ಬಿಬಿಎಂಪಿ ಆಡಳಿತ ಪಕ್ಷದ ನಾಯಕರಾಗಿ ಮುನೀಂದ್ರಕುಮಾರ್ ಆಯ್ಕೆ

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಬ್ಯೂರೋ) 

ಮುನೀಂದ್ರಕುಮಾರ್
            ಮುನೀಂದ್ರಕುಮಾರ್

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ನೂತನ ಆಡಳಿತ ಪಕ್ಷದ ನಾಯಕರಾಗಿ ಮುನೀಂದ್ರ ಕುಮಾರ್ ಆಯ್ಕೆಯಾಗಿದ್ದಾರೆ.ಬಿಬಿಎಂಪಿಗೆ ಎರಡನೇ ಅವಧಿಗೆ ಜಕ್ಕೂರು ವಾರ್ಡ್ ನಿಂದ ಕಾರ್ಪೊರೇಟರ್ ಆಗಿರುವ ಮುನೀಂದ್ರ ಕುಮಾರ್ ಅವರನ್ನು ಪಕ್ಷದ ಮುಖಂಡರು ಆಡಳಿತ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.ಮೇಯರ್ ಗೌತಮ್ ಕುಮಾರ್ ಅವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವಂತೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ.

ಅಂದ್ಗಾಗೆ ಬಿಜೆಪಿ ಪಕ್ಷಕ್ಕೆ ಅತ್ಯಂತ ನಿಷ್ಠೆಯನ್ನುಳಿಸಿಕೊಂಡು ಬಂದಿರುವುದರಿಂದ್ಲೇ ಮುನೀಂದ್ರ ಕುಮಾರ್ ಅವರಿಗೆ ಆಡಳಿತ ಪಕ್ಷ ನಾಯಕಮ ಹೊಣೆಗಾರಿಕೆ ಸಿಕ್ಕಂತಾಗಿದೆ.ಕಟ್ಟಾ ಆರ್ ಎಸ್ ಎಸ್ ಕಾರ್ಯಕರ್ತರಾಗಿರುವ ಮುನೀಂದ್ರ ಕುಮಾರ್ ಅವರಿಗೆ ಪಕ್ಷವನ್ನು ಮುನ್ನೆಡೆಸುವ ಬಹುದೊಡ್ಡ ಜವಾಬ್ದಾರಿ ಸಿಕ್ಕಿದ್ದು ಮೇಯರ್ ಗೌತಮ್ ಕುಮಾರ್ ಅವರಂತೆ ಯುವಕರಾಗಿರುವುದರಿಂದ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಲು ಅವಕಾಶ ಸಿಕ್ಕಂತಾಗಿದೆ.

ಇದೆಲ್ಲಕ್ಕಿಂತ ಹೆಚ್ಚಾಗಿ ಮುಂದಿನ ವರ್ಷ ಬಿಬಿಎಂಪಿಗೆ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಹೊಣೆಗಾರಿಕೆಯೂ ಮುನೀಂದ್ರ ಕುಮಾರ್ ಅವರ   ಮೇಲಿದೆ.ವವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸುವ ಗುರುತರ ಜವಾಬ್ದಾರಿ ಮುನೀಂದ್ರ ಕುಮಾರ್ ಅವರ ಮೇಲಿದೆ.

Spread the love
Leave A Reply

Your email address will not be published.

Flash News