ಕೆಪಿಎಸ್ ಸಿ ಮಾಜಿ ಅಧ್ಯಕ್ಷ ಶ್ಯಾಂ ಭಟ್ ಗೆ ಅರೆಸ್ಟ್ ಭೀತಿ!

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಬ್ಯೂರೋ)

ಬೆಂಗಳೂರು: ಬಿಡಿಎ ಮಾಜಿ ಆಯುಕ್ತ ಹಾಗು ಮಾಜಿ ಕೆಪಿಎಸ್ ಸಿ ಅಧ್ಯಕ್ಷ ಶ್ಯಾಂ ಭಟ್ ಗೆ ಬಂಧನ ಭೀತಿ ಎದುರಾಗಿದೆ. ಅಬಕಾರಿ ಪಿಎಸ್ಐ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದ ಆರೋಪಿ ಜತೆಗೆ ಶಾಮೀಲಾಗಿರುವ ಆರೋಪ ಅವರ ಮೇಲಿದೆ.ಬೆಂಗಳೂರಿನ ಸಿಎಆರ್ ಕೇಂದ್ರದ ನಿವೃತ್ತ ಆರ್.ಎಸ್.ಐ. ಸಿದ್ದಯ್ಯರ ಪುತ್ರನಿಗೆ ಅಬಕಾರಿ ಪಿಎಸ್ ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ಅವರಿಂದ 20 ಲಕ್ಷದ ಪೈಕಿ 10 ಲಕ್ಷ ಹಣವನ್ನು ಧನರಾಜ್ ಎನ್ನೋವ್ನು ಪಡೆದಿದ್ದ.ಧನರಾಜ್ ಕೆಪಿಎಸ್ ಸಿ ಅಧ್ಯಕ್ಷರಾಗಿದ್ದ ಶ್ಯಾಂ ಭಟ್ ಅವರನ್ನು ಪರಿಚಯಿಸಿ ಪಡೆದಿದ್ದ ಎನ್ನಲಾಗಿದೆ.ಆದ್ರೆ ಆನಂತರ ಅವರಿಗೆ ಹುದ್ದೆ ಕೊಡಿಸದೆ ಮೋಸ ಮಾಡಿದ್ದ ಎನ್ನಲಾಗಿದೆ.

ಅಬಕಾರಿ ಎಸ್ ಐ ಹುದ್ದೆ ಕೊಡಿಸುವುದಾಗಿ ಹೇಳಿ ವಂಚಿಸಿದ ಆರೋಪಿ ಪ್ರದೀಪ್
ಅಬಕಾರಿ ಎಸ್ ಐ ಹುದ್ದೆ ಕೊಡಿಸುವುದಾಗಿ ಹೇಳಿ ವಂಚಿಸಿದ ಆರೋಪಿ ಪ್ರದೀಪ್
ಶ್ಯಾಂ ಭಟ್,ಪ್ರದೀಪ್ ಜೊತೆ ಸೇರಿ ವಂಚಿಸಿರುವ ಕಿಂಗ್ ಪಿನ್ ಧನರಾಜ್
ಶ್ಯಾಂ ಭಟ್,ಪ್ರದೀಪ್ ಜೊತೆ ಸೇರಿ ವಂಚಿಸಿರುವ ಕಿಂಗ್ ಪಿನ್ ಧನರಾಜ್

2017 ರ ಜೂನ್ ನಲ್ಲಿ ಮೂರು ಬಾರಿ ಒಟ್ಟಾರೆ 10 ಲಕ್ಷ ಹಣ ಪಡೆದಿದ್ದ ಧನರಾಜ್ ಬಳಿಕ ಸಿದ್ದಯ್ಯ ಪುತ್ರ ನಾಗೇಂದ್ರಗೆ ಅಬಕಾರಿ ಪಿಎಸ್ಐ ಹುದ್ದೆ ಕೊಡಿಸದೆ ವಂಚಿಸಿದ್ದ.ಪೊಲೀಸ್ ಠಾಣೆಗೆ ದೂರು ಕೊಡುವುದಾಗಿ ಬೆದರಿಸಿದ್ದಕ್ಕೆ ಅದನ್ನು ಕೆಪಿಎಸ್ಸ್ಸಿ ಅಧ್ಯಕ್ಷರಾಗಿದ್ದ ಶ್ಯಾಂಭಟ್ ಗೆ ನೀಡಿದ್ದಾಗಿ ಹೇಳಿದ್ದ ಆರೋಪಿ, 3 ಲಕ್ಷ ಹಣವನ್ನು ಹಿಂತಿರುಗಿಸಿದ್ದ.ಸಿದ್ಧಯ್ಯ ಅವರು ತಮಗಾದ ವಂಚನೆಯ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ರು.ಈ ದೂರಿನ ಹಿನ್ನಲೆಯಲ್ಲಿ ಶ್ಯಾಂಭಟ್ಟ, ಧನಂಜಯ್,ಪ್ರದೀಪ್ ವಿರುದ್ದ ಎಫ್ಐಆರ್ ದಾಖಲಾಗಿತ್ತು.

2019 ರ ಮೇ 12 ರಂದು ಎಫ್ಐಆರ್ ದಾಖಲಿಸಿದ್ದರಿಂದ ಹೆದರಿ ಧನರಾಜ್ ಮಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ.ಕಳೆದ ಎರಡು ದಿನಗಳಿಂದೆ ಜೆಡಿಎಸ್ ಮುಖಂಡ ಎಂದು ಹೇಳಿಕೊಂಡಿರುವ ಧನರಾಜ್ ನ್ಯಾಯಾಲಯದ ಮುಂದೆ ಶರಣಾಗಿದ್ದ.ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶ್ಯಾಂಭಟ್ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರೆನ್ನುವ ಅಂಶ ಎಫ್ ಐ ಆರ್ ನಲ್ಲಿ ಉಲ್ಲೇಖವಾಗಿರುವುದರಿಂದ ಇದೀಗ ಶ್ಯಾಂ ಭಟ್ ಗೆ ಬಂಧನ ಭೀತಿ ಎದುರಾಗಿದೆ.

Spread the love
Leave A Reply

Your email address will not be published.

Flash News