ಅನರ್ಹರಾದ್ರೂ “ಅಂದಾದರ್ಬಾರ್” ನಡುಸ್ತಿದ್ದಾರಾ ಮಾಜಿ ಎಮ್ಮೆಲ್ಲೆ ಮುನಿರತ್ನ!?

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಬ್ಯೂರೋ)

ಬೆಂಗಳೂರು: ಅಧಿಕಾರ ಕಳ್ಕೊಂಡ್ರೂ ಬೆಂಗಳೂರಿನ ರಾಜರಾಜೇಶ್ವರಿ ನಗರ  ಮಾಜಿ ಶಾಸಕ ಮುನಿರತ್ನ ಅವರ ಅಂದಾದರ್ಬಾರ್ ಮಾತ್ರ ಇನ್ನೂ ನಿಂತಿಲ್ಲ. ಅಧಿಕಾರಿಗಳನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಕ್ಷೇತ್ರದಲ್ಲಿ ನಡೆಯೋ ಕಾಮಗಾರಿಗಳ ಮೇಲೆ ಹಿಡಿತ ಸಾಧಿಸಿರುವ ಮುನಿರತ್ನ ಈ ಅವಸರದಲ್ಲಿ ಸುಪ್ರಿಂಕೋರ್ಟ್ ನ ನಿಯಮಗಳನ್ನೇ ಗಾಳಿಗೆ ತೂರುತ್ತಿದ್ದಾರೆ.ಇದೇನಾದ್ರೂ ಸಾಬೀತಾದ್ರೆ ಮತ್ತೊಂದು ಕಾನೂನಾತ್ಮಕ ಸಂಕಷ್ಟಕ್ಕೆ ಸಿಲುಕೋದ್ರಲ್ಲಿ ಅನುಮಾನವೇ ಬೇಡ..ಅಂದ್ಹಾಗೆ ಅವರಿಂದಾಗಿರುವ ಗಂಭೀರ ಲೋಪ ಮೈದಾನದಲ್ಲಿ ಮಾರುಕಟ್ಟೆ ಮಳಿಗೆ ಸ್ಥಾಪನೆಗೆ ಬೆಂಬಲ ಹಾಗೂ ಕುಮ್ಮಕ್ಕು.ಇದರ ಕಂಪ್ಲೀಟ್ ಅಂಡ್ ಡೀಟೈಲ್ ಸ್ಟೋರಿ ನಿಮ್ಮ  ಕನ್ನಡ ಫ್ಲಾಶ್ ನ್ಯೂಸ್ ನಲ್ಲಿ.

6 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಮಾರುಕಟ್ಟೆ ನಿರ್ಮಾಣ ಕಾಮಗಾರಿ
6 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಮಾರುಕಟ್ಟೆ ನಿರ್ಮಾಣ ಕಾಮಗಾರಿ

ಜೆ.ಪಿ ಪಾರ್ಕ್ ವಾರ್ಡ್ ಮುನಿರತ್ನ ಪ್ರತಿನಿಧಿಸುತ್ತಿದ್ದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಬರುತ್ತೆ.ಇನ್ ಫ್ಯಾಕ್ಟ್ ಈ ಪಾರ್ಕ್ ನ ನಿರ್ಮಾಣದ ಕಾಮಗಾರಿಯನ್ನು ಪಡೆದಿದ್ದವರು ಕೂಡ ಅವ್ರೇ(ಶಾಸಕ,ಕಾರ್ಪೊರೇಟರ್ ಆಗುವ ಮುನ್ನ ಮುನಿರತ್ನ ಗುತ್ತಿಗೆದಾರರಾಗಿದ್ರು). ದುರಂತ ಹಾಗೂ ವಿಪರ್ಯಾಸ ಎಂದ್ರೆ ಆ ಪಾರ್ಕನ್ನು ಹಾಳು ಮಾಡಿ,ಗುಡಿಸಿ ಗುಂಡಾಂತರ ಮಾಡಿರುವ ಕುಖ್ಯಾತಿಯ ಆರೋಪವೂ ಇದೇ ಮುನಿರತ್ನ ಅವರ ಮೇಲಿದೆ.ಅದೆಲ್ಲಾ ಒತ್ತಟ್ಟಿಗಿರಲಿ ಬಿಡಿ,ಈಗ ಅದೇ ಪಾರ್ಕ್ ಪಕ್ಕದಲ್ಲಿರುವ ಆಟದ ಮೈದಾನ ಕಬಳಿಕೆ ಹಿಂದೆಯೂ ಇದೇ ಮುನಿರತ್ನ ಅವರ ಬೆಂಬಲ ಹಾಗೂ ಕುಮ್ಮಕ್ಕಿನ ಆರೋಪ ಕೇಳಿಬಂದಿದೆ.

ಏನದು ಆರೋಪ:ಜೆಪಿ ಪಾರ್ಕ್ ವಾರ್ಡ್ ಗೆ ಇರುವ ಏಕೈಕ ಹಾಗೂ ಬೃಹತ್ ಮೈದಾನದಲ್ಲಿ ಕಳೆದ ಕೆಲ ತಿಂಗಳಿಂದಲೂ ಮಾರುಕಟ್ಟೆ ನಿರ್ಮಾಣದ ಕಾಮಗಾರಿ ನಡೀತಿದೆ.150ಕ್ಕೂ ಹೆಚ್ಚು ಮಳಿಗೆಗಳ ಸಂಕೀರ್ಣವದು.ಆದ್ರೆ ದುರಂತ ಎಂದ್ರೆ ಮೈದಾನ ಅಥವಾ ಪಾರ್ಕ್ ಗಳನ್ನು ಯಾವ್ದೇ ಕಾರಣಕ್ಕೂ ಒತ್ತುವರಿ ಮಾಡೋದು,ಅಲ್ಲಿ ಯಾವ್ದೇ ನಿರ್ಮಾಣ ಕಾರ್ಯ ನಡೆಸುವಂತಿಲ್ಲ ಅದು ಅಕ್ಷಮ್ಯ ಎನ್ನುತ್ತೆ ಕೋರ್ಟ್.ಅದು ಗೊತ್ತಿದ್ರೂ ಕೋರ್ಟ್ ಆದೇಶ ಧಿಕ್ಕರಿಸಿ,ಅದ್ಯಾವ ಪ್ರಯೋಜನಕ್ಕೋ ಗೊತ್ತಿಲ್ಲ, ಕಾಂಟ್ರ್ಯಾಕ್ಟರ್ ವೊಬ್ಬರ ಬೆನ್ನಿಗೆ ನಿಂತು ಅವರ ಕೆಲಸಕ್ಕೆ ತಾನೇ ಕುಮ್ಮಕ್ಕು ನೀಡುತ್ತಿದ್ದಾರೆನ್ನುವ ನೇರ ಆರೋಪ ಮಾಡ್ತಿದ್ದಾರೆ ಜೆಪಿ ಪಾರ್ಕ ವಾರ್ಡ್ ಕಾರ್ಪೊರೇಟರ್ ಮಮತಾ ವಾಸುದೇವ್.

ಕಾಮಗಾರಿಗೆ ನಿಯಮಬಾಹೀರವಾಗಿ ನೀಡಿರುವ ವರ್ಕ್ ಆರ್ಡರ್.
ಕಾಮಗಾರಿಗೆ ನಿಯಮಬಾಹೀರವಾಗಿ ನೀಡಿರುವ ವರ್ಕ್ ಆರ್ಡರ್.

ಸುಮಾರು 6 ಕೋಟಿ ವೆಚ್ಚದ ಮಾರುಕಟ್ಟೆ ನಿರ್ಮಾಣದ ಬಗ್ಗೆ ಆ ಭಾಗದ ಕಾರ್ಪೊರೇಟರ್ ಗೇನೆ ಗೊತ್ತಿಲ್ಲವಂತೆ.ಕಾಂಟ್ರ್ಯಾಕ್ಟರ್ ಜತೆ ಶಾಮೀಲಾಗಿ ಅವರಿಂದ ಪ್ರಯೋಜನ ಪಡೆದು ಅಕ್ರಮಕ್ಕೆ ಸಾಥ್ ಕೊಟ್ಟಿದ್ದಾರೆ.ಮೈದಾನದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಅವಕಾಶ ಕೊಡ್ಬಾರ್ದು ಎನ್ನುವ ಮಾಹಿತಿ ಗೊತ್ತಿದ್ದೂ ಜಂಟಿ ಆಯುಕ್ತ ಬಾಲಶೇಖರ್ ಆಗ್ಲಿ,ಎಕ್ಸಿಕ್ಯೂಟಿವ್ ಎಂಜಿನಿಯರ್ ವಿಜಯ್ ಕುಮಾರ್ ಅವರಾಗ್ಲಿ ಇದರ ವಿರುದ್ದ ಸೊಲ್ಲೆತ್ತಲು ಸಾಧ್ಯವಾಗ್ತಿಲ್ಲ ಎನ್ನೋದು ಮಮತಾ ಅವ್ರ ಆರೋಪ.

ಕಣ್ಣೆದುರಿಗೆ ಅನ್ಯಾಯವಾದ್ರೂ ಅದನ್ನು ಪ್ರಶ್ನಿಸದಂಥ ಅಸಹಾಯಕ ಪರಿಸ್ತಿತಿ ನಿರ್ಮಿಸಿದ್ದಾರಂತೆ ಮುನಿರತ್ನ.ಅವರ ತಾಳಕ್ಕೆ ತಕ್ಕಂತೆ ಕುಣಿಯದಿದ್ದರೆ ಅದರ ಪರಿಣಾಮ ಸಾಕಷ್ಟು ಗಂಭೀರವಾಗುತ್ತೆನ್ನುವ ಆತಂಕದಲ್ಲಿ ಮುನಿರತ್ನ ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸ್ಬೇಕಾದ ಸ್ತಿತಿ ನಿರ್ಮಾಣವಾಗಿದೆ ಎನ್ನೋದಾದ್ರೆ ಆರ್ ಆರ್ ನಗರದ ಚಿತ್ರಣ ಹೇಗಿರ್ಬೋದಲ್ವಾ ಎಂದು ಆಶ್ಚರ್ಯ ಜತೆಗೆ ಆತಂಕವೂ ಉಂಟಾಗುತ್ತೆ.

ಅಧಿಕಾರಿಗಳನ್ನು ಈ ಬಗ್ಗೆ ಕೇಳಿದ್ರೆ ಮಾಜಿ ಶಾಸಕರ ಬಗ್ಗೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸುತ್ತಲೇ,ಇದರ ಬಗ್ಗೆ ಕ್ರಮ ಕೈಗೊಳ್ಳಲು ಹೋದ್ರೆ ನಮ್ಮ ವಿರುದ್ದ ತನಿಖೆ ಶುರುವಾಗುತ್ತೆ.ನಮ್ಮ ವಿರುದ್ದ ಸೇಡಿನ ಕ್ರಮ ಅನುಸರಿಸುತ್ತಾರೆ.ಹಾಗಾಗಿ ಸುಮ್ಮನಿದ್ದೇವೆ.ಆದ್ರೂ ಕಾನೂನು ವ್ಯಾಪ್ತಿಯಲ್ಲಿ ಕೆಲಸ ನಿಲ್ಲಿಸಲು ನೋಟಿಸ್ ಸರ್ವ್ ಮಾಡಿದ್ದೇವೆ ಎನ್ನುತ್ತಾರೆ.ಆದ್ರೆ ಕೆಲಸ ಮುಂದುವರೆದಿದೆಯಲ್ರಿ ಎಂದು ಪ್ರಶ್ನಿಸಿದ್ರೆ ನಮ್ ಕೆಲಸ ನಾವ್ ಮಾಡಿದ್ದೇವೆ ಸಾರ್..ಮುಂದಿನದೆಲ್ಲಾ ಮುನಿರತ್ನ ಅವ್ರನ್ನು ಕೇಳ್ಬೇಕು ಎಂದುತ್ತರಿಸುತ್ತಾರೆ ಎಕ್ಸಿಕ್ಯೂಟಿವ್ ಎಂಜಿನಿಯರ್ ವಿಜಯಕುಮಾರ್.

ಅಕ್ತಮ ನಡೀತಿದ್ರೂ ಕೈ ಕಟ್ಟಿ ಕೂತಿರುವ ಬಿಬಿಎಂಪಿ ಅಧಿಕಾರಿಗಳು
ಅಕ್ರಮ ನಡೀತಿದ್ರೂ ಕೈ ಕಟ್ಟಿ ಕೂತಿರುವ ಬಿಬಿಎಂಪಿ ಅಧಿಕಾರಿಗಳು

ವಾರ್ಡ್ ನ ಮಕ್ಕಳಿಗೆ ಆಟವಾಡ್ಲಿಕ್ಕೆ ಇರುವುದೊಂದೇ ಮೈದಾನ,ಅದನ್ನೂ ಕಬಳಿಸಲಾಗ್ತಿದೆ ಎನ್ನುವ ಬೇಸರ-ಆಕ್ರೋಶ ಸ್ಥಳೀಯರಲ್ಲಿದೆ.ಹಾಗಾಗಿ ಕಾನೂನಿನ ಆಸರೆಯನ್ನೇ ಪಡೆದು ಇದನ್ನು ನಿಲ್ಲಿಸಲು ಮುಂದಾಗಿದ್ದಾರೆ.ಇವರ ನೆರವಿಗೆ ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ಮುಂದೆ ಬಂದಿದೆ.ಆದ್ರೆ ಅದೇನೇ ಆಗ್ಲಿ,ಈ ಕ್ಷೇತ್ರದ ಶಾಸಕರಾಗಿದ್ದ ಮುನಿರತ್ನ ತಮ್ಮ ಕ್ಷೇತ್ರದಲ್ಲೇ ಇಂತದ್ದೊಂದು ಅಕ್ರಮ ನಡೀತಿದ್ರೂ ಅದನ್ನು ನಿಲ್ಲಿಸೋದನ್ನು ಬಿಟ್ಟು ಅದ್ಯಾವ ಆಸೆಗೆ ಕಟ್ಟುಬಿದ್ದು ಕಾಂಟ್ರ್ಯಾಕ್ಟರ್ ಬೆನ್ನಿಗೆ ನಿಂತು,ಅದಕ್ಕಾಗಿ ಕಾರ್ಪೊರೇಟರ್ ಹಾಗೂ ಅಧಿಕಾರಿಗಳನ್ನು ಮೂಲೆ ಗುಂಪು ಮಾಡಿ ಸರ್ವಾಧಿಕಾರಿಯಾಗಿ ಮೆರೆಯುತ್ತಿರುವುದು ಎಷ್ಟು ಸರಿ. ಅನರ್ಹರಾಗಿ ಒಂದ್ರೀತಿ ಶಿಕ್ಷೆ ಅನುಭವಿಸುತ್ತಿರುವ ಮುನಿರತ್ನ ಇದೇ ರೀತಿಯ ಅಕ್ರಮಕ್ಕೆ ಪರೋಕ್ಷವಾಗಿ ಬೆಂಬಲ ಕೊಡ್ತಾ ಹೋದ್ರೆ ಬೈ ಎಲೆಕ್ಷನ್ ಅವರ ಆಟಾಟೋಪಗಳಿಗೆ ಸೂಕ್ತ ಉತ್ತರ ಕೊಡೋದ್ರಲ್ಲಿ ಡೌಟೇ ಇಲ್ವೇನೋ ಅನ್ನುತ್ತಿವೆ ಕ್ಷೇತ್ರದ ಮೂಲಗಳು.

 

Spread the love
Leave A Reply

Your email address will not be published.

Flash News