ಸಂಬಂಧಿಗೇ ದೋಖಾ.. ಉದಯಗರುಡಾಚಾರ್ ವಿರುದ್ದ ಗಂಭೀರ ಆರೋಪ

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಬ್ಯೂರೋ)

 

ಚಿಕ್ಕಪೇಟೆ ಎಮ್ಮೆಲ್ಲೆ ಉದಯಗರುಡಾಚಾರ್
ಚಿಕ್ಕಪೇಟೆ ಎಮ್ಮೆಲ್ಲೆ ಉದಯಗರುಡಾಚಾರ್

ಬೆಂಗಳೂರು: ಚಿಕ್ಕಪೇಟೆಯ ಬಿಜೆಪಿ ಶಾಸಕ ಹಾಗೂ ಪ್ರತಿಷ್ಟಿತ ಗರುಡಾಮಾಲ್ ಮಾಲೀಕ ಉದಯ್ ಗರುಡಾಚಾರ್ ವಿರುದ್ದ ಸಂಬಂಧಿಗೇ ವಂಚಿಸಿದ ಗಂಭೀರ ಆರೋಪ ಕೇಳಿಬಂದಿದೆ..
ವ್ಯಾಪಾರದಲ್ಲಿ ಇಂತಿಷ್ಟು ಭಾಗ ಕೊಡೋದಾಗಿ ಒಪ್ಪಂದ ಮಾಡಿಕೊಂಡು ಒಪ್ಪಂದದ ನಿಯಮಗಳನ್ನು ಪಾಲಿಸದೆ ಎಲ್ಲವನ್ನು ತಾವೇ ಸ್ವಾಹ ಮಾಡುತ್ತಿದ್ದಾರೆನ್ನೋದು ಗರುಡಾಚಾರ್ ವಿರುದ್ಧ ಅವರ ಸಹೋದರ ಸಂಬಂಧಿ ಪ್ರಶಾಂತ್ ಎನ್ನೋರು ನೀಡಿರುವ ದೂರು. ಅಷ್ಟೇ ಅಲ್ಲ ನ್ಯಾಯ ಕೇಳಲು ಹೋದ್ರೆ ನನ್ನ ತಂದೆ ಗೊತ್ತಲ್ಲ ಬೆಂಗಳೂರಿನ ಮೊದಲ ಪೊಲೀಸ್ ಕಮಿಷನರ್ ನಾನ್ ಗೊತ್ತಲ್ಲ ಎಮ್ಮೆಲ್ಲೆ..ನನ್ ಲೆವಲ್ ಗೊತ್ತಲ್ಲ ಅಮಿತ್ ಶಾ ಹಾಗೂ ಮೋದಿ.ಮನಸು ಮಾಡಿದ್ರೆ ಏನ್ ಬೇಕಾದ್ರು ಮಾಡ್ಬಲ್ಲೆ ಎಂದು ಜೀಚ ಬೆದರಿಕೆಯನ್ನೂ ಹಾಕಿದ್ದಾರೆನ್ನೋದು ಪ್ರಶಾಂತ್ ಅವರ ಮುಂದುವರೆದ ಆರೋಪ.
ಮೆವರಿಕ್ ಹೋಲ್ಡಿಂಗ್ ಅಂಡ್ ಇನ್ವೆಸ್ಟ್ ಮೆಂಟ್ ಪ್ರೈ.ಲಿ ಕಂಪನಿಯಲ್ಲಿ ಹಣ ಜಮೆ ಬಗ್ಗೆ ದಾಖಲೆ ಸಂಗ್ರಹಿಸಿ ಅದರ ಬಗ್ಗೆ ಮಾಹಿತಿ ಪಡೆಯಲು  ಮುಂಬೈಗೆ ಹೋದಾಗ ಗರುಡಾಚಾರ್ ಜೀವಬೆದರಿಕೆ ಹಾಕಿದರೆಂದು ಆರೋಪಿಸಿರುವ ಪ್ರಶಾಂತ್, ಕೋರ್ಟ್ ಮೆಟ್ಟಿಲೇರಿದ್ದಾರೆ ಕೂಡ. ಕೋರ್ಟ್ ಸೂಚನೆ ಮೇರೆಗೆ ಪಿಸಿಆರ್ ದಾಖಲಿಸಿಕೊಂಡಿರುವ ಜೆಪಿ ನಗರ ಪೊಲೀಸ್ರು ಗರುಡಾಚಾರ್ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.

ಎಮ್ಮೆಲ್ಲೆ ವಿರುದ್ಧ ದೂರು ನೀಡಿರುವ ಸಂಬಂಧಿ ಪ್ರಶಾಂತ್
ಎಮ್ಮೆಲ್ಲೆ ವಿರುದ್ಧ ದೂರು ನೀಡಿರುವ ಸಂಬಂಧಿ ಪ್ರಶಾಂತ್

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಉದರಯಗರುಡಾಚಾರ್, ನ್ಯೂಸ್ ಚಾನೆಲ್ ನೋಡಿ ನಂಗೆ ವಿಚಾರ ಗೊತ್ತಾಯ್ತು.ಫಸ್ಟ್ ಅಂಡ್ ಫಾರ್ ಮೋಸ್ಟ್ ಆತ ನನ್ನ ತಮ್ಮ ಅಲ್ಲ, ಸೋದರತ್ತೆಯ ಮಗ.10 ವರ್ಷಗಳಿಂದ ನನಗೂ ಆತನಿಗೂ ಸಂಪರ್ಕವೇ ಇರಲಿಲ್ಲ. 25 ವರ್ಷಗಳ ಹಿಂದೆ ಲಕ್ಷ್ಮಿ ಲಾಕೆಟ್ ಕೊಟ್ಟಿದ್ದು ನೆನಪಿದ್ಯಾ, ಅದ್ರಿಂದಲೇ ನಿನಗೆ ಇಷ್ಟು ಲಕ್ಷ್ಮಿ ಒಲಿದಿದ್ದು, ಅದನ್ನು ಮರಳಿಸು ಎಂದು ಕೇಳಿದ್ದ.ನನಗೆ ಇದ್ಯಾವೂ ನೆನಪೇ ಇಲ್ಲ ಎಂದಿದ್ದೆ.ಆದ್ರೆ ಇದನ್ನೇ ಪದೇ ಪದೇ ಹೇಳಿದಾಗ ಮನೆಗೆ ಬಾ, ನೀನೇ ಹುಡುಕು ಎಂದಿದ್ದೆ.ಆತ ಬರಲಿಲ್ಲ.ಆಮೇಲೆ ನಾನು ಆತನ ಅಕ್ಕ ಹೇಮಾಗೆ ಕರೆ ಮಾಡಿ ಈತನ ವಿಚಾರ ತಿಳಿದುಕೊಂಡೆ ಆಗ ಆತ ಗಾಂಜಾ ಸೇದ್ತಾನೆ. ಬ್ಯೂಗಲ್ ರಾಕ್ ಸೇರಿದಂತೆ ಅನೇಕ ಕಡೆ ಆತ ಗಾಂಜಾ ಸೇದ್ತಾನೆ ಅಂತ ಗೊತ್ತಾಯ್ತು.ಅದೇ ಮತ್ತಿನಲ್ಲಿ ಇಂತದ್ದೊಂದು ಆರೋಪ ಮಾಡಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಉದಯ ಗರುಡಾಚಾರ್ ಮಾಲೀಕತ್ವದ ಪ್ರತಿಷ್ಟಿತ ಗರುಡಾಮಾಲ್
ಉದಯ ಗರುಡಾಚಾರ್ ಮಾಲೀಕತ್ವದ ಪ್ರತಿಷ್ಟಿತ ಗರುಡಾಮಾಲ್

ಪ್ರಶಾಂತ್ ನನಗೆ ಬ್ಲಾಕ್ ಮೇಲ್ ಮಾಡಿದ್ದಾನೆ.ಈತನ ಹಿನ್ನೆಲೆ ಪರೀಕ್ಷಿಸಬೇಕು, ಆತನಿಗೆ ಕೆಲಸವಿಲ್ಲ… ಹೆಂಡತಿಯ ಸಂಪಾದನೆಯಲ್ಲಿ ಆತ ಬದುಕುತ್ತಿದ್ದಾನೆ. ಹೀಗಿರುವಾಗ ನನ್ನ ವ್ಯವಹಾರಕ್ಕೆ ಹೂಡಿಕೆ ಮಾಡುವ ಸಾಮರ್ಥ್ಯವೇ ಇಲ್ಲ ಎಂದಿದ್ದಾರೆ.ನನ್ನ ತೇಜೋವಧೆಗೆ ನಡೆದಿರುವ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ.ಪೋಲೀಸರು, ಸಿಸಿಬಿಗೆ ದೂರು ನೀಡಲು ನಿರ್ಧರಿಸಿದ್ದೇನೆ. ನನ್ನ ಜೊತೆ ಹೂಡಿಕೆ ಮಾಡಿದ್ದೀನಿ ಎನ್ನುವ ಆತ ದಾಖಲೆ ನೀಡಲಿ ಯಾರಾದ್ರೂ ಹೆಸರು ಮಾಡಿದ್ದಾರೆ, ಪರಿಶ್ರಮದಿಂದ ಮೇಲೆ ಬಂದಿದ್ದಾರೆ ಅಂದ್ರೆ ಹೀಗೆ ಮಾಡೋರು ಇರ್ತಾರೆ. ಈಗ ಕಾನೂನು ಬದ್ಧವಾಗಿ ಆತನ ವಿರುದ್ಧ ನಾನು ದೂರು ನೀಡಲಿದ್ದೇನೆ ಎಂದಿದ್ದಾರೆ.ಅದೇನೇ ಇರ್ಲಿ,ಪ್ರಶಾಂತ್ ನೀಡಿರುವ ದೂರು ಕೂಡ ಗಂಭೀರವಾಗಿದ್ದು ಈ ಬಗ್ಗೆ ಪೊಲೀಸ್ರು ಯಾವ್ದೇ ಒತ್ತಡಕ್ಕೆ ಮಣಿಯದೆ ಕೆಲಸ ಮಾಡಿದ್ದೇ ಆದಲ್ಲಿ ಸತ್ಯಾಂಶ ಹೊರಬರುತ್ತೆ. 

 

 

ತಮ್ಮ ಮೇಲೆ ಕೇಳಿಬಂದಿರುವ ಅರೋಪದ ಬಗ್ಗೆ ಎಮ್ಮೆಲ್ಲೆ  ಉದಯ ಗರುಡಾಚಾರ್ ಅವರೇ ಮಾತ್ನಾಡಿದ್ದಾರೆ..ನೋಡಿ..ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ..

Spread the love
Leave A Reply

Your email address will not be published.

Flash News