ಡಿಕೆಶಿ ಪಾಲಿಗೆ ನಾಳೆ ಜಡ್ಜ್ ಮೆಂಟ್ ಡೇ..

0

ಬೆಂಗಳೂರು/ನವದೆಹಲಿ: ಬೇನಾಮಿ ಹಣ ಪತ್ತೆ ಆರೋಪದಲ್ಲಿ ಜೈಲು ಪಾಲಾಗಿರುವ ಮಾಜಿ ಕೈ ಸಚಿವ ಡಿ.ಕೆ ಶಿವಕುಮಾರ್ ಪಾಲಿಗೆ ನಾಳೆ ನಿರ್ಣಾಯಕ ದಿನ.ಜಾಮೀನು ಕುರಿತು ನಡೆದ ವಿಚಾರಣೆಯ ತೀರ್ಪು ನಾಳೆ ಪ್ರಕಟವಾಗಲಿದ್ದು  ಡಿಕೆಶಿಗೆ ಜೈಲೋ ಬೇಲೋ ಎಂಬುದು ನಿರ್ಧಾರವಾಗಲಿದೆ.

ನಾಳೆ ಮಧ್ಯಾಹ್ನ 2.30ಕ್ಕೆ ತೀರ್ಪು ಪ್ರಕಟವಾಗುವ ಸಾಧ್ಯತೆಗಳಿದ್ದು,ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕುಮಾರ್ ತೀರ್ಪು ಪ್ರಕಟಿಸಲಿದ್ದಾರೆ.ಇಡಿ ಕೋರ್ಟ್ ನಿಂದ ಈಗಾಗ್ಲೇ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವುದರಿಂದ ಡಿಕೆಶಿಗೆ ಕಾನೂನಾತ್ಮಕವಾಗಿ ಆಸರೆಯಾಗಿರುವುದು ಹೈಕೋರ್ಟ್ ನ ತೀರ್ಪು ಮಾತ್ರ.ಹಾಗಾಗಿ ನಾಳೆಯ ತೀರ್ಪು  ನಿರ್ಣಾಯಕ ಎಂದೇ ವಿಶ್ಲೇಷಿಸಲಾಗುತ್ತಿದೆ.

 

ಇದನ್ನೂ ಓದಿ..ಡಿಕೆಶಿ ಪಾಲಿಗೆ ಶುಭನೋ..ಅಶುಭನೋ. http://kannadaflashnews.com/kannadaflashnews-kannadanews-politics-dkshivakumar-troubleshooter-firebrand-ed-newdelhi-bail-gauramma-usha-judgementday/

ಡಿಕೆಶಿ ಜಾಮೀನು ಬಗ್ಗೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು,ಜಾಮೀನಿನ ಪರವಾಗಿ ತೀರ್ಪು ಬಂದ್ರೆ ಡಿಕೆಶಿ ಸೆರೆವಾಸ ಮುಕ್ತಾಯವಾಗಲಿದೆ.ಒಂದ್ವೇಳೆ ನಿರೀಕ್ಷೆ ತಲೆಕೆಳಗಾದ್ರೆ ಡಿಕೆಶಿ ದೀಪಾವಳಿಯನ್ನು ಕೂಡ ಜೈಲಿನಲ್ಲಿಯೇ ಕಳೆಯಬೇಕಾಗುತ್ತದೆ.ಏಕೆಂದ್ರೆ ಡಿಕೆಶಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ.ಅಲ್ಲಿಯೂ ಸಹ ವಿಚಾರಣೆ ಅಸಾಧ್ಯ.ಏಕೆಂದ್ರೆ ಶನಿವಾರದಿಂದ ಅಕ್ಟೋಬರ್ 31 ರವರೆಗೂ ಕೋರ್ಟ್ ಗೆ ರಜೆ ಇರಲಿದೆ.ಹಾಗಾಗಿ   ನಾಳೆ ಜಾಮೀನು ಸಿಗದಿದ್ರೆ ಡಿಕೆಶಿ ಪಾಡು ಶೋಚನೀಯವಾಗಲಿದೆ.

Spread the love
Leave A Reply

Your email address will not be published.

Flash News