ಆ “ಮಾಜಿ ಸಚಿವ”ನಿಗೆ ಸಾಲ ಕೊಟ್ಟಾಕೆಯೇ ಆತ್ಮಹತ್ಯೆಗೆ ಶರಣು.

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಬ್ಯೂರೋ)

ಅಂಜನಾ ಶಾಂತವೀರ
ಅಂಜನಾ ಶಾಂತವೀರ
ಮಾಜಿ ಸಚಿವ ಬಾಬುರಾವ್ ಚಿಂಚನಸೂರ್
ಮಾಜಿ ಸಚಿವ ಬಾಬುರಾವ್ ಚಿಂಚನಸೂರ್
ಆತ್ಮಹತ್ಯೆಗೆ ಶರಣಾದ ಅಂಜನಾ
ಆತ್ಮಹತ್ಯೆಗೆ ಶರಣಾದ ಅಂಜನಾ

ಬೆಂಗಳೂರು: ಕಾಂಗ್ರೆಸ್ ಸರ್ಕಾರವಿದ್ದಾಗ ಸದಾ ಸುದ್ದಿಗಳಿಂದ್ಲೇ ವಿವಾದಕ್ಕೆ ಈಡಾಗಿ ಶೋಕಿಲಾಲ ಮಂತ್ರಿ ಎಂದೇ ಕರೆಯಿಸಿಕೊಂಡಿದ್ದವರು ಬಾಬುರಾವ್ ಚಿಂಚನಸೂರ್.ಕೆಲಸ ಮಾಡಿದ್ರೋ ಬಿಟ್ರೋ ಗೊತ್ತಿಲ್ಲ,ಮೈ ತುಂಬಾ ಸೆಂಟ್ ಹೊಡ್ಕಂಡ್ ಝರಿ..ಝರಿ ಜುಬ್ಬಾದಲ್ಲಿ  ಒಂದಷ್ಟು ನೋಟಿಟ್ಟುಕೊಂಡು ಕೇಳಿದೋರಿಗೆಲ್ಲಾ ಕೊಡ್ತಾ ಬರ್ತಿದ್ದ ಚಿಂಚನಸೂರ್  ಬಗ್ಗೆ ರಂಗುರಂಗಿನ ಕಥೆಗಳಿವೆ.ಆದ್ರೀಗ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿಕೊಂಡಿರುವ ಚಿಂಚನಸೂರ್ ಹೆಸ್ರು ಮತ್ತೆ ಮುನ್ನಲೆಗೆ ಬಂದಿದೆ.

ಇದಕ್ಕೆ ಕಾರಣ ಆ ಮಹಿಳೆ.ಚಿಂಚನಸೂರ್ ವಿರುದ್ಧ ವಂಚನೆಯ ಪ್ರಕರಣ ದಾಖಲಿಸಿದ್ದ ಅಂಜನಾ ಶಾಂತವೀರ ಎನ್ನುವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಬಾಬುರಾವ್ ಚಿಂಚನಸೂರ್ ಗೆ 11 ಕೋಟಿ ಸಾಲ ನೀಡಿದ್ದ ಅಂಜನಾ ತನಗೆ ಮಂತ್ರಿ ಮೋಸ ಮಾಡಿದ್ದಾರೆಂದು ದೂರು ನೀಡಿ ಸುದ್ದಿಯಾಗಿದ್ದರು.

ಅದೇ ಅಂಜನಾ ಬೆಂಗಳೂರಿನ ಚಂದ್ರ ಲೇ ಔಟ್ ನಲ್ಲಿರುವ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.ಆತ್ಮಹತ್ಯೆಗೆ ಯತ್ನಿಸುವ ಮುನ್ನ ತನ್ನ ಮಗನಿಗೆ ಫೋನ್ ಮಾಡಿ ನಾನು ತುಂಬಾ ಆರ್ಥಿಕ ಸಂಕಷ್ಟದಲ್ಲಿದ್ದೇನೆ.ಬದುಕಲು ಮನಸಿಲ್ಲ.ಕೋರ್ಟ್ ನಲ್ಲಿ ಹಾಕಿರುವ ಕೇಸ್ ಇತ್ಯರ್ಥವಾಗಿಲ್ಲ.ಹಾಗಾಗಿ ಬದುಕಲು ಆಗ್ತಿಲ್ಲ ಎಂದು ಫೋನ್ ನಲ್ಲಿ ಹೇಳಿ ನೇಣಿಗೆ ಶರಣಾಗಿದ್ದಾರೆನ್ನಲಾಗಿದೆ. ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಆದ್ರೆ ಪ್ರಕರಣ ಬೆಳಕಿಗೆ ಬಾರದಂತೆ ಶುಕ್ರವಾರವೇ ಅಂತ್ಯ ಸಂಸ್ಕಾರ ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

Spread the love
Leave A Reply

Your email address will not be published.

Flash News