RAG ಗೆ RANK ಸ್ಟುಡೆಂಟ್ ಬಲಿ

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಕ್ರೈಮ್ ಬ್ಯೂರೋ)

ಆತ್ಮಹತ್ಯೆಗೆ ಶರಣಾದ ಪ್ರತಿಭಾನ್ವಿತ ವಿದ್ಯಾರ್ಥಿ ಗಗನ್
ಆತ್ಮಹತ್ಯೆಗೆ ಶರಣಾದ ಪ್ರತಿಭಾನ್ವಿತ ಕೃಷಿ ವಿದ್ಯಾರ್ಥಿ ಗಗನ್

ಬೆಂಗಳೂರು: ರ್ಯಾಗಿಂಗ್ ಎನ್ನುವ ಪೆಡಂಭೂತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯೋರ್ವನ ಬದುಕನ್ನೇ ಬಲಿತೆಗೆದುಕೊಂಡಿದೆ.ಹೆಬ್ಬಾಳದ ಜಿಕೆವಿಕೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗಗನ್ ಎನ್ನುವ ಪ್ರತಿಭಾವಂಥ ವಿದ್ಯಾರ್ಥಿ ತನ್ನ ಸೀನಿಯರ್ಸ್ ಕೊಡ್ತಿದ್ದ ಕಿರುಕುಳಕ್ಕೆ ಬೇಸತ್ತು ತಾನೇ ರೈಲ್ವೆ ಹಳಿಗೆ ತಲೆ ಕೊಟ್ಟು ಬದುಕನ್ನು ಕೊನೆಗಾಣಿಸಿಕೊಂಡಿದ್ದಾನೆ.

ಗೌರಿಬಿದನೂರು ಮೂಲದ ಗಗನ್ ಜಿಕೆವಿಕೆಯಲ್ಲಿ ಪ್ರಥಮ ವರ್ಷದ ಕೃಷಿ ಪದವಿ ಓದುತ್ತಿದ್ದ.ಎಸ್ ಎಸ್ ಎಲ್ ಸಿಯಲ್ಲಿ ರ್ಯಾಂಕ್ ವಿದ್ಯಾರ್ಥಿಯಾಗಿದ್ದ ಆತ ಪಿಯು ನಂತ್ರ ಕೃಷಿಯನ್ನೇ ಆಯ್ಕೆ ಮಾಡಿಕೊಂಡು ತಾನಾಯ್ತು ತನ್ನ ಓದಾಯ್ತು ಎಂದುಕೊಂಡಿದ್ದ.ಆದ್ರೆ ಸೀನಿಯರ್ಸ್ ಈತನಿಗೆ ನಿತ್ಯ  ಒಂದಲ್ಲಾ ಒಂದು ರೀತಿಯಲ್ಲಿ ರ್ಯಾಗಿಂಗ್ ಮಾಡಿ ಮಾನಸಿಕವಾಗಿ ಕ್ಷೋಭೆಗೀಡುಮಾಡಿದ್ರು.

ತನಗಾಗುತ್ತಿರುವ ಮಾನಸಿಕ ಯಾತನೆಯನ್ನು ಆತ ತನ್ನ ಚಿಕ್ಕಪ್ಪ ಮಲ್ಲೇಶ್ ಅವರ ಗಮನಕ್ಕೆ ತಂದಿದ್ದ.ಅವ್ರು ಕಾಲೇಜ್ ಕ್ಯಾಂಪಸ್ ಗೇನೇ ಬಂದು ಸೀನಿಯರ್ಸ್ ಗೆ ಬುದ್ಧಿ ಹೇಳಿದ್ರು.ಇ-Kannadaflashnews -kannadanews -CRIME- Banglore -GKVK- AgricultureCollege- GAGAN -Sucide -Railwaygauge -RAGING -Seniors  -SSLC -Rankದರಿಂದ ಜಿದ್ದಿಗೆ ಬಿದ್ದವರಂತೆ ಗಗನ್ ನನ್ನು ಮತ್ತಷ್ಟು ಗೋಳೋಯ್ದುಕೊಳ್ಳಲಾರಂಭಿಸಿದ್ದಾರೆ.ತಮ್ಮ ಒಳ  ಉಡುಪು ಹೊಗೆಸುವುದು,,ಸಿಗರೇಟ್ ಸೇದಿ ಮುಖಕ್ಕೆ ಬಿಡುವುದು..ತಮ್ಮ ರೂಂನ್ನು ಸ್ವಚ್ಛಗೊಳಿಸುವುದು..ಕಾಲೊತ್ತಿಸಿಕೊಳ್ಳೋದು..ಬಾತ್ ರೂಂ ತೊಳೆಸುವ ಕೆಲಸವನ್ನೆಲ್ಲಾ ಮಾಡಿಸುತ್ತಿದ್ದರು.ಆದ್ರೆ ಇದೆಲ್ಲಕ್ಕಿಂತ ಹೆಚ್ಚಾಗಿ ಬೆತ್ತಲೆಯಾಗಿ ರ್ಯಾಂಪ್ ಮೇಲೆ ನಡೆಯುವಂತೆ ಪೀಡಿಸುತ್ತಿದ್ದರಂತೆ.ಇದರಿಂದ ಮತ್ತಷ್ಟು ಕುಗ್ಗಿಹೋದ ಗಗನ್ ಕೊನೆಗೆ ಆತ್ಮಹತ್ಯೆ ನಿರ್ದಾರಕ್ಕೆ ಬಂದಿದ್ದಾನೆ ಎನ್ನಲಾಗಿದೆ.

ಎಸ್ ಎಸ್ ಎಲ್ ಸಿ , ಪಿಯೂಸಿ ಯಲ್ಲಿ ರ್ಯಾಂಕ್ ಬಂದಿದ್ದ ಗಗನ್  ಪಿಯುಸಿಯಲ್ಲೂ ಉತ್ತಮ ಅಂಕ ಪಡೆದಿದ್ದ. ಎಂಜಿನಿಯರಿಂಗ್ ಮೆಡಿಕಲ್ ನಲ್ಲಿ ಓದೊಕ್ಕೆ ಅವಕಾಶ ಸಿಕ್ಕಿತ್ತಾದ್ರೂ ತಮ್ಮ ಮನೆ ಕಸುಬು ಕೃಷಿಯಾಗಿದ್ದರಿಂದ ಅದಕ್ಕೆ ಅರ್ಜಿ ಹಾಕಿದ್ದ.ಜಿಕೆವಿಕೆಯಲ್ಲಿ ಬಿಎಸ್ಸಿ ಕೋರ್ಸ್ ಗೆ ಅರ್ಜಿ ಹಾಕಿದ್ದ ಫ್ರೀ ಸೀಟ್ ಸಿಕ್ಕಿತ್ತು. ಅದನ್ನೇ ಅಧ್ಯಯನದ ವಿಷಯವನ್ನಾಗಿ ತೆಗೆದುಕೊಂಡು ಓದುತ್ತಿದ್ದ.ತುಂಬಾ ಸೌಮ್ಯ ಪ್ರವೃತ್ತಿಯವನಾದ ಗಗನ್ ಗೆ ಫ್ರೆಂಡ್ಸ್ ಇದ್ದದ್ದು ಕೂಡ ಕಡಿಮೆ.ಇದನ್ನೇ ಮಿಸ್ಯೂಸ್ ಮಾಡ್ಕೊಂಡು ಸೀನಿಯರ್ಸ್ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟದಲ್ಲಿ ಕ್ವಾಟ್ಲೆ ಕೊಟ್ಟಿದ್ದಾರೆ.

ಸೀನಿಯರ್ಸ್ ಕಿರುಕುಳಕ್ಕೆ ಬೇಸತ್ತು ಗಗನ್ ಆತ್ಮಹತ್ಯೆ ಮಾಡಿಕೊಂಡ ಸ್ಥಳ
ಸೀನಿಯರ್ಸ್ ಕಿರುಕುಳಕ್ಕೆ ಬೇಸತ್ತು ಗಗನ್ ಆತ್ಮಹತ್ಯೆ ಮಾಡಿಕೊಂಡ ಸ್ಥಳ

ಪದೇ ಪದೇ ಮನೆಯವರಿಗೆ ಹೇಳಿದ್ರೆ ಬೇಸರಿಸಿಕೊಳ್ಳುತ್ತಾರೆ ಎನ್ನುವ ಒಂದೇ ಕಾರಣಕ್ಕೆ ತನ್ನ ನೋವು ನನ್ನೊಂದಿಗೇನೆ ಕೊನೆಯಾಗಲಿ ಎನ್ನುವ ಆಲೋಚನೆಯಲ್ಲಿ ಗಗನ್ ಯಶವಂತಪುರ ಹತ್ತಿರದ ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಪ್ರತಿಭಾವಂತ ವಿದ್ಯಾರ್ಥಿಯ ಸಾವಿನಿಂದ ಕಾಲೇಜಿನ ವಿದ್ಯಾರ್ಥಿವೃಂದ ಹಾಗೂ ಆಡಳಿತ ಮಂಡಳಿ ದಿಗ್ಬ್ರಾಂತಗೊಂಡಿದ್ದಾರೆ.ತಕ್ಷಣಕ್ಕೆ ಆತನ ಸಾವಿಗೆ ಕಾರಣರಾದ ಸೀನಿಯರ್ಸ್ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.ಗಗನ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಅದಕ್ಕೆ ಕಾರಣರಾದ ಸೀನಿಯರ್ಸ್ ಹಾಸ್ಟೆಲನ್ನೇ ಖಾಲಿ ಮಾಡ್ಕೊಂಡು ಪರಾರಿಯಾಗಿದ್ದಾರೆ.

ಗಗನ್ ಗೆ ಸೀನಿಯರ್ಸ್ ರ್ಯಾಗ್ ಮಾಡುತ್ತಿದ್ದರೆನ್ನಲಾದ ಹಾಸ್ಟೆಲ್
ಗಗನ್ ಗೆ ಸೀನಿಯರ್ಸ್ ರ್ಯಾಗ್ ಮಾಡುತ್ತಿದ್ದರೆನ್ನಲಾದ ಹಾಸ್ಟೆಲ್
ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಶವವನ್ನು ತೆಗೆಯುತ್ತಿರುವ ಪೊಲೀಸರು
ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಶವವನ್ನು ತೆಗೆಯುತ್ತಿರುವ ಪೊಲೀಸರು

 

Spread the love
Leave A Reply

Your email address will not be published.

Flash News