ಹಸೆ ಏರಿದ “ಎದ್ದೇಳು ಮಂಜುನಾಥ” ಯಜ್ಞಶೆಟ್ಟಿ

0

ಕನ್ನಡ ಫ್ಲಾಶ್ ನ್ಯೂಸ್.ಕಾಂ ಸಿನೆಮಾ ಬ್ಯೂರೋ)

ಮಂಗಳೂರು/ಬೆಂಗಳೂರು:ಉಳಿದವರು ಕಂಡಂತೆ..ಲವ್ ಗುರು.ಕಳ್ಳ-ಮಳ್ಳ-ಸುಳ್ಳ, ಎದ್ದೇಳು ಮಂಜುನಾಥ.ಸುಗ್ರೀವ..ದಂಥ ಚಿತ್ರಗಳ ಖ್ಯಾತ ನಟಿ ಯಜ್ಞಶೆಟ್ಟಿ ದಾಂಪತ್ಯ ಜೀವಕ್ಕೆ ಕಾಲಿರಿಸಿದ್ದಾರೆ. ಹಲವು ವರ್ಷಗಳ ಸ್ನೇಹಿತ ಹಾಗು ತುಳು ಚಿತ್ರರಂಗದ ಹೆಸರಾಂತ ನಟ ಸಂದೀಪ್ ಅವರೊಂದಿಗೆ ಯಜ್ಞಶೆಟ್ಟಿ ಸಪ್ತಪದಿ ತುಳಿದಿದ್ದಾರೆ.

ಮಂಗಳೂರಿನಲ್ಲಿ ಸಂಬಂಧಿಕರು ಹಾಗೂ ಸ್ನೇಹಿತರ ಆಶೀರ್ವಾದ ಪಡೆದು ವಿವಾಹವಾದ ಈ ಜೋಡಿ ನಡುವೆ ಅನುರಾಗ ಅಂಕುರಿಸಿದ್ದೇ ತುಳು ಚಿತ್ರರಂಗದಲ್ಲಿ.ವೃತ್ತಿಯಲ್ಲಿ ಇಬ್ಬರೂ ಕಲಾವಿದರಾಗಿರುವುದರಿಂದ ಮದುವೆ ಅನಾಯಾಸವಾಗಲು ಕಾರಣವಾಯ್ತು.ಅಂದ್ಹಾಗೆ ಸಂದೀಪ್ ಕೂಡ,ತುಳು ಚಿತ್ರರಂಗದಲ್ಲಿ ಸಧ್ಯಕ್ಕೆ ಬೇಡಿಕೆಯಲ್ಲಿರುವ ನಟ. ಥಂಡಾ, ಮದಿಮೆ ಸೇರಿದಂತೆ ಅನೇಕ ತುಳು ಚಿತ್ರದಲ್ಲಿ ಅಭಿನಯಿಸಿರೋ ಸಂದೀಪ್ ಅವರ ನಟನೆಯನ್ನು ಮೆಚ್ಚಿಕೊಂಡು ಯಜ್ಞ ಅವರನ್ನು ಪ್ರಪೋಸ್ ಮಾಡಿದ್ದರೆನ್ನಲಾಗಿದೆ.ಕೆಲ ವರ್ಷಗಳವರೆಗು ಪ್ರೀತಿಸಿದ್ದ ಈ ಜೋಡಿ ಕೊನೆಗು ದಾಂಪತ್ಯಕ್ಕೆಕಾಲರಿಸುವ ಮೂಲಕ ಬದುಕಿನ ನೈಜ ಇನ್ನಿಂಗ್ಸ್ ಆರಂಭಿಸೊಕ್ಕೆ ಹೊರಟಿದೆ. ಯಜ್ಞ ಶೆಟ್ಟಿ ಮದುವೆಯಲ್ಲಿ ಭಾಗಿಯಾದ ರಕ್ಷಿತ್ , ರಿಷಬ್ ಹಾಗೂ ಪ್ರಮೋದ್ ಶೆಟ್ಟಿ ಭಾಗಿಯಾಗಿದ್ದರು. ಅಂದ್ಹಾಗೆ ಇವ್ರ ವೈವಾಹಿಕ ಜೀವನ ಚೆನ್ನಾಗಿರಲೆಂದು ಫ್ಲಾಶ್ ಕನ್ನಡ ನ್ಯೂಸ್ ಕೂಡ ಶುಭ ಹಾರೈಸುತ್ತದೆ.

Spread the love
Leave A Reply

Your email address will not be published.

Flash News