ತಿಹಾರ್ ಗೆ ಗುಡ್ ಬೈ -ಕನಕಪುರ ಹೆಬ್ಬಂಡೆಗೆ ಬೇಲ್..

0

ಕನ್ನಡ ಫ್ಲಾಶ್ ನ್ಯೂಸ್.ಕಾಂ

ಬೆಂಗಳೂರು/ನವದೆಹಲಿ:ಕಾಂಗ್ರೆಸ್ ಪಾಳೆಯದಲ್ಲಿ ಟ್ರಬಲ್ ಶೂಟರ್ ಎಂದೇ ಕರೆಸಿಕೊಂಡ ಡಿಕೆ ಶಿವಕುಮಾರ್ ಅವರಿಗೆ ಬೇಲ್ ಸಿಕ್ಕಿದೆ.ಮಾಡು ಇಲ್ಲವೇ ಮಡಿ ಎನ್ನುವಷ್ಟು ನಿರ್ಣಾಯಕವಾಗಿದ್ದ ಸನ್ನಿವೇಶದಲ್ಲಿ ಅವರಿಗೆ ಇ.ಡಿ ಕೋರ್ಟ್ ಬೇಲ್ ಕೊಟ್ಟಿದೆ.ಈ ಮೂಲಕ 50 ದಿನಗಳ ಜೈಲು ವಾಸ ಕೊನೆಯಾದಂತಾಗಿದೆ.ಮನಿಲಾಂಡ್ರಿ ಪ್ರಕರಣದಲ್ಲಿ ಜೈಲು ಸೇರಿದ್ದ ಡಿಕೆಶಿಗೆ ದೆಹಲಿ ಹೈಕೋರ್ಟಿನ ನ್ಯಾ. ಸುರೇಶ್ ಕುಮಾರ್ ಕೈಟ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಡಿಕೆಶಿ ಅವರ ಬೇನಾಮಿ ಹೊಂದಿದ್ದಾರೆ 317 ಬ್ಯಾಂಕ್ ಖಾತೆ ವಿವರ ಲಭ್ಯವಾಗದ ಹಿನ್ನಲೆಯಲ್ಲಿ ಜಾಮೀನು ನೀಡಬಾರದೆಂದು ಜಾರಿ ನಿರ್ದೇಶನಾಲಯದ ಪರ ವಕೀಲ ಕೆಎಂ ನಟರಾಜ್ ವಾದಿಸಿ, ಹೆಚ್ಚಿನ ವಿಚಾರಣೆಗಾಗಿ ಸಮಯ ಕೋರಿದ್ದರು. ಆದರೆ, ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ,ಶಿವಕುಮಾರ್, ಹೆಚ್ಚಿನ ಅವಧಿ ವಿಚಾರಣೆಯಲ್ಲಿ ಕಳೆದಿದ್ದಾರೆ.

ಸಾಕ್ಷ್ಯ ನಾಶ ಪಡಿಸುವುದಿಲ್ಲ ಹಾಗೂ ತನಿಖಾ ಸಂಸ್ಥೆ ಮುಂದೆ ವಿಚಾರಣೆಗೆ ಕರೆದಾಗ ಹಾಜರಾಗಲು ಒಪ್ಪಿದ್ದಾರೆ ಅಲ್ಲದೆ ವಿದೇಶ ಪ್ರಯಾಣವನ್ನು ಮಾಡದೆ ಪಾಸ್ ಪೋರ್ಟ್ ಕೋರ್ಟಿಗೆ ಒಪ್ಪಿಸಲು ತಯಾರಿದ್ದಾರೆ.ಅದಲ್ಲದೇ ಡಿಕೆಶಿ ಆರೋಗ್ಯ ಪರಿಸ್ಥಿತಿ ಕೂಡ ಹದಗೆಟ್ಟಿದೆ.ಈ ಎಲ್ಲಾ ಅಂಶಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸಿ ಜಾಮೀನು ನೀಡಿ ಎಂದು ಮಾಡಿದ ವಾದವನ್ನು ಪುರಸ್ಕರಿಸಿ ಜಾಮೀನು ನೀಡಲಾಗಿದೆ.

 

 

ಸಮನ್ಸ್ ನಿಂದ ಜೈಲ್-ಜೈಲ್ ನಿಂದ ಬೇಲ್ ವರೆಗಿನ ಡಿಕೆಶಿ ವೃತ್ತಾಂತ

*ಜನವರಿ 17, 2018- ಇಡಿಯಿಂದ ಮೊದಲ ಸಮನ್ಸ್

*ಫೆಬ್ರವರಿ 15,  2019 ಸಮರ್ಪಕ ವಿವರಣೆ ದೊರೆಯದ ಹಿನ್ನಲೆಯಲ್ಲಿ ಇಡಿಯಿಂದ ಎರಡನೇ ಸಮನ್ಸ್

*ಆಗಸ್ಟ್ 29, 2019 ಇಡಿ ಸಮನ್ಸ್ ರದ್ದು ಕೋರಿ ಡಿ.ಕೆ.ಶಿವಕುಮಾರ್ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ

*ಆಗಸ್ 29, 2019 ಡಿಕೆಶಿ ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಮತ್ತೊಂದು ಸಮನ್ಸ್ ನೀಡಿದ ಇಡಿ

*ಆಗಸ್ಟ್ 30, 2019 ಬಂಧನದಿಂದ ರಕ್ಷಣೆ ಕೋರಿ ರಾಜ್ಯ ಹೈಕೋರ್ಟಿಗೆ ಡಿಕೆಶಿ ಅರ್ಜಿ, ವಜಾ

*ಆಗಸ್ಟ್ 30, 2019 ಮೊದಲ ಬಾರಿಗೆ ಇಡಿ ವಿಚಾರಣೆಗೆ ಹಾಜರಾದ ಡಿಕೆಶಿ

*ಸೆಪ್ಟೆಂಬರ್ 3, 2019 ಡಿಕೆಶಿ ವಶಕ್ಕೆ ಪಡೆದ ಇಡಿ ಅಧಿಕಾರಿಗಳು

*ಸೆಪ್ಟೆಂಬರ್ 4, 2019 ಡಿಕೆಶಿಯನ್ನು ಇಡಿ ಕೋರ್ಟಿಗೆ ಹಾಜರುಪಡಿಸಿದ ಅಧಿಕಾರಿಗಳು

*ಸೆಪ್ಟೆಂಬರ್ 13ರ ವರೆಗೆ ಡಿಕೆಶಿವಕುಮಾರ್  ಇಡಿ ವಶಕ್ಕೆ

*ಸೆಪ್ಟೆಂಬರ್ 13 ರಂದು ಮತ್ತೆ ಸೆ. 17ರವರೆಗೆ ಇಡಿ ವಶಕ್ಕೆ ನೀಡಿದ ಕೋರ್ಟ್

*ಸೆಪ್ಟೆಂಬರ್ 17ರಂದು ಅಕ್ಟೋಬರ್  1ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳಿಸಿದ ಇಡಿ ಸ್ಪೆಷಲ್ ಕೋರ್ಟ್

*ಸೆಪ್ಟೆಂಬರ್ 25 ರಂದು ಡಿಕೆಶಿ ಜಾಮೀನು ಅರ್ಜಿ ವಜಾ-ಡಿಕೆಶಿ ಮುಖದಲ್ಲಿ ಆತಂಕ

*ಅಕ್ಟೋಬರ್ 17ರಂದು ಡಿಕೆಶಿ ಜಾಮೀನು ಅರ್ಜಿ ಕಾದಿರಿಸಿದ ದೆಹಲಿ ಹೈಕೋರ್ಟ್

*ಅಕ್ಟೋಬರ್ 23ರಂದು‌ ಡಿಕೆಶಿಗೆ ಷರತ್ತುಬದ್ಧ  ಜಾಮೀನು ನೀಡಿದ ದೆಹಲಿ ಹೈಕೋರ್ಟ್

Spread the love
Leave A Reply

Your email address will not be published.

Flash News