ಮಾಜಿ ಎಂಪಿ ವಿಜಯಶಂಕರ್ ಬಿಜೆಪಿಗೆ “ಘರ್ ವಾಪ್ಸಿ”

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಮೈಸೂರು ಬ್ಯೂರೋ)

ಬೆಂಗಳೂರು/ಮೈಸೂರು: ಹಳೇ ಮೈಸೂರು ಪ್ರಾಂತ್ಯದ ಸಂಭಾವಿತ ರಾಜಕಾರಣಿ ಎಂದೇ ಹೆಸರಾದ  ಸಿ.ಎಚ್. ವಿಜಯಶಂಕರ್ ಮತ್ತೆ ಮರಳಿ ಬಿಜೆಪಿ ಗೂಡಿಗೆ ಸೇರಲಿದ್ದಾರೆ.ಇದೇ ನವೆಂಬರ್ 5 ಅಂದ್ರೆ ನಾಳೆ ಬಿಜೆಪಿಗೆ ಅಧೀಕೃತವಾಗಿ ಸೇರ್ಪಡೆಯಾಗಲಿದ್ದಾರೆ.ಅವರ ಜೊತೆ ಅವರ ಅಪಾರ ಸಂಖ್ಯೆಯ ಬೆಂಬಲಿಗರು ಕೂಡ ಬಿಜೆಪಿ ಸೇರಲಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿ ಸೋಲನ್ನು ಅನುಭವಿಸಿದ್ದ ವಿಜಯಶಂಕರ್ ತಮ್ಮ ಸೋಲಿಗೆ ಕೈ ಪಕ್ಷದ ಆಂತರಿಕ ಕಿತ್ತಾಟವೇ ಕಾರಣ ಎನ್ನುವುದನ್ನು ಅಂತಿಮವಾಗಿ ಮನಗಂಡಿದ್ದರು.ಅಷ್ಟೇ ಅಲ್ಲ,ಅಂದೇ ತಮ್ಮ ಅಸಮಾಧಾನವನ್ನು ಹೊರಗೆ ಹಾಕಿ,ಕೈ ಪಕ್ಷದವರ ಆಕ್ರೋಶಕ್ಕೆ ತುತ್ತಾಗಿದ್ದರು.

ಬಿಜೆಪಿ ಪಕ್ಷದಿಂದ ಸಂಸದರಾಗಿ,ಎಮ್ಮೆಲ್ಸಿಯಾಗಿ ಒಮ್ಮೆ ಸಚಿವರಾಗಿಯೂ ಕೆಲಸ ಮಾಡಿರುವ ವಿಜಯಶಂಕರ್ ತಮಗೆ ಮಾತೃಪಕ್ಷವೇ ಸೂಕ್ತ ಎನ್ನುವ ಸತ್ಯ ಅರಿತ ಹಿನ್ನಲೆಯಲ್ಲಿ ಅವರು ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದರು.ಇದಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ ಹಿನ್ನಲೆಯಲ್ಲಿ ನಾಳೆ ಪಕ್ಷ ಸೇರ್ಪಡೆಯಾಗಲಿದ್ದಾರೆ.ಸಿಎಂ ಯಡಿಯೂರಪ್ಪ,ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,ಸಚಿವರ ಉಪಸ್ಥಿತಿಯಲ್ಲಿ ವಿಜಯಶಂಕರ್ ತಮ್ಮ ಅಪಾರ ಬೆಂಬಲಿಗರ ಸಮೇತ ಬಿಜೆಪಿಗೆ ಘರ್ ವಾಪ್ಸಿಯಾಗಲಿದ್ದಾರೆ.

Spread the love
Leave A Reply

Your email address will not be published.

Flash News