ಅವಹೇಳನಕಾರಿ ಪೋಸ್ಟ್ ಮಾಡಿ ಜೈಲು ಪಾಲಾದ RSS ಕಾರ್ಯಕರ್ತ

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಬ್ಯೂರೋ)

ಬೆಂಗಳೂರು:ಆರ್ ಎಸ್ ಎಸ್ ಹಿನ್ನಲೆಯ ಕಾನೂನ ು  ವಿದ್ಯಾರ್ಥಿಯೋರ್ವನನ್ನು ಅವಹೇಳನಕಾರಿ ಕಾಮೆಂಟ್ ಪೋಸ್ಟ್ ಆರೋಪದಲ್ಲಿ ಅರೆಸ್ಟ್ ಮಾಡಲಾಗಿದೆ.ಆರ್ ಆರ್ ನಗರ ಕ್ಷೇತ್ರದ ಕೈನ  ಅನರ್ಹ ಶಾಸಕ ಮುನಿರತ್ನ ಹಾಗೂ ಹಾಲಿ ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಅವಹೇಳನಕಾರಿಯಾಗುವಂಥ ರೀತಿಯಲ್ಲಿ ಪೋಸ್ಟ್-ಕಾಮೆಂಟ್ ಹಾಕಿದ್ದರ ಹಿನ್ನಲೆಯಲ್ಲಿ ಚಂದನ್ ಎನ್ನುವನನ್ನು ಬಂಧಿಸಲಾಗಿದೆ.ಸಾಮಾಜಿಕ ಕಾರ್ಯಕರ್ತನೂ ಆಗಿರುವ ಚಂದನ್ ಆರ್ ಎಸ್ ಎಸ್ ಪರವಾಗಿ ದೊಡ್ಡ ಮಟ್ಟದ ಆಂದೋಲನವನ್ನೇ ನಡೆಸ್ತಾ ಬಂದಿದ್ದ.ಆದರೆ ಈ ನಡುವೆ ಅಂದ್ರೆ ಆಗಸ್ಟ್ 28 ಮತ್ತು 29ರಂದು ಮುನಿರತ್ನ ಮತ್ತು ಸಚಿವ ಅಶೋಕ್ ವಿರುದ್ಧ “ಕೇಸರಿ ನೋಡಿ ಅಶೋಕ ಸಾಮ್ರಾಟನಿಗೆ ಧರ್ಮವೇ ಜೀವನ ಅಂದುಕೊಂಡೆ ಈ ನಡುವೆ ಮನಿ ರತ್ನವೇ ಜೀವನ ಆಗಿದೆ.ಅಶೋಕ ಸಾಮ್ರಾಟನಾಗಿದ್ದು ಕುತಂತ್ರ ಬುದ್ದಿಯಿಂದಲ್ಲ,ತನ್ನ ಧರ್ಮ ನಿಷ್ಠೆ ಪಾಲನೆಯಿಂದ!”ಎನ್ನುವ ಹೇಳಿಕೆಯ ಪೋಸ್ಟ್ ಮಾಡಿದ್ದ.

ಇದರಿಂದ ವ್ಯಕ್ತಿಗತವಾಗಿ ಅಷ್ಟೇ ಅಲ್ಲ ಪಕ್ಷಕ್ಕೂ ಡ್ಯಾಮೇಜ್ ಆಗಿದೆ ಎಂದು ಬಿಜೆಪಿ ಕಾರ್ಯಕರ್ತ ಧನಂಜಯ್ ಎನ್ನುವವರು ಸೈಬರ್ ಕ್ರೈಮ್ ಗೆ ದೂರು ನೀಡಿದ್ರು.ಚುನಾವಣೆಯಲ್ಲಿ ಬಿಜೆಪಿ ಪರ ಥರ್ಡ್ ಪಾರ್ಟಿ ಕ್ಯಾಂಪೇನ್ ಮಾಡಿದ್ದ ಚಂದನ್ ಅವರನ್ನು ಬೆಂಗಳೂರು ನಗರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆಗಿರುವ ಧನಂಜಯ್ ಅವರ  ದೂರಿನ ಹಿನ್ನಲೆಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

 

Spread the love
Leave A Reply

Your email address will not be published.

Flash News