ಮೊಟ್ಟ ಮೊದಲ ಮಕ್ಕಳ ಕಮರ್ಷಿಯಲ್​ ಚಿತ್ರ ಗಿರ್ಮಿಟ್​ ಟ್ರೈಲರ್​ ರಿಲೀಸ್

0

ಮೊಟ್ಟ ಮೊದಲ ಮಕ್ಕಳ ಕಮರ್ಷಿಯಲ್​ ಚಿತ್ರ ಗಿರ್ಮಿಟ್​ ಟ್ರೈಲರ್​ ರಿಲೀಸ್​, ದೊಡ್ಡವರ ದಿರಿಸಿನ ಮೂಲಕ ಮನರಂಜನೆ ಉಣಬಡಿಸಿದ ಮಕ್ಕಳು
ಚೊಚ್ಚಲ ಮಕ್ಕಳ ಕಮರ್ಷಿಯಲ್​ ಚಿತ್ರ ಗಿರ್ಮಿಟ್​ ಟ್ರೈಲರ್​ ಬಿಡುಗಡೆ, ಮಕ್ಕಳನ್ನು ನಾಯಕ, ನಾಯಕಿಯನ್ನಾಗಿಸಿದ ಬಸ್ರೂರು
ನಿರೀಕ್ಷೆ ಮೂಡಿಸಿದ ಮಕ್ಕಳ ಕಮರ್ಷಿಯಲ್​ ಚಿತ್ರ ಗಿರ್ಮಿಟ್​ ಟ್ರೈಲರ್​
ದೊಡ್ಡವರ ಉಡುಪಿನಲ್ಲಿ ಮಿಂಚಿದ ಮಕ್ಕಳ ಕಮರ್ಷಿಯಲ್​ ಚಿತ್ರ ಗಿರ್ಮಿಟ್​ ಟ್ರೈಲರ್​ ಬಿಡುಗಡೆ

ವಾಣಿಜ್ಯ ದೃಷ್ಟಿಕೋನವನ್ನಿರಿಸಿಕೊಂಡ ಮಕ್ಕಳ ಚಿತ್ರವೊಂದು ಪ್ರೇಕ್ಷಕರಿಗೆ ಮನರಂಜನೆಯ ರಸದೂಟವನ್ನು ಉಣಬಡಿಸಲು ತೆರೆಗೆ ಬರಲು ಸಿದ್ಧವಾಗಿದೆ.
ಅದರ ಮೊದಲ ಪ್ರಯತ್ನವಾಗಿ ಭಾರತೀಯ ಚಿತ್ರರಂಗದಲ್ಲೇ ಮೊದಲ ಪ್ರಯತ್ನ ಎನ್ನಲಾದ ಮಕ್ಕಳೇ ಪ್ರಧಾನ ಪಾತ್ರವಾಗಿರುವ ಮಕ್ಕಳ ಕಮರ್ಷಿಯಲ್​ ಚಿತ್ರ ಗಿರ್ಮಿಟ್​ ಟ್ರೈಲರ್​ ಶನಿವಾರ, ಅ.26 ರಂದು ಬಿಡುಗಡೆಯಾಗಿದೆ.
ಶೀರ್ಷಿಕೆಯ ಮೂಲಕವೇ ಗಮನ ಸೆಳೆದಿರುವ ಗಿರ್ಮಿಟ್​ ಮುಂದಿನ ತಿಂಗಳು ನವೆಂಬರ್​ 8 ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ.

ಏನು ಹೇಳುತ್ತದೆ ಟ್ರೈಲರ್​?
ಚಿತ್ರದ ಟ್ರೈಲರ್​ ನಲ್ಲಿ ನಾಯಕ, ನಾಯಕಿಯಾಗಿರುವ ಮಕ್ಕಳು ಗಮನ ಸೆಳೆದಿದ್ದಾರೆ. ಎದುರಾಳಿಗಳ ಮುಂದೆ ಹೊಡೆದಾಡಲು ನಾಯಕ ಹೇಳುವ ಸಂಭಾಷಣೆಗಳು, ಪ್ರೇಮ ಸನ್ನಿವೇಶಗಳು, ಅದರಲ್ಲಿ ಬರುವ ವಿಭಿನ್ನ ಪಾತ್ರಗಳು, ಕೌಟುಂಬಿಕ ಕಲಹ, ನಾಯಕ, ನಾಯಕಿಯ ಮಾಸ್​ ಗೀತೆ ಹೀಗೆ ಒಂದು ಕಮರ್ಷಿಯಲ್​ ಚಿತ್ರದಲ್ಲಿರಬೇಕಾದ ಎಲ್ಲ ಅಂಶಗಳೂ ಟ್ರೈಲರ್​ ನಲ್ಲಿ ಕಾಣಸಿಗುತ್ತವೆ. ಚಿತ್ರದಲ್ಲಿ ಯಶ್​, ರಾಧಿಕಾ ಸೇರಿದಂತೆ ಹಿರಿಯ ಕಲಾವಿದರು ಮಕ್ಕಳ ಪ್ರಧಾನ ಪಾತ್ರಗಳಿಗೆ ಹಿನ್ನಲೆ ದನಿ ನೀಡಿದ್ದಾರೆ. ಇದು ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದು. ಕಮರ್ಷಿಯಲ್​ ಚಿತ್ರದ ಸೂತ್ರದ ಅಡಿಯಲ್ಲಿ ತಯಾರಾಗಿರುವ ಚಿತ್ರ ಟ್ರೈಲರ್​ ಮೂಲಕ ಗಮನ ಸೆಳೆದಿದೆ.
ರವಿ ಬಸ್ರೂರು ತಮ್ಮ ತಂಡದೊಂದಿಗೆ ಚಿತ್ರವನ್ನು ತಯಾರಿಸಿದ್ದಾರೆ. ಅಲ್ಲದೆ ಸಂಗೀತದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಚಿತ್ರದ ‘ಆರಂಭವೇ ಆನಂದವೇ’ ಎಂಬ ಲಿರಿಕಲ್ ವಿಡಿಯೋ ಗೀತೆ ಸೋಮವಾರ, ಅ.21 ರ ಸಂಜೆ 7 ಕ್ಕೆ ಬಿಡುಗಡೆಯಾಗಿತ್ತು. ಕಿನ್ನಾಳ ರಾಜ್ ಸಾಹಿತ್ಯ ಇದ್ದು ಸಂತೋಷ್ ವೆಂಕಿ ಗೀತೆಗೆ ಧ್ವನಿಯಾಗಿದ್ದಾರೆ.
ಚಿತ್ರದಲ್ಲಿ ಮಕ್ಕಳೇ ನಾಯಕ, ನಾಯಕಿ, ತಂದೆ, ತಾಯಿ, ಅಜ್ಜಿ, ಸ್ನೇಹಿತರು ಹೀಗೆ ಎಲ್ಲ ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಒಂದು ವಿಶಿಷ್ಟ ಪ್ರಯತ್ನವಾದ ಈ ಚಿತ್ರವನ್ನು ಮಕ್ಕಳ ಮೂಲಕವೇ ಚಿತ್ರಿಸಿ ತೆರೆಗೆ ತರಲಾಗುತ್ತಿದೆ. ಒಂದು ಕಮರ್ಷಿಯಲ್ ಚಿತ್ರದಲ್ಲಿ ಇರುವ ಅಂಶಗಳೆಲ್ಲವೂ ಇದರಲ್ಲಿದೆ. ನಾಯಕ, ನಾಯಕಿಯ ವಾಗ್ಯುದ್ಧಗಳು, ನಾಯಕನ ಖಡಕ್ ಡೈಲಾಗ್ ಗಳು, ನಾಯಕ, ನಾಯಕಿಯ ಪ್ರೇಮ ಸಲ್ಲಾಪಗಳು ಎಲ್ಲವೂ ಚಿತ್ರದಲ್ಲಿದೆ. ದೊಡ್ಡವರ ಪೋಷಾಕಿನಲ್ಲಿ ಕಾಣಿಸಿಕೊಂಡಿರುವ ಮಕ್ಕಳ ಪೋಸ್ಟರ್ ಮತ್ತು ಟೀಸರ್ ಗಮನ ಸೆಳೆದಿತ್ತು.
ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸ್ಟಾರ್ ನಟರು ಪ್ರಧಾನ ಪಾತ್ರಗಳಿಗೆ ಕಂಠದಾನ ನೀಡಿದ ಗಿರ್ಮಿಟ್ ಡಬ್ಬಿಂಗ್​ ಟ್ರೈಲರ್ ಕಳೆದ ಶನಿವಾರ, ಅ.19 ರಂದು ರಿಲೀಸ್ ಆಗಿತ್ತು. ರಾಕಿಂಗ್ ಸ್ಟಾರ್ ಯಶ್ ರಾಜ್ ಮತ್ತು ನಟಿ ರಾಧಿಕಾ ಪಂಡಿತ್ ರಶ್ಮಿ ಎಂಬ ಮಕ್ಕಳ ಪ್ರಧಾನ ಪಾತ್ರಗಳಿಗೆ ದನಿಯಾಗಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅರ್ಪಿಸುವ ಈ ಚಿತ್ರವು ಓಂಕಾರ್ ಮೂವೀಸ್ ಬ್ಯಾನರ್ ನಡಿ ನಿರ್ಮಾಣವಾಗಿದೆ. ಚಿತ್ರಕ್ಕೆ ಎನ್ ಎಸ್ ರಾಜ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸೂರಜ್ ಚೌಧರಿ ಮತ್ತು ನರೇನ್ ಚಂದ್ರ ಚೌಧರಿಯು ಸಹ ನಿರ್ಮಾಪಕರಾಗಿದ್ದಾರೆ.
ಪ್ರಮೋದ್ ಮರವಂತೆ, ಕಿನ್ನಲ್ ರಾಜ್, ಸಂದೀಪ್ ಶಿರಸಿ, ಸುಚನ್ ಶೆಟ್ಟಿ ಮತ್ತು ಮಂಜುನಾಥ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಅಶ್ಲೇಷ್ ರಾಜ್, ಶ್ಲಾಘಾ ಸಾಲಿಗ್ರಾಮಾ, ಆರಾಧ್ಯ ಶೆಟ್ಟಿ, ತನಿಶಾ ಕೋನಿ, ಜಯೇಂದ್ರ, ನಾಗರಾಜ್ ಜಪ್ತಿ, ಆದಿತ್ಯ ಕುಂದಾಪುರ ಮತ್ತು ಸಿಂಚನಾ ಕೋಟೇಶ್ವರ ಮೊದಲಾದ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಅವರ ತಂಡ ಭಿನ್ನ ಪ್ರಯತ್ನದ ಮೂಲಕ ಮಕ್ಕಳ ಕಮರ್ಷಿಯಲ್ ಚಿತ್ರ ಗಿರ್ಮಿಟ್ ನ್ನು ತಯಾರಿಸಿದ್ದಾರೆ. ಗಿರ್ಮಿಟ್​ ಟ್ರೈಲರ್​ ನಲ್ಲಿ ನಾಯಕ, ನಾಯಕಿಯಾಗಿ ಮಕ್ಕಳ ಪಾತ್ರವು ಗಮನ ಸೆಳೆದಿದ್ದು ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ.
ಚಿತ್ರವು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಏಕಕಲಾದಲ್ಲಿ ನವೆಂಬರ್​ 8 ರಂದು ವಿಶ್ವದಾದ್ಯಂತ ಬೆಳ್ಳಿ ಪರದೆಗೆ ಲಗ್ಗೆ ಇಡಲಿದೆ.

 

 

Spread the love
Leave A Reply

Your email address will not be published.

Flash News