ಬಂಡೀಪುರದಲ್ಲಿ “ರೋರಿಂಗ್ ಸ್ಟಾರ್” ಶ್ರೀಮುರುಳಿ

0

ಮೈಸೂರು/ಬಂಡೀಪುರ: ವನ್ಯಜೀವಿ ಸಂರಕ್ಷಿಸಿ ಅಭಿಯಾನದಡಿ ಸ್ಯಾಂಡಲ್ ವುಡ್ ನ ರೋರಿಂಗ್ ನಟ ಶ್ರೀಮುರಳಿ ಹಾಗೂ ತಂಡ ಬಂಡೀಪುರ ಅರಣ್ಯಕ್ಕೆ ಭೇಟಿ ನೀಡಿತು.
ಬಂಡೀಪುರ ಅರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿ ರುವ ಅಲ್ಲಿನ ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳೊಂದಿಗೆ ಸಂವಾದ ನಡೆಸಿತು.
ನಂತರ ಬಂಡೀಪುರ ವಲಯದಲ್ಲಿನ ಕಳ್ಳಬೇಟೆ ತಡೆ ಶಿಬಿರಕ್ಕೆ ಭೇಟಿ ನೀಡಿ ಅರಣ್ಯಾಧಿಕಾರಿಗಳ ಕಾರ್ಯಾಚರಣೆ ಹೇಗೆ ನಡೆಯುತ್ತೆ ಎಂಬುದರ ಬಗ್ಗೆ ಮಾಹಿತಿ ಪಡೆದ್ರು.

ಬಳಿಕ ಕಾಡಂಚಿನ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ಕೊಟ್ಟು ಮಕ್ಕಳೊಂದಿಗೆ ಸಂವಾದ ನಡೆಸಿದ್ರು. ಎರಡು ದಿನಗಳ ಅಭಿಯಾನದಲ್ಲಿ ನಟ ಮುರುಳಿ ಭಾಗವಹಿಸುತ್ತಿದ್ದು ವನ್ಯಜೀವಿ ಸಂರಕ್ಷಿಸಿ ಅಭಿಯಾನದಲ್ಲಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ.

ಇದೇ ವೇಳೆ ನಿರ್ಮಾಪಕಿ ಶೃತಿ ನಾಯ್ಡು, ಬಂಡಿಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಹಾಗೂ ಇಲಾಖೆಯ ಸಿಬ್ಬಂದಿ, ಸ್ಥಳೀಯ ಜನಪ್ರತಿಗಳು ಹಾಜರಿದ್ದರು.
ಬಂಡೀಪುರ ಅರಣ್ಯದಲ್ಲಿ ಕಳೆದ ಕ್ಷಣಗಳು ತಮ್ಮ ಜೀವನದ ಅಮೂಲ್ಯ ಹಾಗೂ ರಸಮಯ ಕ್ಷಣಗಳು ಎಂದು ಮುರುಳಿ ಬಣ್ಣಿಸಿಕೊಂಡಿದ್ದಾರೆ.

#

Kannadaflashnews #KannadaNews Cinema #RoringstarSrimuruli #Bandipurwildlifesancury #wildlifecentre #sruthinaidu #Tbalachandra

Spread the love
Leave A Reply

Your email address will not be published.

Flash News