ಸ್ಪಾಟ್ ಫಿಕ್ಸಿಂಗ್ ಗೆ ಪ್ರತಿಭಾನ್ವಿತ ಕ್ರಿಕೆಟಿಗ ಗೌತಮ್..ಅಬ್ರಾರ್ ಘಾಸಿ ಬಲಿ…

0

(ಕನ್ನಡ ಫ್ಲ್ಯಾಶ್ ನ್ಯೂಸ್.ಕಾಂ ಸ್ಪೋರ್ಟ್ಸ್ ಬ್ಯೂರೋ)ಬೆಂಗಳೂರು:ಕ್ರಿಕೆಟ್ ಗೇಮೇ ಹಾಗೆ..ಒಂದೆರೆಡು ಪಂದ್ಯಗಳಲ್ಲಿ ಮಿಂಚಿದಾಕ್ಷಣ.. ನೇಮು..ಫೇಮು..ಹಣ..ಎಲ್ಲಾ ಬಂದ್ ಬಿಡುತ್ತೆ..ಹಾಗಂತ ಆ ಅಮಲಿನಲ್ಲಿ ಮೈ ಮರುತ್ರೆ ಏನಾಗುತ್ತೆ ಎನ್ನೋದ್ಕೆ ಹಲವು ಕ್ರಿಕೆಟಿಗರ ದುರಂತ ವೃತ್ತಾಂತವೇ ಸಾಕ್ಷಿಯಾಗುತ್ತೆ.
ಅಂತದ್ದೇ ದುರಂತಕ್ಕೆ ಸಾಕ್ಷಿಯಾಗಿದ್ದಾನೆ ಕರ್ನಾಟಕದ ಉದಯೋನ್ಮುಖ ಆಟಗಾರ ಗೌತಮ್.
ಯೆಸ್,ಬೆಂಗಳೂರು ತಂಡದ ವಿರುದ್ದದ ಪಂದ್ಯದ ವೇಳೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಎಂ ಗೌತಮ್ ಪ್ರಮುಖ ಆರೋಪಿಯಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.KPL ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿಎಂ ಗೌತಮ್ ಹಾಗೂ ಅಬ್ರರ್ ಘಾಸಿ ಅವರನ್ನು ಬಂಧಿಸಲಾಗಿದೆ.
ಬಳ್ಳಾರಿ‌ ತಂಡ ಅಟದ ವೇಳೆ
ನಿಧಾನಗತಿಯ ಬ್ಯಾಟಿಂಗ್ ಮಾಡುವುದಾಗಿ ಬುಕ್ಕಿಗಳ ಬಳಿ 20 ಲಕ್ಷ ಪಡೆದ ಪ್ರಕರಣವೇ ಇದೀಗ ಇಬ್ಬರು ಪ್ರತಿಭಾನ್ವಿತ ಆಟಗಾರರಿಗೆ ಮುಳುವಾಗಿದೆ.
ಕರ್ನಾಟಕದ ಪರವಾಗಿ ರಣಜಿ, ಐಪಿಎಲ್ ನಲ್ಲಿ ಮುಂಬೈ, ಆರ್ ಸಿ ಬಿ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದ ಸಿಎಂ ಗೌತಮ್ ನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡುಸುತ್ತಿದ್ದಾರೆ.
ಗೌತಮ್ ಜೊತೆ ಕರ್ನಾಟಕ ತಂಡದ ಮತ್ತೊಬ್ಬ ರಣಜಿ ಆಟಗಾರ ಅಬ್ರರ್ ಘಾಸಿ ಕೂಡ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಸಿಎಂ ಗೌತಮ್ ಹಿನ್ನಲೆ:ಗೌತಮ್ ಅಲಿಯಾಸ್
ಚಿದಂಬರಂ ಮುರುಳೀದರನ್ ಗೌತಮ್.ಮೂಲತಃ ಬೆಂಗಳೂರಿನವರು.
ಒಂದು ಕಾಲದ ಕರ್ನಾಟಕ ತಂಡದ ಪ್ರಮುಖ ಬ್ಯಾಟ್ಸಮನ್ ಆಗಿದ್ದ ಗೌತಮ್,ವಿಕೆಟ್ ಕೀಪರ್ ಆಗಿ ಗಮನ ಸೆಳೆದಿದ್ದ.ಇದಕ್ಕೆ ಆತನ ಟ್ರ್ಯಾಕ್ ರೆಕಾರ್ಡೇ ಸಾಕ್ಷಿ.
ಕರ್ನಾಟಕ ತಂಡದ ಪರ 94 ಪಂದ್ಯ ಆಡಿರುವ ಗೌತಮ್ ,94 ಪಂದ್ಯದಿಂದ 4716 ರನ್ ಕಲೆ ಹಾಕಿದ್ದ.ಇದರಲ್ಲಿ 10 ಶತಕ ಹಾಗೂ 24 ಅರ್ಧ ಶತಕಗಳಿವೆ.
ಸದ್ಯ ಕರ್ನಾಟಕ ಟೀಮ್ ತೊರೆದು,ಗೋವಾ ತಂಡದ ಪರ ರಣಜಿಯಲ್ಲಿ ಆಡುತ್ತಿರುವ ಗೌತಮ್,ವಿಕೆಟ್ ಕೀಪರ್ ಆಗಿಯೂ ಪ್ರಸಿದ್ಧರಾಗಿದ್ರು.
94 ಪಂದ್ಯದಿಂದ 296 ಕ್ಯಾಚ್ ಹಿಡಿದಿದ್ರು.
ಇನ್ನು 58 ಲಿಸ್ಟ್ ಎ ಕ್ರಿಕೆಟ್ ಪಂದ್ಯಗಳ ಪೈಕಿ,40 ಟ್ವಿಂಟಿ-20 ಪಂದ್ಯಾವಾಡಿ,ಫಸ್ಟ್ ಕ್ಲಾಸ್ ಕ್ರಿಕೆಟ್ ನಲ್ಲಿ 264 ರನ್ ಗಳಿಸಿ ಅಜಯರಾಗಿ ಉಳಿದಿದ್ದರು. ಕರ್ನಾಟಕ ತಂಡದ ಪರ ಅತ್ಯಧಿಕ ರನ್ ಗಳಿಸಿದ್ದ ಕೀರ್ತಿಯೂ ಗೌತಮ್‌ ದ್ದು.ರಣಜಿಯಲ್ಲಿ ಉತ್ತಮ ಬ್ಯಾಟ್ಸಮನ್ ಕಂ ವಿಕೆಟ್ ಕೀಪರ್ ಆಗಿದ್ದ ಗೌತಮ್
2012 -13 ಸಾಲಿನ ರಣಜಿ ಪಂದ್ಯದಲ್ಲಿ ಎರಡನೇ ಅತ್ಯಧಿಕ ಸ್ಕೋರ್ ಮಾಡಿದ್ರು.
ಎಲ್ಲಾ ಪಂದ್ಯಗಳಿಂದ 943 ರನ್ ಗಳಿಸಿದ್ರು.ಆ ಸೀಸನ್ ನ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ರು.ಕಿಪಿಂಗ್ ನಲ್ಲಿ ಕೈಚಳಕ ತೋರಿ 34 ಕ್ಯಾಚ್ ಪಡೆದಿದ್ರು.
“ಇಂಡಿಯಾ ಎ” ಟೀಮ್ ನಲ್ಲೂ ಕಾಣಿಸಿಕೊಂಡಿದ್ದ ಗೌತಮ್ ,ಆಸ್ಟ್ರೇಲಿಯಾದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡಿದ್ದರು.
ಒಳ್ಳೆಯ ಫಾರ್ಮ್ ನಲ್ಲಿದ್ದ ಗೌತಮ್ ಹಣದಾಸೆಗೆ ಬಲಿಬಿದ್ದು ಫಿಕ್ಸಿಂಗ್ ನಲ್ಲಿ ಸಿಕ್ಕಾಕೊಂಡು ಕ್ರಿಕೆಟ್ ಗೆ ಕಳಂಕ ಮೆತ್ತಿದ್ದಾರಲ್ಲದೇ ವೃತ್ತಿ ಬದುಕನ್ನೂ ಹಾಳ್ ಮಾಡ್ಕೊಂಡಿದ್ದಾರೆ.

Spread the love
Leave A Reply

Your email address will not be published.

Flash News