ಡಿಕೆ ಬ್ರದರ್ಸ್ ಗೆ ಖರ್ಗೆ ಅಭಯ/kannadaflashnews

0
ನವದೆಹಲಿಯ ನಿವಾಸದಲ್ಲಿ ಡಿಕೆ ಸಹೋದರರನ್ನು ಭೇಟಿಯಾಗಿ ಧೈರ್ಯ ತುಂಬಿದ ಮಲ್ಲಿಕಾರ್ಜುನ ಖರ್ಗೆ
ನವದೆಹಲಿಯ ನಿವಾಸದಲ್ಲಿ ಡಿಕೆ ಸಹೋದರರನ್ನು ಭೇಟಿಯಾಗಿ ಧೈರ್ಯ ತುಂಬಿದ ಮಲ್ಲಿಕಾರ್ಜುನ ಖರ್ಗೆ
ಆದದ್ದೆಲ್ಲಾ ಒಳ್ಳೇಯದಕ್ಕೆ ಆಗಿದೆ..ಮುಂದೆಯೂ ಒಳ್ಳೇಯದೆ ಆಗಲಿದೆ..ಡೋಂಟ್ ಕೇರ್
ಆದದ್ದೆಲ್ಲಾ ಒಳ್ಳೇಯದಕ್ಕೆ ಆಗಿದೆ..ಮುಂದೆಯೂ ಒಳ್ಳೇಯದೆ ಆಗಲಿದೆ..ಡೋಂಟ್ ಕೇರ್

 ನವದೆಹಲಿ:ಇಡಿ ಬಂದನದಿಂದ ಬಿಡುಗಡೆಯಾದ ಮೇಲೆ ಕನಕಪುರ ಹೆಬ್ಬಂಡೆ ತಮಗೆ ನೈತಿಕವಾಗಿ ಬೆಂಬಲ ನೀಡಿದ ಪಕ್ಷದ ಮುಖಂಡರನ್ನು ಭೇಟಿಯಾಗಿ ಅವರಿಗೆ ಧನ್ಯವಾದ ಸಲ್ಲಿಸುವ ಜೊತೆಗೆ ಮುಂದಿನ ರಾಜಕೀಯ ನಡೆ ಬಗ್ಗೆ  ಸಮಾಲೋಚನೆ ನಡೆಸುತ್ತಿದ್ದಾರೆ.ನಿನ್ನೆ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದ ಡಿಕೆಶಿ ಇವತ್ತು ಬೆಳ್ಳಂಬೆಳಗ್ಗೆ ತಮ್ಮ ಸಹೋದರ ಡಿಕೆ ಸುರೇಶ್ ಮನೆಯಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ವರಿಷ್ಠ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿದ್ರು.

ಈ ವೇಳೆ ತಮ್ಮೊಂದಿಗಾದ ಬೆಳವಣಿಗೆಗಳ ಬಗ್ಗೆ  ಚರ್ಚಿಸಿದ್ರು.ಪಕ್ಷದೊಳಗಿರುವ ಮುಖಂಡರೇ ತಮ್ಮ ಬೆನ್ನಿಗೆ ಚೂರಿ ಹಾಕಿದ್ದರ ಬಗ್ಗೆಯೂ ಡಿಕೆಶಿ ನೋವು ತೋಡಿಕೊಂಡಿದ್ದಾರೆ ಎನ್ನಲಾಗಿದೆ.ಆದ್ರೆ ಎಷ್ಟೇ ಅನ್ಯಾಯವಾದ್ರೂ ತಾಳ್ಮೆ ಕಳೆದುಕೊಳ್ಳದಿರುವಂಥೆ ಖರ್ಗೆ,ಡಿಕೆಶಿಗೆ ಸಮಾಧಾನಪಡಿಸಿದ್ರು ಎನ್ನಲಾಗಿದೆ.ಇದೇ ವೇಳೆ ಅಣ್ಣನಿಗೆ ಕಷ್ಟದ ದಿನಗಳಲ್ಲಿ ಬೆನ್ನಾಗಿ ನಿಂತ ಡಿಕೆ ಸುರೇಶ್ ದೈರ್ಯಕ್ಕೆ ಶಹಬ್ಬಾಸ್ ಗಿರಿ ನೀಡಿದ್ದಾರೆ.

 

Spread the love
Leave A Reply

Your email address will not be published.

Flash News