ಮೆಡಿಕಲ್ ಕಾಲೇಜ್ ನಿರ್ಮಾಣ ವಿವಾದ-ಡಿಕೆಶಿ ವಿರುದ್ಧ ತೊಡೆತಟ್ಟಿದ ಡಾ.ಸುಧಾಕರ್

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಬ್ಯೂರೋ)

ಬೆಂಗಳೂರು/ಚಿಕ್ಕಬಳ್ಳಾಪುರ/ಕನಕಪುರ:  ಮೆಡಿಕಲ್ ಕಾಲೇಜ್ ನಿರ್ಮಾಣ ವಿಚಾರ ಅದ್ಹೇಕೋ ರಾಜಕೀಯ ನಾಯಕರ ಪ್ರತಿಷ್ಟೆಯ ಗುದ್ದಾಟಕ್ಕೆ ಅಖಾಡವಾಗ್ತಿದೆಯೇ ಎನಿಸುತ್ತದೆ.ಕನಕಪುರದಲ್ಲೆ ಕಾಲೇಜ್ ನಿರ್ಮಾಣವಾಗ್ಬೇಕು.ಇದನ್ನು ಹಿಂದಿನ ಮೈತ್ರಿ ಸರ್ಕಾರವೇ ಒಪ್ಪಿದೆ.ಕ್ಯಾಬಿನೆಟ್ ನಲ್ಲೂ ತಾತ್ವಿಕ ಹಾಗು ತಾಂತ್ರಿಕ ಅನುಮೋದನೆ ಸಿಕ್ಕಿದೆ ಎಂದು ಕೈ ನಾಯಕ ಡಿ.ಕೆ.ಶಿವಕುಮಾರ್ ಹೇಳ್ತಿದ್ರೆ ಅದ್ಹೇಗೆ ಮಾಡ್ತಿರೋ ನಾನು ನೋಡ್ತೇನೆ ಎಂದು ಚಿಕ್ಕಾಬಳ್ಳಾಪುರದ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಪಾಟಿ ಸವಾಲೆಸೆದಿದ್ದಾರೆ.ಆದ್ರೆ ವಿವಾದಕ್ಕೆ ಇತಿಶ್ರೀ ಹಾಡ್ಬೇಕಾದ ಸರ್ಕಾರ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ತನ್ನ ನಿಲುವನ್ನು ಪ್ರತಿಬಿಂಬಿಸುತ್ತಿದೆ.

ಚಿಕ್ಕಬಳ್ಳಾಪುರ ಅನರ್ಹ ಶಾಸಕ ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ ಅನರ್ಹ ಶಾಸಕ ಡಾ.ಕೆ.ಸುಧಾಕರ್

ಕನಕಪುರದಲ್ಲೆ ಮೆಡಿಕಲ್ ಕಾಲೇಜು ಆಗಬೇಕು.ಇದಕ್ಕಾಗಿ ನಾನು ಎಂಥಾ ಹೋರಾಟ ಹಾಗು ತ್ಯಾಗಕ್ಕೂ ಸಿದ್ಧ.ನನ್ನ ರಾಜಕೀಯ ಭವಿಷ್ಯವನ್ನೆ ಇದಕ್ಕಾಗಿ ಬಲಿಗೊಡಲು ಸಿದ್ದ ಎಂದು ತೀಕ್ಷ್ಣವಾಗಿಯೇ ಡಿಕೆಶಿ ರಿಯಾಕ್ಟ್ ಮಾಡಿದ್ರೆ,ಸುಧಾಕರ್ ಅದ್ಹೇಗೆ ಮಾಡ್ತಿರೋ ನಾನು ನೋಡ್ತೇನೆ..ಕಾಲೇಜ್ ಆಗ್ಬೇಕೆಂದಿದ್ರೆ ಅದು ಚಿಕ್ಕಾಬಳ್ಳಾಪುರದಲ್ಲೇ ಎಂದು ಡಿಕೆಶಿಗೆ ತೊಡೆ ತಟ್ಟಿದ್ದಾರೆ.

 

ಇದರ ಬೆನ್ನಲ್ಲೇ ಡಾ.ಸುಧಾಕರ್ ಸಿಎಂ ಯಡಿಯೂರಪ್ಪ ಅವರನ್ನು ಅವರ ಧವಳಗಿರಿ ನಿವಾಸದಲ್ಲಿ ಭೇಟಿಯಾಗಿ ಮೆಡಿಕಲ್ ಕಾಲೇಜ್ ವಿಚಾರದಲ್ಲಿ ಆಗುತ್ತಿರುವ ಬೆಳವಣಿಗೆಗಳ ವಿವರಣೆ ನೀಡಿದ್ದಾರೆ.ಇದಕ್ಕೆ ರಿಯಾಕ್ಟ್ ಮಾಡಿರುವ ಯಡಿಯೂರಪ್ಪ, ಈ ಹಿಂದೆ ಸರ್ಕಾರ ನಿಗಧಿ ಮಾಡಿದಂತೆ ಚಿಕ್ಕಬಳ್ಳಾಪುರದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗುವುದು.ಸರ್ಕಾರ ತಾನು ಕೊಟ್ಟ ಮಾತಿಗೆ ಬದ್ದವಾಗಿದೆ. ಈಗಾಗಲೇ ಚಿಕ್ಕಬಳ್ಳಾಪುರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿದೆ ಎಂದು ಉತ್ತರಿಸಿದ್ದಾರೆ.

ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಯಾರಿಂದ್ಲೂ ವಿರೋಧವಿಲ್ಲ.ಇದಕ್ಕೆ ಸಿಎಂ ಯಡಿಯೂರಪ್ಪ ಕೂಡ ವಿರೋಧ ವ್ಯಕ್ತಪಡಿಸಲ್ಲ.ಅವರನ್ನುಮನವೊಲಿಸುವ ಯತ್ನ ನಾನ್ ಮಾಡ್ತೇನೆ ಎಂದು ಡಿ ಕೆಶಿ ಹೇಳಿಕೊಂಡು ತಿರುಗುತ್ತಿರುವ ಬಗ್ಗೆ ಯೆಡ್ಡಿ ಅವರ ಗಮನ ಸೆಳೆದಾಗ,ಸರ್ಕಾರ ಒಮ್ಮೆ ತೀರ್ಮಾನ ಕೈಗೊಂಡ ಮೇಲೆ ಮುಗಿಯಿತು.ಈಗ ಯಾರೋ‌ ಹೇಳ್ತಾರೆ ಅಂತಾ ಅದನ್ನು ಮತ್ತೆ ಬೇರೆಡೆ ಸ್ಥಳಾಂತರ ಮಾಡೋಕೆ ಆಗುವುದಿಲ್ಲ.ನೀವು ಏನು ಚಿಂತೆ ಮಾಡಬೇಡಿ, ನಿಮ್ಮ ಕ್ಷೇತ್ರದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣ ಆಗಲಿದೆ.ಇದಕ್ಕೆ ಸರ್ಕಾರ ಬದ್ದವಿದೆ ತಲೆಕೆಡಿಸಿಕೊಳ್ಳದೆ ಚುನಾವಣೆಯಲ್ಲಿ ಗೆದ್ದು ಬರುವ ಬಗ್ಗೆ ಆಲೋಚನೆ ಮಾಡಿ ಎಂದಿದ್ದಾರೆ.ಡಿಕೆಶಿ ಹಾಗು ಡಾ.ಸುಧಾಕರ್ ಅವರ ನಡುವೆ ಮೆಡಿಕಲ್ ಕಾಲೇಜ್ ನಿರ್ಮಾಣದ ವಿಚಾರದಲ್ಲಿ ಉದ್ಭವವಾಗಿರುವ ಈ ವಿವಾದ ಹಾಗು ಸಂಘರ್ಷ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಾಗ್ತಿಲ್ಲ.

ಚಿಕ್ಕಾಬಳ್ಳಾಪುರದಲ್ಲೇ ಮೆಡಿಕಲ್ ಕಾಲೇಜ್ ನಿರ್ಮಾಣವಾಗ್ಬೇಕೆಂದು ಮನವಿ ನೀಡಿದ ಡಾ.ಕೆ.ಸುಧಾಕರ್
ಚಿಕ್ಕಾಬಳ್ಳಾಪುರದಲ್ಲೇ ಮೆಡಿಕಲ್ ಕಾಲೇಜ್ ನಿರ್ಮಾಣವಾಗ್ಬೇಕೆಂದು ಮನವಿ ನೀಡಿದ ಡಾ.ಕೆ.ಸುಧಾಕರ್
ಕನಕಪುರದಲ್ಲೇ ಕಾಲೇಜ್ ನಿರ್ಮಿಸ್ತೇನೆನ್ನುತ್ತಿರುವ ಡಿಕೆಶಿ ವಾದಕ್ಕೆ ಮನ್ನಣೆ ನೀಡದಂತೆ ಸಿಎಂಗೆ ಮನವಿ
ಕನಕಪುರದಲ್ಲೇ ಕಾಲೇಜ್ ನಿರ್ಮಿಸ್ತೇನೆನ್ನುತ್ತಿರುವ ಡಿಕೆಶಿ ವಾದಕ್ಕೆ ಮನ್ನಣೆ ನೀಡದಂತೆ ಸಿಎಂಗೆ ಮನವಿ

 

 

 

Spread the love
Leave A Reply

Your email address will not be published.

Flash News