ರಾಕಿಂಗ್ ಸ್ಟಾರ್ ದಂಪತಿಗೆ ಗಂಡುಮಗು

0

(ಕನ್ನಡ ಪ್ಲಾಶ್ ನ್ಯೂಸ್.ಕಾಂ ಸಿನೆಮಾ ಬ್ಯೂರೋ)  

ಬೆಂಗಳೂರು: ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್-ಬ್ಯೂಟಿ ಕ್ವೀನ್ ರಾಧಿಕಾ ಪಂಡಿತ್ ದಂಪತಿಗೆ ಎರಡನೇ ಮಗುವಾಗಿದೆ.ಎರಡನೇ ಮಗುವಿನ  ನಿರೀಕ್ಷೆಯಲ್ಲಿದ್ದ ಯಶ್-ರಾಧಿಕಾ ದಂಪತಿಗೆ ಗಂಡುಮಗುವಾಗಿದೆ. ಫೋರ್ಟಿಸ್ ಆಸ್ಪತ್ರೆಯಲ್ಲಿ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ರಾಕಿಂಗ್ ದಂಪತಿಗೆ  ಹೆಣ್ಣು ಮಗುವಾಗಿತ್ತು.ಅದಕ್ಕೆ ಐರಾ ಎಂದು ಹೆಸರಿಟ್ಟಿದ್ದರು.ಇದೀಗ ಎರಡನೇ ಮಗುವಿನ ಆಗಮನವಾಗಿದೆ. ಸಿ-ಸೆಕ್ಷನ್ ಮೂಲಕ ಡೆಲಿವರಿಯಾಗಿದ್ದು ತಾಯಿ ಮಗು ಕ್ಷೇಮವಾಗಿರೋದಾಗಿ  ವೈದ್ಯರು ತಿಳಿಸಿದ್ದಾರೆ.

ಕೆಜಿಎಫ್-2 ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಯಶ್ ತಮ್ಮೆಲ್ಲಾ ಶೆಡ್ಯೂಲ್ ಗಳನ್ನು ಕ್ಯಾನ್ಸಲ್ ಮಾಡ್ಕೊಂಡು ನಿನ್ನೆಯಿಂದಲೂ ಆಸ್ಪತ್ರೆಯಲ್ಲೇ ಇದ್ದಾರೆ.ಗಂಡುಮಗುವಿನ ಆಗಮನದಿಂದಾಗಿ ರಾಕಿಂಗ್ ಸ್ಟಾರ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು,ಈ ಸಂಭ್ರಮವನ್ನು ಯಶ್ ತಮ್ಮ ಫೇಸ್ಬುಕ್ ಹಾಗೂ ಟ್ವೀಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

 

 

Spread the love
Leave A Reply

Your email address will not be published.

Flash News