“ಉಸಿರು ಚೆಲ್ಲೇವು..ಹೋರಾಟ ಬಿಡೆವು”-ಮೂರನೇ ದಿನಕ್ಕೆ ಕಾಲಿಟ್ಟ ಕಳಸಾಬಂಡೂರಿ ಹೋರಾಟ

0

(ಫ್ಲಾಶ್ ನ್ಯೂಸ್ ಕನ್ನಡ.ಕಾಂ ಬ್ಯೂರೋ)

ಬೆಂಗಳೂರು:ಕಳಸಾಬಂಡೂರಿ  ಹೋರಾಟದ ಕಿಚ್ಚು ರಾಜಧಾನಿ ಬೆಂಗಳೂರಿಗೆ ವ್ಯಾಪಿಸಿದ್ರೂ ಎಮ್ಮೆ ಚರ್ಮದ ಯಡಿಯೂರಪ್ಪ ಸರ್ಕಾರ ಅನ್ನದಾತನ ಹೋರಾಟದತ್ತ ಗಮನವನ್ನೇ ಹರಿಸುತ್ತಿಲ್ಲ.ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟು ರೈತರು ಮಳೆಯಲ್ಲಿ ನೆನೆದು ತೊಪ್ಪೆಯಾಗುತ್ತಿದ್ದರೂ ಸರ್ಕಾರದ ಒಬ್ನೇ ಒಬ್ಬ ಜನಪ್ರತಿನಿಧಿ ನೀವು ಸತ್ತಿದ್ದೀರೋ..ಬದುಕಿದ್ದೀರೋ ಎಂದು ನೋಡುವ ಗೋಜಿಗೇನೇ ಹೋಗಿಲ್ಲ.ಆದ್ರೆ ಸ್ವಾಭಿಮಾನ ಅನ್ನದಾತ ಉಸಿರು ಚೆಲ್ಲೇವು..ಹೋರಾಟ ಬಿಡೆವು ಎಂಬ ಬಿಗಿಪಟ್ಟನ್ನು ಸಡಿಲಿಸದೆ ಹೆಬ್ಬಂಡೆಯಂತೆ ಕೂತಿದ್ದಾರೆ.

ದೇಶಕ್ಕೆ ಅನ್ನ ನೀಡುವ ರೈತಾಪಿಯನ್ನು ಬೀದಿಗೆ ತಂದ ಸರ್ಕಾರ
ದೇಶಕ್ಕೆ ಅನ್ನ ನೀಡುವ ರೈತಾಪಿಯನ್ನು ಬೀದಿಗೆ ತಂದ ಸರ್ಕಾರ

ರೈತನ ಹೆಸರಿನಲ್ಲೇ ಅಧಿಕಾರಕ್ಕೆ ಬಂದು,ಆತನ  ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಿಎಂ ಯಡಿಯೂರಪ್ಪ ಮಾಡ್ತಿರೋದೇನು..ರೈತರು ಮೂರ್ ದಿನದಿಂದ ಬಿಸಿಲು-ಮಳೆ-ಚಳಿ ಗಾಳಿ ಎನ್ನದೇ ಹೋರಾಟಕ್ಕೆ ಧುಮುಕಿರುವಾಗ ಅವ್ರ ಬೇಡಿಕೆ ಈಡೇರಿಸುವ ಮಾತು ಒತ್ತಟ್ಟಿಗಿರಲಿ,ಅವ್ರನ್ನು ಮಾತ್ನಾಡಿಸುವ ಕನಿಷ್ಠ ಸೌಜನ್ಯವನ್ನು ತೋರಿಲ್ಲ.

ಅಧಿಕಾರಕ್ಕೆ ಬರಲು  ರೈತರು ಬೇಕು,ಆದ್ರೆ ಅವ್ರ ಸಮಸ್ಯೆಗಳೆಂದ್ರೆ ನೂರ್ ಮೈಲಿ ದೂರ ಸಿಡಿದು ನಿಲ್ಲುವ ಸರ್ಕಾರದ ಮನಸ್ಥಿತಿ ಅನ್ನದಾತನ ಒಡಲಾಗ್ನಿ ಸ್ಪೋಟಿಸುವಂತೆ ಮಾಡಿದೆ.

ಮೂರನೇ ದಿನಕ್ಕೆ ರೈತರ ಪ್ರತಿಭಟನೆ ಕಾಲಿಟ್ಟರೂ ಸರ್ಕಾರದ ಒಬ್ನೆ ಜನಪ್ರತಿನಿಧಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿಲ್ಲ.ರಾಜ್ಯಪಾಲರ ಭೇಟಿಗೆ ಅವಕಾಶ ನೀಡಿಲ್ಲ.ರೈತರ ಸಮಸ್ಯೆಗೆ ಸ್ಪಂದಿಸಲು ಸರ್ಕಾರ ತೀವ್ರ ನಿರ್ಲಕ್ಷ್ಯ ವಹಿಸ್ತಿರುವುದು,ವೋಟ್ ಹಾಕಿ ಅಧಿಕಾರಕ್ಕೆ ತಂದಂಥ ರೈತಾಪಿಯನ್ನು ತೀವ್ರ ಆಕ್ರೋಶಕ್ಕೀಡುಮಾಡಿದೆ.

ಅದ್ರಲ್ಲೂ ಮಳೆಗಾಲದ ಸಂದರ್ಭದಲ್ಲಿ ಮಹಿಳೆಯರನ್ನೆಲ್ಲಾ ರೈಲ್ವೆ ಸ್ಟೇಷನ್ ಕಾರಿಡಾರ್ ನಲ್ಲಿ ಮಲಗಿಸಿ ಉಳಿದ ರೈತರು ಮಳೆಯಲ್ಲಿ ಟಾರ್ಪಲ್ ಗಳನ್ನು ಹಾಕ್ಕಂಡು ಪ್ರತಿಭಟನೆ ಮಾಡ್ತಿರುವ ದೃಶ್ಯಗಳು ಎಂಥಾ ಕಲ್ಲುಮನಸ್ನು ಮರುಗಿಸುತ್ತದೆ.ಆದ್ರೆ ಸರ್ಕಾರ ಮಾತ್ರ ರೈತನ ಕೂಗಿಗೆ ಕಿವಿಯಾಗುತ್ತಲೇ ಇಲ್ಲ.

ಮಳೆ-ಚಳಿ-ಗಾಳಿ ಎನ್ನದೇ ಮೂರು ದಿನಗಳಿಂದ ಹೋರಾಟ ನಡೆಸುತ್ತಿರುವ ಅನ್ನದಾತರು
ಮಳೆ-ಚಳಿ-ಗಾಳಿ ಎನ್ನದೇ ಹೋರಾಟ ನಡೆಸುತ್ತಿರುವ ಅನ್ನದಾತರು

ಸರ್ಕಾರ ಸಂವೇದನಾರಹಿತವಾಗಿರಬಹುದು,ಮಾನ ಮರ್ಯಾದೆ ಇಲ್ದಂಗೆ ವರ್ತಿಸ್ತಿರಬಹುದು,ಮಳೆಗೆ ಹೆದರಿ ಪ್ರತಿಭಟನೆ ವಾಪಸ್ ಪಡೆದು ಹಳ್ಳಿಗಳಿಗೆ ತೆರಳ್ಬೋದು ಎಂದು ಸರ್ಕಾರ ಅಂದುಕೊಂಡಿದ್ರೆ ಅದು ಅವರ ಮೂರ್ಖತನವಾದೀತು ಎಂದು ರೈತರು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.

ನಮ್ಮ ಪ್ರಾಣಗಳು ಇಲ್ಲೇ ಹೋಗಲಿ,ಆದ್ರೆ ಹೋರಾಟದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತೊಡೆ ತಟ್ಟಿದ್ದಾರೆ.ಒಂದ್ರೀತಿ ಮಹದಾಯಿ ಹೋರಾಟದ ಕಿಚ್ಚು ನೋಡಿದ್ರೆ ಹೋರಾಟ ರೈತ ವರ್ಸಸ್ ಸರ್ಕಾರ  ಎನ್ನುವಂತಾಗಿದೆ.

Spread the love
Leave A Reply

Your email address will not be published.

Flash News