“ಶತಕ”ದ ಸಂಭ್ರಮವಿರಬೇಕಾದ ಪಕ್ಷದಲ್ಲಿ “ಸೂತಕ”…

0

ಕನ್ನಡ ಫ್ಲಾಶ್ ನ್ಯೂಸ್.ಕಾಂ ಪೊಲಿಟಿಕಲ್ ಬ್ಯೂರೋ ಬೆಂಗಳೂರು: ಇನ್ನೆನು ಎರಡ್ಮೂರ್ ದಿನ ಕಳುದ್ರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಬರೋಬ್ಬರಿ 100 ದಿನವಾಗುತ್ತೆ.ಆದ್ರೆ ಅದನ್ನು ಸಂಭ್ರಮಿಸುವ ಮನಸ್ತಿತಿಯ ಲ್ಲಾಗ್ಲಿ.. ಸಿದ್ಧತೆಯಲ್ಲಾಗ್ಲಿ.. ಬಿಜೆಪಿ ಇಲ್ಲ.100 ದಿನ ಎಂದ್ರೆ ಯಾರಿಗೆ ಆಗ್ಲಿ ಅದು ಸಂಭ್ರಮಿಸ್ಲಿಕ್ಕೆ ಮಹತ್ವದ ಕಾರಣವಾಗುತ್ತೆ.ಆದ್ರೆ ಬಿಜೆಪಿ ಮಟ್ಟಿಗೆ  ಅಂಥದ್ದೊಂದು ವಾತಾವರಣ ಸಿಎಂ ಯಡಿಯೂರಪ್ಪ ಅವರಲ್ಲಾಗ್ಲಿ,ಪಕ್ಷದಲ್ಲಾಗ್ಲಿ ಇಲ್ಲ ಎನ್ನೋದು ವಾಸ್ತವ.

ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳಾದ್ರೂ ಪಕ್ಷದಲ್ಲಿ ಅಂತದ್ದೊಂದು ಸಂಭ್ರಮ ಇಲ್ಲದಿರೋದಕ್ಕೆ ಕಾರಣ ಇನ್ನೂ ಮುಂದುವರೆದಿರುವ ಗೊಂದಲ.ಹೈಕಮಾಂಡ್ ಹಾಗೂ ಮುಖಂಡರ ನಡುವೆ ಯಾವುದರಲ್ಲೂ ಹೊಂದಾಣಿಕೆ ಇಲ್ಲ.ಅದೇನೋ ಅಂತಾರಲ್ಲ,ಎತ್ತು ಏರಿಗೆ ಎಳುದ್ರೆ..ಕೋಣ ನೀರಿಗೆ ಎಳಿತು ಎನ್ನುವಂತಾಗಿದೆ ಬಿಜೆಪಿಯ ಸ್ಥಿತಿ.

ಬಿಜೆಪಿ ಅಧಿಕಾರಕ್ಕೆ ಬಂದಷ್ಟೇ ಅವಸರದಲ್ಲಿ ಜನಮನ್ನಣೆ ಕಳೆದುಕೊಳ್ತು ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತೆ.ಸರ್ಕಾರದ ಬಗ್ಗೆ ಜನರಿಗೆ ಇರ್ಬೇಕಾದ ನಂಬಿಕೆ-ವಿಶ್ವಾಸವೇ ಇವತ್ತು ಇಲ್ಲವಾಗಿದೆ.ಏನೇ ನಿರ್ದಾರ ತೆಗೆದುಕೊಳ್ಳುವ ಮುನ್ನ ಸಿಎಂ ಯಡಿಯೂರಪ್ಪ ಹತ್ತಾರು ಬಾರಿ ಆಲೋಚಿಸ್ಬೇಕಿದೆ(ಇದಕ್ಕಾಗಿಯೇ ನಾನು ತಂತಿ ಮೇಲೆ ನಡೆಯುತ್ತಿದ್ದೇನೆ ಎಂದಿದ್ದು).ಸ್ವತಂತ್ರವಾಗಿ ಯಾವ್ದೇ ನಿರ್ದಾರ ತೆಗೆದುಕೊಳ್ಳದಷ್ಟು ಹೈಕಮಾಂಡ್ ಅವರನ್ನುಕಟ್ಟಿ ಹಾಕಿದೆ.ಹಾಗಾಗಿ ಎಲ್ಲೋ ಒಂದ್ಕೆಡೆ ಯಡಿಯೂರಪ್ಪ ಸರ್ಕಾರ ನಡೆಸುವ ಆಸಕ್ತಿಯನ್ನೂ ಕಳ್ಕೊಂಡಿದ್ದಾರೆ.ಇರುವಷ್ಟು ದಿನ ತಳ್ಳಿಕೊಂಡು ಹೋಗುವ ನಿರ್ಧಾರಕ್ಕೆ ಅವರು ಬಂದಂತಿದೆ.

ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ಗೊಂದಲಕ್ಕೆ ಸಿಲುಕಿದೆ.ಆ ಗೊಂದಲ ಎಲ್ಲಿವರೆಗೆ ತಲುಪಿದೆ ಎಂದ್ರೆ,ಸರ್ಕಾರ 100 ದಿನ ಪೂರೈಸೋದು ನವಂಬರ್ 2 ಆದ್ರೂ, 5ರಂದು ಆಚರಣೆ ಮಾಡುವ ಮಟ್ಟದ ಗೊಂದಲದಲ್ಲಿದ್ದಾರಂತೆ ಮುಖಂಡರು.ಅದರ ಜೊತೆಗೇನೆ ಸರ್ಕಾರದ ಕಾರ್ಯಕ್ರಮವಾಗಿ ಇದನ್ನು ಆಚರಿಸ್ಬೇಕೋ ಅಥ್ವಾ ಪಕ್ಷದ ಮಟ್ಟಿಗೇನೇ ಆಚರಣೆಯನ್ನು ಸೀಮಿತಗೊಳಿಸ್ಬೇಕೋ ಎನ್ನುವ ವಿಚಾರದಲ್ಲು ಕ್ಲಾರಿಟಿ ಸಿಗದೆ ಗೊಂದಲ ಮುಂದುವರೆದಿದೆ.ಬಿಜೆಪಿ ನಾಯಕರಲ್ಲಿ ಈ ಮಟ್ಟಿಗಿನ ಗೊಂದಲ ಮುಂದುವರೆಯಲಿಕ್ಕೆ ಕಾರಣವೇ ನಾಯಕರಲ್ಲಿನ ಸಮನ್ವಯತೆ ಕೊರತೆ. ಸರ್ಕಾರ ನೂರು ದಿನ ಪೂರೈಸುತ್ತಿರುವ ಕಾರ್ಯಕ್ರಮವನ್ನು ಸರ್ಕಾರ ಜಾರಿಗೆ ತಂದ ಯೋಜನೆಗಳ ಕಿರುಹೊತ್ತಿಗೆ ಬಿಡುಗಡೆ ಮೂಲಕ ಆಚರಿಸುವ ನಿರ್ದಾರವನ್ನು ಕೆಲವರು ಮಾಡಿದ್ರು.ಇದಕ್ಕೆ ಖುದ್ದು ಯಡಿಯೂರಪ್ಪ ಕೂಡ ಸಹಮತ ವ್ಯಕ್ತಪಡಿಸಿದ್ದರು.ಬ್ಯಾಂಕ್ವೆಟ್ ಹಾಲ್ ಕೂಡ ಇದಕ್ಕಾಗಿ ಬುಕ್ ಆಗಿತ್ತು.ಆದ್ರೆ ಈಗ ಇದ್ದಕಿದ್ದಂತೆ ಯಡಿಯೂರಪ್ಪ ಯೂ ಟರ್ನ್ ಹೊಡೆದಿದ್ದಾರೆ.ಅವ್ರೇ ಸರ್ಕಾರದಿಂದ 100 ದಿನಗಳ ಸೆಲಬ್ರೇಷನ್ ಮಾಡೋದನ್ನು ಕೈಬಿಟ್ಟು ಅದನ್ನು ಕೇವಲ ಪಕ್ಷದ ಕಾರ್ಯಕ್ರಮವಾಗಿ ಮಾಡುವ ಚಿಂತನೆಗೆ ಬಂದಿದ್ದಾರಂತೆ.

ಕಟೀಲ್-ಯಡ್ಡಿ ನಡುವೆ ಶೀತಲಸಮರ: ಇದರ ಜೊತೆಗೆ ಬಿಜೆಪಿಗೆ ದೊಡ್ಡ ಸಮಸ್ಯೆಯಾಗಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡುವಿನ ಸಂಘರ್ಷ.ಯಡಿಯೂರಪ್ಪ ತೆಗೆದುಕೊಳ್ಳುವ ನಿರ್ಧಾರವನ್ನು ಪ್ರಶ್ನಿಸ್ಲಿಕ್ಕೆಂದೇ ಹೈಕಮಾಂಡ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆಯೇನೋ ಎನಿಸುವಷ್ಟರ ಮಟ್ಟಿಗೆ ಅವರಿಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆ.ಇದು 100 ದಿನಗಳ ಆಚರಣೆ ವಿಷಯದಲ್ಲು ಮುಂದುವರೆದಿದೆ.

ನೂರು ದಿನಗಳ ಸಂಭ್ರಮವನ್ನು ಪಕ್ಷದ ಕಾರ್ಯಕ್ರಮವಾಗಿ ಮಾಡಬೇಕೆನ್ನುವ ಯಡಿಯೂರಪ್ಪ ಅವ್ರ ವಾದವನ್ನು ಒಪ್ಪದ ಕಟೀಲ್,ಅದನ್ನು ಸರ್ಕಾರದ ಕಾರ್ಯಕ್ರಮವಾಗಿ ಮಾಡಬೇಕೆಂದು ಹಠ ಹಿಡಿದಿದ್ದಾರಂತೆ.ಹಾಗಾಗಿನೇ ಜಟಾಪಟಿನೇ ಬೇಡವೆಂದು ಡೇಟನ್ನೇ 2 ರ ಬದಲು 5ಕ್ಕೆ ಪೋಸ್ಟ್ ಪೋನ್ ಮಾಡಿದ್ದಾರೆ. ಅದೇನೇ ಆಗಲಿ,ಪಕ್ಷದ ಮುಖಂಡರ ನಡುವೆ ಸಮನ್ವಯ ಎನ್ನೋದು ಇದ್ದಿದ್ದರೆ ಸಂಘಟಿತ ಪಕ್ಷವಾದ ಬಿಜೆಪಿಯಲ್ಲಿ ಶಿಸ್ತು ಹಳಿ ತಪ್ಪುತ್ತಿರಲಿಲ್ಲ.ಯಾವ್ದೇ ಕೆಲಸ ಅಥ್ವಾ ಕಾರ್ಯಕ್ರಮವಿರಲಿ ಅದನ್ನು ವ್ಯವಸ್ಥಿತ ಹಾಗೂ ಅಚ್ಚುಕಟ್ಟಾಗಿ ಮಾಡುವಂಥ ಬಿಜೆಪಿ 100 ದಿನಗಳ ನಿರ್ಣಾಯಕ ಹಾಗೂ ಮಹತ್ವದ ಕಾರ್ಯಕ್ರಮವನ್ನು ನಡೆಸ್ಲಿಕ್ಕೆ ಇಷ್ಟೊಂದು ಒದ್ದಾಡುವಂಥ ಪರಿಸ್ತಿತಿ ಸೃಷ್ಟಿಯಾಗ್ತಿರಲಿಲ್ಲ.

 

 

 

Spread the love
Leave A Reply

Your email address will not be published.

Flash News