ಬಸ್ ನಲ್ಲೇ ಬಂದು ಅಧಿಕಾರ ಸ್ವೀಕಾರ:ನೂತನ ಅಧ್ಯಕ್ಷರ ಗಿಮಿಕ್!

0

ಬೆಂಗಳೂರು:ಇದು ಸರಳತೆನೋ…ಅಥವಾ ಶೋ ಅಪ್ಪೋ ಒಂದೂ ಗೊತ್ತಾಗ್ತಿಲ್ಲ..ಆದ್ರೆ ವಿಭಿನ್ನ ಕಾರಣಕ್ಕೆ ಗಮನ ಸೆಳೆದ ಸುದ್ದಿಯಂತೂ ಹೌದು.
ಈ ಹಿಂದೆ ಬಿಎಂಟಿಸಿ ಅಧ್ಯಕ್ಷರಾದವರು ತಮ್ಮ ಸ್ವಂತ ಕಾರುಗಳಲ್ಲಿ ಬಂದು ಅಧಿಕಾರ ಸ್ವೀಕರಿಸುತ್ತಿದ್ದರು.ಆದ್ರೆ ಫಾರ್ ಎ ಚೇಂಜ್ ಬಿಎಂಟಿಸಿ ನೂತನ‌ ಅಧ್ಯಕ್ಷ ಹಾಗೂ ಕೆ.ಆರ್ ಪುರಂ ಕ್ಷೇತ್ರದ ಮಾಜಿ ಶಾಸಕ ನಂದೀಶ್ ರೆಡ್ಡಿ

ಬಿಎಂಟಿಸಿ ಬಸ್ಸನ್ನು ಸ್ವಂತ ಖರ್ಚಿನಲ್ಲೇ ಬುಕ್ ಮಾಡಿ ಕಚೇರಿಗೆ ಆಗಮಿಸಿದರು.ಅವರಿಗೆ ಕಾರ್ಯಕರ್ತರು ಸಾಥ್ ಕೊಟ್ಟರು.

ನಂದೀಶ್ ರೆಡ್ಡಿ ಅವರು ಬಿಎಂಟಿಸಿ ಅಧ್ಯಕ್ಷರಾಗಿ ಸ್ವೀಕರಿಸುತ್ತಿರುವ ಬಗ್ಗೆ ಅವರ ಕಾರ್ಯಕರ್ತರಲ್ಲೇ ಅಸಹನೆ ಹಾಗೂ ಆಕ್ರೋಶ ಮೂಡಿಸಿದೆ.ಕೆ.ಆರ್ ಪುರಂ ಬಿಜೆಪಿ ಟಿಕೆಟನ್ನು ಭೈರತಿ ಬಸವರಾಜ್ ಗೆ ಬಿಟ್ಟು ಕೊಡುವ ಹಿನ್ನಲೆಯಲ್ಲಿ ನಂದೀಶ್ ರೆಡ್ಡಿಯವರನ್ನು ಸಮಾಧಾನಪಡಿಸುವ ಹಿನ್ನಲೆಯಲ್ಲಿ ಬಿಎಂಟಿಸಿ ಅಧ್ಯಕ್ಷ ಸ್ಥಾನದ ಆಮಿಷ ಒಡ್ಡಲಾಗಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

#Kannadaflashnews #KannadaNews #BMTC #newchairman #nandishreddy #takecharge #travelbybmtcbus

Spread the love
Leave A Reply

Your email address will not be published.

Flash News