ಡಿಕೆಶಿ ಭೇಟಿಗೆ “ಕೈ” ಮುಖಂಡರಲ್ಲೇ ಪೈಪೋಟಿ.

0

ಬೆಂಗಳೂರು:ಜೈಲಿನಿಂದ ಬಿಡುಗಡೆಯಾಗಿ ಬಂದ್ಮೇಲೆ ಡಿ.ಕೆ.ಶಿವಕುಮಾರ್ ಅವರ ಲಕ್ ಚೇಂಜ್ ಆದಂತಾಗಿದೆ.ಮಾಸ್ ಲೀಡರ್ ಆಗಿ ಬೆಳೆದಿರುವ ಡಿಕೆಶಿಯನ್ನು ಪಕ್ಷದ ಮುಖಂಡರೇ ಮುಂದಿನ ಸಿಎಂ ಅಭ್ಯರ್ಥಿ ಎಂದು ಒಪ್ಪಿಕೊಂಡಂತಾಗಿದೆ ಎಂದೆನಿಸುತ್ತೆ.

ಮಾಜಿ ಸಚಿವ ಎಚ್.ಕೆ ಪಾಟೀಲ್ ಜೊತೆ ಡಿಕೆಶಿ
ಮಾಜಿ ಸಚಿವ ಎಚ್.ಕೆ ಪಾಟೀಲ್ ಜೊತೆ ಡಿಕೆಶಿ ಚರ್ಚೆ
ಮಾಜಿ ಸಚಿವೆ ಮಾರ್ಗರೇಟ್ ಆಳ್ವ,ರಾಮಲಿಂಗಾರೆಡ್ಡಿ ಜತೆ ಸಮಾಲೋಚನೆ
ಮಾಜಿ ಸಚಿವೆ ಮಾರ್ಗರೇಟ್ ಆಳ್ವ,ರಾಮಲಿಂಗಾರೆಡ್ಡಿ ಜತೆ ಸಮಾಲೋಚನೆ

ಏಕೆಂದ್ರೆ ಡಿಕೆಶಿ ಅವರನ್ನು ಭೇಟಿಯಾಗಲು ಆ ಪರಿ ಮುಖಂಡರು ಪೈಪೋಟಿ ಮಾಡ್ಕೊಂಡು ಅವರ ಸದಾಶಿವನಗರದಲ್ಲಿರುವ ಮನೆಗೆ ಆಗಮಿಸುತ್ತಿದ್ದಾರೆ.ಡಿಕೆಶಿ ಅವರನ್ನು ಮನೆಗೆ ಬಂದು ಭೇಟಿಯಾಗುತ್ತಿರುವ ಮುಖಂಡರು ಹೇಳ್ತಿರೋದು ಒಂದೇ ಮಾತು ಧೈರ್ಯಗುಂದಬೇಡಿ ಸಾರ್..ನಿಮ್ಗೆ ಮುಂದೆ ಒಳ್ಳೆಯ ಫ್ಯೂಚರ್ ಇದೆ ಎಂದು.

ಇದನ್ನು ಕೇಳಿ ಉಬ್ಬೋಗದಿರಲು ನಿರ್ಧರಿಸಿರುವ ಡಿಕೆಶಿ ಎಲ್ಲವನ್ನು ಸ್ಥಿತಪ್ರಜ್ಞರಾಗಿಯೇ ಕೇಳಿಸಿಕೊಂಡು ಸುಮ್ಮನಿದ್ದಾರೆ.ತಮ್ಮ ಮನೆಗೆ ಬರುವ ಎಲ್ಲಾ ಮುಖಂಡರನ್ನು ಪ್ರೀತಿ ವಿಶ್ವಾಸದಿಂದಲೇ ಮಾತ್ನಾಡಿ ಕಳುಹಿಸುತ್ತಿದ್ದಾರೆ.ಇವತ್ತು ಕೂಡ ಡಿಕೆಶಿ ಮನೆಗೆ ಮಾಜಿ ಸಚಿವರಾದ ಮಾರ್ಗರೇಟ್ ಆಳ್ವಾ, ರಾಣಿ ಸತೀಶ್.ಮೋಟಮ್ಮ,.ರಾಮಲಿಂಗಾರೆಡ್ಡಿ, ಎಚ್ ಕೆ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಆಗಮಿಸಿ ಡಿಕೆಶಿಗೆ ಸಾಂತ್ವನ-ಸಮಾಧಾನ ಹೇಳಿ ಧೈರ್ಯ ಹೇಳಿ ಹೋಗಿದ್ದಾರೆ.

ಡಿಕೆಶಿ ಜತೆ ಮಾಜಿ ಸಚಿವ ರಾಮಲಿಂಗಾರೆಡ್ಡಿ
ಡಿಕೆಶಿ ಜತೆ ಮಾಜಿ ಸಚಿವ ರಾಮಲಿಂಗಾರೆಡ್ಡಿ
ಡಿಕೆಶಿ ಅಭಿನಂದಿಸಿದ ಮಾಜಿ ಸಚಿವೆ ರಾಣಿ ಸತೀಶ್
ಡಿಕೆಶಿ ಅಭಿನಂದಿಸಿದ  ರಾಣಿ ಸತೀಶ್
ಮಾಜಿ ಸಚಿವೆ ಮೋಟಮ್ಮ ಜತೆ ಡಿಕೆಶಿ
ಮಾಜಿ ಸಚಿವೆ ಮೋಟಮ್ಮ ಜತೆ ಡಿಕೆಶಿ
Spread the love
Leave A Reply

Your email address will not be published.

Flash News