ಝೋಮ್ಯಾಟೋ-ಹೊಟೇಲ್ ಸಿಬ್ಬಂದಿ ನಡುವೆ ಮಾರಾಮಾರಿ.

0

(ಕನ್ನಡ ಫ್ಲಾಶ್ ನ್ಯೂಸ್ ಕ್ರೈಮ್ ಬ್ಯೂರೋ)

ಬೆಂಗಳೂರು: ಝೋಮ್ಯಾಟೋ ಆಹಾರ ಪೂರೈಕೆ ಸಿಬ್ಬಂದಿಯ ಆಟಾಟೋಪ ಹೆಚ್ಚಾಯ್ತು ಎನ್ಸುತ್ತೆ.ಹಾಗಾಗಿನೇ ಎಲ್ಲೆಂದ್ರಲ್ಲಿ ಹೊಡಿಬಡಿ ಸಂಸ್ಕ್ರತಿಯನ್ನು ಪ್ರದರ್ಶಿಸ್ತಾ ಬಂದಿದ್ದಾರೆ.ಅಂತದ್ದೇ ಒಂದು ಘಟನೆ ಬೆಂಗಳೂರಿನ ಹೆಬ್ಬಾಳದ ಬಳಿಯ ತ್ರೀಪ್ಸಿ ರೆಸ್ಟೋರೆಂಟ್ ನಲ್ಲಿ ನಡೆದಿದೆ.

ಕೊಟ್ಟ ಅರ್ಡರ್ ಗೆ ಆಹಾರ ಪೂರೈಸೋದು ಲೇಟಾಯ್ತು ಅಂತಾ ವ್ಯಗ್ರಗೊಂಡು 20 ಕ್ಕೂ ಹೆಚ್ಚು ಜೊಮ್ಯಾಟೋ ಸಿಬ್ಬಂದಿ ಹೊಟೇಲ್ ಸಿಬ್ಬಂದಿ ಯ ಮೇಲೆ ಹಲ್ಲೆ ನಡೆಸಿದ್ದಾರೆ.ತ್ರೀಪ್ಸಿ ರೆಸ್ಟೋರೆಂಟ್ ಗೆ ಊಟ ಅರ್ಡರ್ ಕೊಟ್ಟಿದ್ದ ಜಮೋಟೋ ಸಿಬ್ಬಂದಿ ಅರ್ಧ ಗಂಟೆಯಾದ್ರೂ ಕೊಟ್ಟ ಆರ್ಡರ್ ಬರಲಿಲ್ಲ. ಈ ಬಗ್ಗೆ ಕೇಳಿದಾಗ ಸ್ವಲ್ಪ ವೇಟ್ ಮಾಡಿ ಅಂದಿದ್ದಾರೆ.ಅಷ್ಟೇ ನೋಡಿ,ಕಿರಣ್ ಮತ್ತು ರಾಜಶೇಖರ್ ಎಂಬುವವರಿಗೆ ಚೆನ್ನಾಗಿ ಥಳಿಸಿದ್ದಾರೆ.ಸಾಲದ್ದಕ್ಕೆ ಊಟ ಕೊಟ್ಟಿಲ್ಲ ಅಂತಾ ಕಿಚನ್ ಒಳಗೆ ಹೋಗಿ ಗಲಾಟೆ ‌ಮಾಡಿದ್ದಾರೆ.ಒಂದರ್ಧ ಗಂಟೆಯಲ್ಲೇ ಸುತ್ತಮುತ್ತಲಿದ್ದ 20 ಜನರನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ. ಎರಡು ಕಡೆಯವರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಸಿದ್ದಾರೆ.

Spread the love
Leave A Reply

Your email address will not be published.

Flash News