ಇವ್ರೇನ್ ಮನುಷ್ಯರೋ..ಹೊಟ್ಟೆಗೇನ್ ತಿನ್ತಾರೋ..

0

ಕನ್ನಡ ಫ್ಲಾಶ್ ನ್ಯೂಸ್.ಕಾಂ ಬ್ಯೂರೋ

ಬೆಂಗಳೂರು: ವಿಕೃತಿಗೆ ಮತ್ತೊಂದು ಹೆಸ್ರೇ ಮನುಷ್ಯ..ಇದಕ್ಕೆ ಇವನಷ್ಟು ಕೆಟ್ಟ ಉದಾಹರಣೆ ಮತ್ತೊಂದಿರ್ಲಿಕ್ಕೂ ಸಾಧ್ಯವಿಲ್ಲ..ಅಂತದ್ದೇ ವಿಕೃತಿಯನ್ನು ದೀಪಾವಳಿ ವೇಳೆಯೂ ಮೆರೆದಿದ್ದಾನೆ.ಕೆಲವು ಕಿಡಿಗೇಡಿಗಳು ಎಂಥಾ ಹೀನಾತೀಕೃತ್ಯ ಎಸಗಿದ್ದಾರೆ ಎಂದ್ರೆ ಪಟಾಕಿ ಸದ್ದಿಗೆ ಪ್ರಾಣವನ್ನೇ ಕಳೆದುಕೊಳ್ಳುವಷ್ಟು ಸೂಕ್ಷ್ಮ ಹೃದಯದ ನಾಯಿಗಳ ಮೇಲೆ ಗಧಾ ಪ್ರಹಾರ ಎಸಗಿದ್ದಾರೆ.

ಬೀದಿ ನಾಯಿಯೊಂದನ್ನು ಬಲವಂತವಾಗಿ ಹಿಡಿದುಕೊಂಡು ಅದರ ಬಾಲಕ್ಕೆ ಪಟಾಕಿಯನ್ನು ಸಿಕ್ಕಿಸಿ ಬೆಂಕಿ ಹಚ್ಚಿದ್ದಾರೆ.ಆನಂತರ ಅದಕ್ಕೆ ಬೆಂಕಿ ಹಚ್ಚಿದ್ದಾರೆ.ಪಾಪ ಆ ನಿಷ್ಪಾಪಿ ಜೀವ ಆ ಸದ್ದಿಗೆ ದಿಕ್ಕಾಪಾಲಾಗಿ ಓಡಲಾರಂಭಿಸಿದೆ.ನಾಯಿಯ ಸಂಕಟ-ಪೀಕಲಾಟ ಕಂಡು ಗಹಗಹಿಸಿ ನಗುವ ಮೂಲಕ ವಿಕೃತ ಮನರಂಜನೆ ಪಡೆದಿದ್ದಾರೆ.ನಾಯಿಗಳು ದೀಪಾವಳಿ ವೇಳೆ ಆತಂಕದಲ್ಲೇ ಬದುಕುವ ಸನ್ನಿವೇಶ ಇದೆ.

ಪಟಾಕಿ ಸದ್ದಿಗೆ ಅದೆಷ್ಟೋ ನಾಯಿಗಳು ಹೃದಯಾಘಾತದಿಂದ ಸಾವನ್ನಪ್ಪುತ್ತವೆ.ಅವೆಷ್ಟೋ ಕಿವುಡಾಗುತ್ತವೆ.ಮನುಷ್ಯರಂತೆ ನಾಯಿಗಳದ್ದು ಜೀವ ಅಲ್ವೇ..ಈ ಮನುಷ್ಯಸಹಜ ಸೂಕ್ಷ್ಮ ಗೊತ್ತಿದ್ದರೆ ಅವ್ರು ಹೀಗೆ ಮಾಡುತ್ತಿದ್ದರೇ..ಇಂಥಾ ಪ್ರಕರಣಗಳನ್ನು ನಮ್ಮ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳೋದೇ ಇಲ್ಲ..

ಅಂದ್ಹಾಗೆ ಈ ವಿಕೃತಿ ಮೆರೆದಿರೋರನ್ನು ಪತ್ತೆ ಹಚ್ಚೋದು ಅವರಿಗೆ ಕಷ್ಟವೂ ಅಲ್ಲ..ಕೃತ್ಯ ನಡೆಯುವ ವೇಳೆ ಅಲ್ಲಿದ್ದ ಬೈಕ್ ಕ್ರಮ ಸಂಖ್ಯೆ (ಕೆ.ಎ 14 ಇ-ಟಿ-0510) ಯ ಮಾಲೀಕನನ್ನು ಬೆನ್ನು ಹತ್ತಿದ್ರೂ ಸಾಕು ಯಾರು ಈ ಕಿಡಿಗೇಡಿ ಕೃತ್ಯ ಮಾಡಿದ್ದೆನ್ನುವುದು ಪಕ್ಕಾ ಆಗುತ್ತೆ.ಹಾಗೆ ಸಿಕ್ಕೋರನ್ನು ಶಿಕ್ಷಿಸದೆ ಮಾತ್ರ ಬಿಡಬಾರದು…

 

Spread the love
Leave A Reply

Your email address will not be published.

Flash News