ಮಾಡಿದ್ದೇ ಅಕ್ಷಮ್ಯ-ಅದ್ರಲ್ಲಿ ಮುಷ್ಕರ ಬೇರೆ… ಇವರೆಲ್ಲಾ ವೈದ್ಯರು..

0

(ಕನ್ನಡ ಪ್ಲಾಶ್ ನ್ಯೂಸ್.ಕಾಂ ಬ್ಯೂರೋ)

ಆಸ್ಪತ್ರೆ ಎದುರು ಕರವೇ ಮಹಿಳಾ ಘಟಕದ ಕಾರ್ಯಕರ್ತರ ಆಕ್ರೋಶ
ಆಸ್ಪತ್ರೆ ಎದುರು ಕರವೇ ಮಹಿಳಾ ಘಟಕದ ಕಾರ್ಯಕರ್ತರ ಆಕ್ರೋಶ

ಬೆಂಗಳೂರು:ಮಿಂಟೋ ಆಸ್ಪತ್ರೆಯ ಟ್ರೈನಿಂಗ್ ಡಾಕ್ಟರ್ಸ್ ಗಳಿಗೆ ಕಿವಿ ಹಿಂಡುವವರೇ ಇಲ್ವಾ..ಇನ್ನೂ ಸೇವೆಯಲ್ಲಿ ಖಾಯಂ ಆಗಿಲ್ಲ ಅಷ್ಟರಲ್ಲಾಗ್ಲೇ ಪ್ರತಿಭಟನೆ ಮೂಲಕ ಸಾರ್ವಜನಿಕವಾಗಿ ಸಿಗ್ಬೇಕಾದ ವೈದ್ಯಕೀಯ ಸೇವೆಯನ್ನೇ ಬುಡಮೇಲುಗೊಳಿಸುವ ಕೆಲಸ ಮಾಡಿದ್ದಾರೆ.ಕ್ಯಾಕರಿಸಿ ಉಗಿದು ಕೆಲಸಕ್ಕೆ ಹಚ್ಚಬೇಕಾದವ್ರೇ ಅವ್ರ ಬೆನ್ನಿಗೆ ನಿಂತಿದ್ದಾರೆ.ಇನ್ನೂ ಹುಬ್ಬಳ್ಳಿಯಲ್ಲಿ  ವೈದ್ಯಕೀಯ ಸಚಿವ ಹಾಗೂ ಡಿಸಿಎಂ ಡಾ.ಅಶ್ಚತ್ಥನಾರಾಯಣ, ಟ್ರೈನಿ ಡಾಕ್ಟರ್ಸ್ ಮಾಡಿದ್ದೇ ಸರಿ ಎನ್ನುವ ರೀತಿಯ ಬೇಜವಾಬ್ದಾರಿಯ ಹೇಳಿಕೆ ನೀಡ್ತಾರೆ.

ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸಿ ಸ್ಟ್ರೈಕ್ ಮಾಡ್ತಾರೆಂದ್ರೆ ಮಿಂಟೋ ಆಸ್ಪತ್ರೆಯ ವೈದ್ಯರಿಗೆ ಇನ್ನೆಷ್ಟು ಕೊಬ್ಬಿರಬೇಕು.ಕರವೇ ಕಾರ್ಯಕರ್ತರ ಜತೆ ಕಿರಿಕ್ ಆಯ್ತೆಂದ್ರೆ ಅದನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳೊಕ್ಕೆ ನಾನಾ ಮಾರ್ಗಗಳಿವೆ.ಅಷ್ಟಕ್ಕೂ ಹಲ್ಲೆ ಆಗಿದ್ದು ನಿಜನಾ ಎಂದು ಕೇಳಿದ್ರೆ ಸ್ಪಷ್ಟ ಉತ್ತರವೇ ವೈದ್ಯರ ಬಳಿ ಇಲ್ಲ.ಹೀಗಿರುವಾಗ ಕಾನೂನಾತ್ಮಕ ಹೋರಾಟ ಮಾಡುವ ಜತೆಗೇ ಮುಷ್ಕರ ಕೈಬಿಟ್ಟು ವೈದ್ಯಕೀಯ ಸೇವೆ ಮುಂದುವರೆಸಿದ್ದರೆ ಇವ್ರು ಗ್ರೇಟ್ ಆಗಿಬಿಡ್ತಿದ್ರು.

ವಿಲನ್ ಗಳಾದ ವೈದ್ಯರು:  ಆದ್ರೆ ಮುಷ್ಕರ ಮಾಡುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸುವ ಹಠಕ್ಕೆ ಬಿದ್ದವರಂತೆ ಮುಷ್ಕರ ಮಾಡಿದ್ದರ ಪರಿಣಾಮ ಜನರ ದೃಷ್ಟಿಯಲ್ಲಿ ವಿಲನ್ ಗಳಾದ್ರೆ ಹೊರತು,ವೈದ್ಯಕೀಯ ಸೇವೆ ಮೇಲೇನೂ ಗಂಭೀರ ಪರಿಣಾಮ ಬೀರಲಿಲ್ಲ.ಏಕೆಂದ್ರೆ ಮೊದ್ಲೇ ಡೀನ್ ಇವರೆಲ್ಲಾ ಪರ್ಮನೆಂಟ್ ಡಾಕ್ಟರ್ಸ್ ಅಲ್ಲ,ಟ್ರೈನಿಂಗ್ ಗೆಂದು ಬಂದವ್ರು.ಹಾಗಾಗಿ ಅವರ ಮುಷ್ಕರದಿಂದ ತೊಂದರೆ ಆಗೊಲ್ಲ.ಅಷ್ಟೇ ಅಲ್ಲ,ಅವರ ಮುಷ್ಕರಕ್ಕೆ ನಮ್ಮ ಬೆಂಬಲವಂತೂ ಇಲ್ಲ ಎಂದಿದ್ರು.ಹಾಗಾಗಿನೇ ಐಎಂಎ ಮಾಜಿ ಅಧ್ಯಕ್ಷ ಡಾ,ರವೀಂದ್ರ ರನ್ನು ಹೊರತುಪಡಿಸಿದ್ರೆ ಯಾವುದೇ  ವೈದ್ಯಕೀಯ ಸಂಘಟನೆಗಳು ಇವರ ಬೆಂಬಲಕ್ಕೆ ನಿಲ್ಲಲೇ ಇಲ್ಲ..ಹಾಗಾಗಿ ಶನಿವಾರದ  ಇವರ ಮುಷ್ಕರ ಪ್ಲಾಪ್ ಶೋ ಆಯ್ತು.

ಡೀನ್ ಆಕ್ಷೇಪದ ಹೊರತಾಗ್ಯೂ ಮುಷ್ಕರ ನಡೆಸಿದ ಡಾಕ್ಟರ್ಸ್
ಡೀನ್ ಆಕ್ಷೇಪದ ಹೊರತಾಗ್ಯೂ ಮುಷ್ಕರ ನಡೆಸಿದ ಡಾಕ್ಟರ್ಸ್

ದೃಷ್ಟಿ ಕಳ್ಕೊಂಡಿರೋದು 20ಕ್ಕೂ ಹೆಚ್ಚು ಅಮಾಯಕರು:ತಮ್ಮ ಸಹದ್ಯೋಗಿ ಮೇಲೆ ಹಲ್ಲೆಯಾಯ್ತೆಂದು ಬಾಯಿ ಬಡಿದುಕೊಳ್ಳುವ ಈ ಟ್ರೈನಿ ಡಾಕ್ಟರ್ಸ್ ಮಾಡಿರೋದು ಉತ್ತಮ ಕೆಲಸನಾ, ಖಂಡಿತಾ ಇಲ್ಲ.ಒಂದಲ್ಲಾ ಎರಡಲ್ಲ 20ಕ್ಕೂ ಹೆಚ್ಚು ಕಣ್ಣಿನ ಸಮಸ್ಯೆಯುಳ್ಳ ರೋಗಿಗಳನ್ನು ಶಾಶ್ವತ ಅಂಧರನ್ನಾಗಿ ಮಾಡಿದ್ದಾರೆನ್ನುವ ಕುಖ್ಯಾತಿ ಇವರಿಗಿದೆ.ಅಂದ್ಹಾಗೆ ತಮ್ಮಲ್ಲಿಗೆ ಬರುವ ರೋಗಿಗಳನ್ನು ಹೇಗೆ ನಡೆಸಿಕೊಳ್ಳಬೇಕೆನ್ನುವ ಅವರಿಗೆ ಹಿರಿಯ ವೈದ್ಯರ ಸಲಹೆ ಮೇರೆಗೆ ಹೇಗೆ ಚಿಕಿತ್ಸೆ ನೀಡ್ಬೇಕೆನ್ನುವ ಕಾಮನ್ ಸೆನ್ಸೇ ಇದ್ದಂತಿಲ್ಲ ಅನ್ಸುತ್ತೆ.ಹಾಗಾಗಿನೇ ಏನೋ ಮಾಡ್ಲಿಕ್ಕೋಗಿ ಅದೇನೋ ಮಾಡುದ್ರೆ ಎನ್ನುವ ಹಾಗೇ ಸರಿಯಾದ ಪರಿಜ್ಞಾನವಿಲ್ಲದೆ ಕೊಟ್ಟ ಟ್ರೀಟ್ಮೆಂಟ್ ನಿಂದ ರೋಗಿಗಳು ಶಾಶ್ವತ ಅಂಧರಾಗುವ ಆತಂಕಕ್ಕೆ ತಲುಪಿದ್ದಾರೆ.

ಕರವೇ ಕಾರ್ಯಕರ್ತರದೇನು ತಪ್ಪಿತ್ತು:ದೃಷ್ಟಿ ಕಳಕೊಳ್ಳುವ ಆತಂಕ ಎದುರಿಸ್ತಿದ್ದ ರೋಗಿಗಳ ಪರಿಸ್ತಿತಿ ನೋಡ್ಲಿಕ್ಕಾಗದೆ ಅವರ ಸಂಬಂಧಿಕರು ಕೊಟ್ಟ ದೂರಿನ ಮೇರೆಗೆ ಅದನ್ನು ಪ್ರಶ್ನಿಸಲು ಕರವೇ ಮಹಿಳಾ ಘಟಕದ ಕಾರ್ಯಕರ್ತರು ಅಧ್ಯಕ್ಷೆ ಅಶ್ವಿನಿ ಗೌಡ ಅಧ್ಯಕ್ಷತೆಯಲ್ಲಿ ಹೋಗಿದ್ದಾರೆ.ಆಗ ಸರಿಯಾಗಿ ಸ್ಪಂದಿಸದ ಕಾರಣ ಪ್ರಕರಣದ ಬಗ್ಗೆ ಕರ್ನಾಟಕ ಮೆಡಿಕಲ್ ಕೌನ್ಸಿಲ್(ಕೆಎಂಸಿ)ಗೆ ದೂರು ಕೊಟ್ಟಿದ್ದಾರೆ.ದೂರು ಕೊಟ್ಟು ಬಹಳ ದಿನವಾದ್ರೂ ಕ್ರಮ ಕೈಗೊಳ್ಳದ ಕಾರಣಕ್ಕೆ ಕೊಂಚ ಆಕ್ರೋಶಭರಿತರಾಗಿಯೇ ಕಾರ್ಯಕರ್ತರು  ಮಿಂಟೋಗೆ ನವೆಂಬರ್ 1 ರ ರಾತ್ರಿ ತೆರಳಿದ್ದಾರೆ.ಈ ಬಗ್ಗೆ ಪ್ರಶ್ನಿಸಿದ್ದಾರೆ.ಕನ್ನಡ ಅರ್ಥವಾಗದ ರೀತಿಯಲ್ಲಿ ಮಾತನಾಡಲು ಶುರುಮಾಡಿದಾಗ ಅಶ್ವಿನಿ ಗೌಡ ಜೋರಾಗೇ ಅಬ್ಬರಿಸಿದ್ದಾರೆ.

ಕನ್ನಡ ಬಂದ್ರೂ ಮಾತ್ನಾಡೊಲ್ಲ..ಏನ್ ಜಬರ್ ದಸ್ತಿನಾ.. ಕನ್ನಡ ಬರೊಲ್ವಾ..ನಿಮಗೆ ಪೇಷೆಂಟ್ಸ್ ಜತೆ ಹೇಗೆ ವ್ಯವಹರಿಸ್ತೀರಾ ಎಂದು ಕೇಳಿದಾಗ ಆ ಟ್ರೈನಿ ವೈದ್ಯೆ ಕನ್ನಡ ಬಂದ್ರೂ ಮಾತ್ನಾಡ್ಬೇಕೆನ್ನೋ ರೂಲ್ಸ್ ಇದಿಯೇನ್ರಿ..ನಾನ್ ಕನ್ನಡ ಮಾತ್ನಾಡೊಲ್ಲ,ಏನ್ ಮಾಡ್ತೀರೀಗ ಎಂದು ಅಹಂಕಾರದ ಮಾತನ್ನಾಡಿದ್ದಾರೆ.ಮೊದ್ಲೇ ರೋಗಿಗಳಿಗೆ ಸರಿಯಾಗಿ ಸ್ಪಂದಿಸಿಲ್ಲ ಎನ್ನೋ ಸಿಟ್ಟು,ಅದರ ಜತೆಗೆ ಕನ್ನಡ ಬಂದ್ರೂ ಏಕ್ ಮಾತ್ನಾಡ್ಬೇಕು ಎನ್ನುವ ಅಹಂಕಾರದ ಮಾತುಗಳು(ಅದು ಕನ್ನಡ ರಾಜ್ಯೋತ್ಸವ ದಿನದಂದೇ ಆಗಿದ್ದರಿಂದ ಕರವೇ ಕಾರ್ಯಕರ್ತರಿಗೆ ಕೊಂಚ ಸಿಟ್ಟು ಹೆಚ್ಚಾಗಿತ್ತು) ಅಶ್ವಿನಿ ಗೌಡರನ್ನು ಆಕ್ರೋಶಕ್ಕೀಡುಮಾಡಿವೆ.ಆಗ ಶುರುವಾದ ಮಾತಿನ ಚಕಮಕಿ ಕೆಲ ಕ್ಷಣಗಳಲ್ಲೇ ರಂಪಾಟವಾಗ್ಹೋಗಿದೆ.ಅಷ್ಟೇ ನನ್ನ ಮೇಲೆ ಕರವೇ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆನ್ನೋ ಸೀನ್ ಕ್ರಿಯೇಟ್ ಮಾಡಲಾಗಿದೆ.ಇದನ್ನೇ ಕಾಯ್ತಿದ್ದ ವೈದ್ಯರು ಸಂಬಂಧಪಟ್ಟ ಆಸ್ಪತ್ರೆಯ ಡೀನ್ ಗೂ ಗಮನಕ್ಕೆ ತಾರದೆ ಏಕಾಏಕಿ ನಾಳೆ ಎಲ್ಲಾ ವೈದ್ಯಕೀಯ ಸೇವೆ ಬಂದ್..ಮುಷ್ಕರ ಎಂದು ನಿರ್ಧರಿಸಿಯೇ ಬಿಟ್ಟರು.ಅದರಂತೆ ನಡೆದು ಹೋಯ್ತು ಕೂಡ.

ಡೀನ್ ಅಣತಿ ಮೀರಿ  ಸ್ಟ್ರೈಕ್ : ಇನ್ನೂ ಕಂಪ್ಲೀಟ್ ಕೋರ್ಸ್ ಮುಗಿಸಿ ಪೂರ್ಣ ಪ್ರಮಾಣದ ವೈದ್ಯರಾಗಿ ಹೊರಬಂದಿಯೇ ಇಲ್ಲ.ಅಷ್ಟರಲ್ಲೇ ಈ ಡಾಕ್ಟರ್ಸ್ ಅದೇನೋ ಆಗಬಾರದ್ದು ಆಗೋಗಿದೆ ಎನ್ನುವ ರೇಂಜ್ನಲ್ಲಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಕ್ಕೆ ಮಿಂಟೋ ಆಸ್ಪತ್ರೆಯ ಡೀನ್ ಅವ್ರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಇವ್ರು ನಮ್ಮ ಆಸ್ಪತ್ರೆಯ ಪರ್ಮನೆಂಟ್ ಸ್ಟಾಫ್ ಅಲ್ಲ.ಇವರು ಟ್ರೈನೀಸ್ ಅಷ್ಟೇ.ಅವರಿಗೆ ಸ್ಟ್ರೈಕ್ ಮಾಡುವ ಪರ್ಮಿಷನ್ನೂ ಇಲ್ಲ.ಅಷ್ಟಕ್ಕೂ ಇವರು ಸ್ಟ್ರೈಕ್ ಮಾಡುವುದರಿಂದ ನಯಾಪೈಸೆ ನಮ್ಮ ವೈದ್ಯಕೀಯ ಸೇವೆ ಮೇಲೆ ಯಾವ್ದೇ ಅಡ್ಡ ಪರಿಣಾಮ ಆಗೋದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.ಅದೆಲ್ಲಕ್ಕೂ ಮಿಗಿಲಾಗಿ ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸ್ತೇವೆಂದು ಸಣ್ಣ ಸೂಚನೆಯನ್ನೂ ಕೊಡದೆ ಮುಷ್ಕರ ಮಾಡುವ ಮೂಲಕ ರೋಗಿಗಳಿಗೆ ತೊಂದ್ರೆ ಮಾಡಿರುವ  ಇವರ ವಿರುದ್ದ ತಾವೇ ಮೆಡಿಕಲ್ ಕೌನ್ಸಿಲ್ ಗೆ ದೂರು ನೀಡೋದಾಗಿ ಡೀನ್ ವಿವರಿಸಿದ್ದಾರೆ.

ಇವರ ಯೋಗ್ಯತೆಗೆ ರಕ್ಷಣೆ ಬೇಕಂತೆ..ಮಾಡಿರೋದೇ ಅಕ್ಷಮ್ಯ..ರೋಗಿಗಳ ಬದುಕಲ್ಲಿ ಚೆಲ್ಲಾಟವಾಡುವ ಮೂಲಕ ಅವರು ಅಂಧತ್ವಕ್ಕೆ ಸಿಲುಕುವಂತೆ ಮಾಡಿರೋದೇ ಘನಘೋರ ತಪ್ಪು.ಅದನ್ನು ಪ್ರಶ್ನಿಸಲೇ ಬಾರದಾ..ಪ್ರಶ್ನಿಸಲು ಹೋದ್ರೆ ಅದನ್ನು ಹಲ್ಲೆ-ದೌರ್ಜನ್ಯ ಎಂದು ಬಿಂಬಿಸುವುದು ಎಷ್ಟು ಸರಿ.ಅದಲ್ದೇ ಹಲ್ಲೆ ಮಾಡಿರೋದು ಖಚಿತನಾ ಎಂದು ಕೇಳಿದ್ರೆ ಅದಕ್ಕೆ ಸಮರ್ಪಕ ಉತ್ತರವಿಲ್ಲ.ಹೋಗ್ಲಿ,ಹಲ್ಲೆಗೊಳಗಾಗಿದ್ದಾರೆನ್ನಲಾದ ಆ ಮಹಿಳಾ ವೈದ್ಯೆಯನ್ನು ಕರೆತನ್ನಿ ಎಂದ್ರೆ ಅವರಿಗೆ ಮಾತ್ನಾಡಲು ಮೂಡಿಲ್ಲ ಬಿಡಿ..ಸಾರ್ ಎಂದು ಮಾದ್ಯಮದವರನ್ನು ಪ್ರಶ್ನಿಸ್ತಾರೆಂದ್ರೆ ಈ ಟ್ರೈನಿ ಡಾಕ್ಟರ್ಸ್ ಗೆ ಇರುವ ಅಹಂಕಾರ-ಸೊಕ್ಕು ಎಷ್ಟಿರಬೇಕು.

ಹಲ್ಲೆ ಆರೋಪಕ್ಕೆ ತುತ್ತಾಗಿರುವ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ
ಹಲ್ಲೆ ಆರೋಪಕ್ಕೆ ತುತ್ತಾಗಿರುವ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ

ಸಚಿವರ ಹೊಣೆಗೇಡಿತನದ ಹೇಳಿಕೆ: ವಾಸ್ತವ ಅರ್ಥ ಮಾಡಿಕೊಳ್ಳದೆ   ವೈದ್ಯರು ಮುಷ್ಕರ  ಮಾಡಿದ್ದೇ ಸರಿ ಎನ್ನುವ ಸಮರ್ಥನೆಗೆ ಬಂದು ಹೇಳಿಕೆ ಕೊಡುವುದು ಒಬ್ಬ ಜವಾಬ್ದಾರಿಯುತ ಸಚಿವರಾಗಿ ಡಾ.ಅಶ್ವತ್ಥನಾರಾಯಣ ಅವರಿಗೆ ಶೋಭೆ ತರುವಂತದ್ದಲ್ಲ.

ಹಲ್ಲೆ ಆಗಿದೆ ಎನ್ನುವುದಕ್ಕೆ ಯಾವುದೇ ಸ್ಪಷ್ಟ ಪುರಾವೆ ನೀಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿರುವ ಟ್ರೈನಿ ವೈದ್ಯರ ಹೇಳಿಕೆಯನ್ನೇ ನಂಬಿ ಕರವೇ ಕ್ರಮವನ್ನು ಖಂಡಾತುಂಡವಾಗಿ ಖಂಡಿಸ್ತೇನೆಂದಿದ್ದು ಸರಿಯಲ್ಲ.ವೈದ್ಯೋ ನಾರಾಯಣ ಹರಿ ಎನ್ನುವ ಮಾತಿನಂತೆ ನಡೆದುಕೊಳ್ಳಬೇಕಿದ್ದವರೇ ಸೆಲ್ಯೂಷನ್ ಸಿಗ್ಲಿಕ್ಕೆ ಅವಕಾಶ ಇರುವ ಪ್ರಕರಣವನ್ನು ತಿರುಚಿ ಮುಷ್ಕರಕ್ಕೆ ಮುಂದಾಗಿದ್ದಕ್ಕೂ ಖಂಡನೆ ವ್ಯಕ್ತಪಡಿಸ್ಬೇಕಿತ್ತು.

20ಕ್ಕೂ ಹೆಚ್ಚು ರೋಗಿಗಳ ಬದುಕಲ್ಲಿ ಶಾಶ್ವತ ಅಂಧತ್ವ ಮೂಡಿಸಿದ  ವೈದ್ಯರ ವಿರುದ್ದ ತನಿಖೆಗೆ ಆದೇಶಿಸ್ಬೇಕಿತ್ತು.ಇದನ್ನು ಮಾಡ್ಲಿಕ್ಕೆ ಈಗಲೂ ಕಾಲ ಮಿಂಚಿಲ್ಲ.ಮಾಡಿರುವುದೇ ತಪ್ಪು,ಅದನ್ನು ಸರಿಪಡಿಸಿಕೊಳ್ಳೋದನ್ನು ಬಿಟ್ಟು ಕ್ಷುಲ್ಲಕ ಕಾರಣವನ್ನು ದೊಡ್ಡದು ಮಾಡಿ ವೈದ್ಯಕೀಯ ಸೇವೆಯನ್ನು ಬುಡಮೇಲುಗೊಳಿಸುವ ಅಧಿಕಾರವನ್ನು ಇವರಿಗೆ ಕೊಟ್ಟವರ್ಯಾರು..ಇದನ್ನು ಪ್ರಶ್ನಿಸೋರು ಯಾರು ಶನಿವಾರ ಆದ ವೈದ್ಯಕೀಯ ನಷ್ಟ ತುಂಬಿಕೊಡೋರು ಯಾರು ಸಚಿವ್ರೇ.

Spread the love
Leave A Reply

Your email address will not be published.

Flash News