೆ ಹಾಗೂ ಜನಮನ್ನಣೆ ಎಷ್ಟಿತ್ತೆನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.

Spread the love
Leave A Reply

Your email address will not be published.

Flash News